Apr 13, 2023, 1:42 PM IST
ಹಾವೇರಿ (ಏ.13): ಹಾವೇರಿಯ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಟಿಕೇಟ್ ಮಿಸ್ ಆದ ಹಿನ್ನಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನೆಹರೂ ಓಲೆಕಾರ ಅವರು ನಾಳೆಯಿಂದ ನಮ್ಮ ರಾಜಕಾರಣದ ಮೂಲಕ, ತಾಕತ್ - ಧಮ್ ಅನ್ನು ಅವನಿಗೆ ತೋರಿಸುತ್ತೇವೆ ಎಂದು ಶಾಸಕ ನೆಹರೂ ಓಲೆಕಾರ್ ತಿಳಿಸಿದ್ದಾರೆ.
ಇಷ್ಟುದಿನ ಬಸವರಾಜ್ ಬೊಮ್ಮಾಯಿ ರಾಜಕಾರಣ ಇತ್ತು. ನಾಳೆಯಿಂದ ನಮ್ಮ ರಾಜಕಾರಣ ಶುರುವಾಗಲಿದೆ. ಅವನಿಗೆ ಯಾವ ರೀತಿ ಟಕ್ಕರ್ ಕೊಡ್ತೀವಿ ನೋಡಿ. ಸಿಎಂ ಬೊಮ್ಮಾಯಿಯನ್ನು ಚುನಾವಣೆಯಲ್ಲಿ ಗೆಲ್ಲೋಕೆ ಬಿಡಲ್ಲ. ಅವನ ಧಮ್ ತಾಕತ್ತು ತೋರಿಸಲಿ. ನಮ್ಮ ಜಿಲ್ಲೆ ಹಾಳು ಮಾಡುವ ದುರುದ್ದೇಶ ಅವನಿಗೆ ಇದೆ. ಎಲ್ಲಾ ಸೀಟು ನಾಶ ಆಗುತ್ತವೆ. ಪಕ್ಷ ಹಾಳು ಮಾಡ್ತಾ ಇದಾನೆ. ರಾಷ್ಟ್ರೀಯ ನಾಯಕರಿಗೆ ಸ್ವಲ್ಪ ದಿನದಲ್ಲಿ ಗೊತ್ತಾಗುತ್ತದೆ. ನನಗೆ ಟಿಕೇಟ್ ಮಿಸ್ ಆಗಲು ಬಸವರಾಜ್ ಬೊಮ್ಮಾಯಿ ಕಾರಣ. ಇವನ ನಾಟಕಕ್ಕೆ ತೆರೆ ಎಳೆಯುವೆ ಎಂದು ಹೇಳಿದರು.
ಯಡಿಯೂರಪ್ಪ 8 ದಿನ ಮೊಬೈಲ್ ಸ್ವಿಚ್ ಆಫ್ ಮಾಡಿದ್ರೆ ಬಿಜೆಪಿ 50 ಸೀಟನ್ನೂ ಗೆಲ್ಲೊದಿಲ್ಲ!
ಬೊಮ್ಮಾಯಿ ಹಗರಣ ಬಯಲಿಗೆಳೆಯುವೆನು. ತುಂತುರು ನೀರಾವರಿಗೆ 1,500 ಕೋಟಿ ಖರ್ಚು ಹಾಕಿದ್ದಾನೆ. ಅವನಿಗೆ ಬೇಕಾದವರಿಗೆ ಕಾಂಟ್ರಾಕ್ಟ್ ಕೊಟ್ಟಿದ್ದಾನೆ. ಒಂದು ಪೈಪು ಇಲ್ಲ, ಅಲ್ಲಿನ ರೈತರು ಒಂದು ಜೋಳ, ಅಕ್ಕಿ ಗೋದಿ ಏನೂ ಬೆಳೆಯೋದಕ್ಕೆ ಆಗಿಲ್ಲ. 1,500 ಕೋಟಿ ಗುಳುಂ ಮಾಡಿದ ಭಂಡ ಸಿಎಂ ಅವನು. ನಮ್ಮ ನಿರ್ಧಾರ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ತಗೊಳ್ತೇನೆ ಎಂದು ಹೇಳಿದರು.