
ಮುಂಬೈ: ದೇಶದ ಆಗರ್ಭ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಕುಟುಂಬ ಮತ್ತು ವ್ಯವಹಾರದ ಕುರಿತ ಯಾವುದೇ ವಿಷಯವಾದ್ರೂ ದೊಡ್ಡಮಟ್ಟದಲ್ಲಿಯೇ ಸದ್ದು ಮಾಡುತ್ತದೆ. ಅದರಲ್ಲಿಯೂ ನವದಂಪತಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಣ್ಣ ಝಲಕ್ ಇರೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗುತ್ತವೆ. ಇದೀಗ ಅಂಬಾನಿ ಕುಟುಂಬದ ಕಿರಿಯ ಸೊಸೆ, ಅನಂತ್ ಮಡದಿ ರಾಧಿಕಾ ಮರ್ಚೆಂಟ್ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪೈಲಟ್ ಜೊತೆ ರಾಧಿಕಾ ಮಾತನಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ರಾಧಿಕಾ ಮರ್ಚೆಂಟ್ ತಮ್ಮ ಪ್ರೈವೇಟ್ ಫ್ಲೈಟ್ ಇಳಿದು ಬರುತ್ತಿರುವ ವಿಡಿಯೋ ಟ್ರೆಂಟ್ ಆಗುತ್ತಿದೆ. ವಿಮಾನ ಇಳಿದು ಹೊರಡುತ್ತಿರುವ ರಾಧಿಕಾ ಅವರ ಬಳಿ ಬರುವ ಪೈಲಟ್ ಏನೋ ಹೇಳುತ್ತಿರೋದನ್ನು ಗಮನಿಸಬಹುದು. ಈ ವಿಡಿಯೋದಲ್ಲಿ ರಾಧಿಕಾ ಕೋಪಗೊಂಡಂತೆ ಕಾಣಿಸುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಆದ್ರೆ ಇಬ್ಬರ ಮಧ್ಯೆ ಏನು ಸಂಭಾಷಣೆ ನಡೆದಿದೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.
ಈ ವಿಡಿಯೋದಲ್ಲಿ ರಾಧಿಕಾ ಮರ್ಚೆಂಟ್ ಹಾವಭಾವ ಗಮನಿಸಿದ್ರೆ ಯಾವುದೋ ವಿಚಾರಕ್ಕೆ ಮುನಿಸಿಕೊಂಡಂತೆ ಕಂಡು ಬರುತ್ತಿದೆ. ಯಾವುದೋ ವಿಷಯದ ಬಗ್ಗೆ ಪೈಲಟ್ ಸ್ಪಷ್ಟನೆ ನೀಡಲು ಪ್ರಯತ್ನಿಸುತ್ತಿರುವಂತೆ ಕಾಣಿಸಬಹುದು. ಇದೀಗ ಈ ಚಿಕ್ಕ ವಿಡಿಯೋ ಪಾದರಸದಂತೆ ವೈರಲ್ ಆಗುತ್ತಿದೆ. ಅಂಬಾನಿ ಕುಟುಂಬದ ಕಿರಿ ಸೊಸೆಯ ಅಸಲಿ ಮುಖ ಇದೇ ಇರಬಹುದು ನೋಡಿ. ಕ್ಯಾಮೆರಾಗಳ ಮುಂದೆ ಸದಾ ನಗುತ್ತಾ ಕಾಣಿಸುವ ರಾಧಿಕಾ ಮರ್ಚೆಂಟ್ ಅವರ ನೈಜತೆ ಇಲ್ಲಿದೆ ಎಂದು ಕಮೆಂಟ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಮತ್ತೆ ಸೊಸೆ ಹೆಗಲ ಮೇಲೆ ಕೈ ಹಾಕಿದ ಮುಖೇಶ್ ಅಂಬಾನಿ, ಸಮ್ ಥಿಂಗ್ ರಾಂಗ್ ಎನ್ನುತ್ತಿದ್ದಾರೆ ನೆಟ್ಟಿಗರು
ಇನ್ನು ಕೆಲವರು ಅದು ರಾಧಿಕಾ ಮರ್ಚೆಂಟ್ ಅವರ ಆಟಿಟ್ಯೂಡ್. ಭಾರತದ ಶ್ರೀಮಂತ ಕುಟುಂಬದ ಸೊಸೆಗೆ ಇಷ್ಟಾದ್ರೂ ಆಟಿಟ್ಯೂಡ್ ಇರಬೇಕು ಅಲ್ಲವಾ ಎಂದು ಫೈರ್ ಎಮೋಜಿ ಹಾಕಿ ಕಮೆಂಟ್ ಮಾಡಲಾಗುತ್ತಿದೆ. ಒಂದಿಷ್ಟು ಮಂದಿ ಯಾರಾದ್ರೂ ಲಿಪ್ ರೀಡರ್ ಇವರಿಬ್ಬರ ನಡುವೆ ಏನು ಸಂಭಾಷಣೆ ನಡೆದಿದೆ ಎಂಬುದನ್ನು ಹೇಳಬಲ್ಲಿರಾ ಎಂದು ಕೇಳಿದ್ದಾರೆ.
ಇತ್ತೀಚೆಗೆ ಗಣೇಶೋತ್ಸವ ಸಂದರ್ಭದಲ್ಲಿ ರಾಧಿಕಾ ಜೊತೆ ಮುಕೇಶ್ ಅಂಬಾನಿ ಅನುಚಿತವಾಗಿ ನಡೆದುಕೊಂಡಿರುವ ವಿಡಿಯೋ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಸೊಸೆ ರಾಧಿಕಾ ಸೊಂಟಕ್ಕೆ ಕೈ ಹಾಕಿದ್ದ ಮುಕೇಶ್ ಅಂಬಾನಿ ತಮ್ಮತ್ತ ಎಳೆದುಕೊಂಡಿದ್ದರು. ಮುಕೇಶ್ ಅಂಬಾನಿಯವರ ಈ ನಡೆ ಟೀಕೆಗೆ ಕಾರಣವಾಗಿತ್ತು. ಈ ವಿಡಿಯೋ ವೈರಲ್ ಬೆನ್ನಲ್ಲೇ ಬ್ಯಾಡ್ ಟಚ್ ಮತ್ತು ಗುಡ್ ಟಚ್ ಏನು ಎಂಬುದರ ಬಗ್ಗೆ ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಎಲ್ಲರಿಗೂ ರಾಧಿಕಾ ಸೊಂಟವೇ ಏಕೆ ಬೇಕು? ಮುಖೇಶ್ ನಂತ್ರ ಆಕಾಶ್ ವರ್ತನೆ ಟ್ರೋಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ