Jan 5, 2024, 12:07 PM IST
ಮಂಡ್ಯ ರಣಕಣದ ಚಿತ್ರಣವನ್ನೇ ಬಿಜೆಪಿ(BJP)-ಜೆಡಿಎಸ್ (JDS)ಮೈತ್ರಿ ಬದಲಿಸಿದಂತೆ ಕಾಣುತ್ತಿದೆ. ನಿಖಿಲ್ ಕುಮಾರಸ್ವಾಮಿ, ಎಚ್.ಡಿ. ಕುಮಾರಸ್ವಾಮಿ ಹೆಸರಿಗೆ ಕಾಂಗ್ರೆಸ್(Congress) ನಾಯಕರು ಥಂಡಾ ಹೊಡೆದಂತೆ ಕಾಣುತ್ತಿದೆ. ಮಂಡ್ಯ (Mandya)ಕಾಂಗ್ರೆಸ್ ಟಿಕೆಟ್ ರೇಸ್‌ನಲ್ಲಿದ್ದ ಆಕಾಂಕ್ಷಿಗಳು ಹಿಂದೇಟು ಹಾಕುತ್ತಿದ್ದಾರಂತೆ. ಇಷ್ಟು ದಿನ ಟಿಕೆಟ್‌ಗಾಗಿ ಸಾಲುಗಟ್ಟಿ ಸ್ಥಳೀಯ ಮುಖಂಡರು ನಿಂತಿದ್ದರು. ನಿಖಿಲ್, ಎಚ್ಡಿಕೆ ಹೆಸರು ಪ್ರಸ್ತಾಪ ಬಳಿಕ ಲೆಕ್ಕಾಚಾರ ಬದಲಾದಂತೆ ಕಾಣುತ್ತಿದೆ. ಸಭೆಯಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸದ ಸ್ಥಳೀಯ ಮುಖಂಡರು. ಲೋಕಸಭೆ (Loksabhe)ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧ ಪಡಿಸಲು ಸಭೆ ನಡೆದಿದೆ. ಮಂಡ್ಯ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ನೇತೃತ್ವದಲ್ಲಿ ಮೀಟಿಂಗ್ ನಡೆದಿದ್ದು, ಅಭ್ಯರ್ಥಿ ಆಯ್ಕೆ ಹೈಕಮಾಂಡ್ ನಿರ್ಧಾರಕ್ಕೆ ಬಿಡಲು ತೀರ್ಮಾನ ಮಾಡಲಾಗಿದೆ. ಯಾರಿಗೆ ಟಿಕೆಟ್ ಕೊಟ್ಟರು ಅವರ ಪರ ಕೆಲಸ ಮಾಡಲು ನಿರ್ಧರಿಸಲಾಗಿದೆಯಂತೆ. ವರಿಷ್ಠರೇ ಆಯ್ಕೆ ಮಾಡಿದ್ರೆ ಆರ್ಥಿಕವಾಗಿಯೂ ಸಹಕಾರ ಸಿಗಲಿದೆ.
ಇದನ್ನೂ ವೀಕ್ಷಿಸಿ: AYODHYA TRIP: ರಾಮಮಂದಿರ ಉದ್ಘಾಟನೆ ಸಂಭ್ರಮಿಸಲು ಕಮಲ ಪ್ಲಾನ್: ಅಯೋಧ್ಯಾ ಪ್ರವಾಸ ಬಿಜೆಪಿಯಿಂದಲೇ ಆಯೋಜನೆ!