ಸೆಟ್ ನಿರ್ಮಿಸೋ ನೆಪದಲ್ಲಿ ಅಲ್ಲಿದ್ದ ನೂರಾರು ಮರಗಳನ್ನ ಟಾಕ್ಸಿಕ್ ತಂಡ ಕಡಿದು ಹಾಕಿದೆ. ಈ ಬಗ್ಗೆ ವಕೀಲರೊಬ್ಬರು ದೂರು ಸಲ್ಲಿಸಿದ್ರು. ಇದೀಗ ಖುದ್ದು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಈ ಜಾಗಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದಾರೆ...
ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯ ಟಾಕ್ಸಿಕ್ ಸಿನಿಮಾತಂಡ ಬೆಂಗಳೂರಿನ ಹೆಚ್.ಎಂ.ಟಿ ಜಾಗ ಸೆಟ್ ನಿರ್ಮಿಸಿ ಶೂಟಿಂಗ್ ಮಾಡಿದೆ. ಆದ್ರೆ ಸೆಟ್ ಹಾಕಲಿಕ್ಕಾಗಿ ಟಾಕ್ಸಿಕ್ ಟೀಮ್ ನೂರಾರು ಮರಗಳ ಮಾರಣ ಹೋಮ ಮಾಡಿದೆಯಾ..? ರಾಕಿಭಾಯ್ ಪುಷ್ಪನಂತೆ ಪ್ರಕೃತಿ ನಾಶ ಮಾಡಿದ್ರಾ..? ಏನಿದು ಟಾಕ್ಸಿಕ್ ಸಿನಿಮಾದ ವಿವಾದ..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.
ಟಾಕ್ಸಿಕ್ ಟೀಮ್ಗೆ ಶುರುವಾಯ್ತು ಬಿಗ್ ಟ್ರಬಲ್..! ನೂರಾರು ಮರಗಳ ಮಾರಣಹೋಮ ಮಾಡಿದ್ರಾ ಯಶ್..?
ಯೆಸ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾಗೆ ಬಿಗ್ ಟ್ರಬಲ್ ಎದುರಾಗಿದೆ. ಬೆಂಗಳೂರಿನ ಎಚ್.ಎಂ,ಟಿ ಫ್ಯಾಕ್ಟರಿಗೆ ಸೇರಿದ ಜಾಗದಲ್ಲಿ ಸೆಟ್ ನಿರ್ಮಿಸಿದ್ದ ಟಾಕ್ಸಿಕ್ ಟೀಮ್ ಅಲ್ಲಿ ಒಂದು ತಿಂಗಳ ಕಾಲ ಶೂಟಿಂಗ್ ಮಾಡಿತ್ತು. ಒಳಗಿನಿಂದ ಒಂದೇ ಒಂದು ಫೋಟೋ ಕೂಡ ಲೀಕ್ ಆಗದಂತೆ ಗೌಪ್ಯವಾಗಿ ಚಿತ್ರೀಕರಣ ಮಾಡಲಾಗಿತ್ತು.
ದೀಪಾವಳಿ ಶುಭಾಶಯ ಹೇಳಿದ 'ಪುಷ್ಪಾ 2' ಟೀಮ್; ಬಿಡುಗಡೆಗೆ ಮುನ್ನ ಬೆಣ್ಣೆ ಸವರೋದಾ?
ಆದ್ರೆ ಸೆಟ್ ನಿರ್ಮಿಸೋ ನೆಪದಲ್ಲಿ ಅಲ್ಲಿದ್ದ ನೂರಾರು ಮರಗಳನ್ನ ಟಾಕ್ಸಿಕ್ ತಂಡ ಕಡಿದು ಹಾಕಿದೆ. ಈ ಬಗ್ಗೆ ವಕೀಲರೊಬ್ಬರು ದೂರು ಸಲ್ಲಿಸಿದ್ರು. ಇದೀಗ ಖುದ್ದು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಈ ಜಾಗಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದಾರೆ.
ಈ ಜಾಗದ ಸ್ಯಾಟ್ಲೈಟ್ ದೃಶ್ಯಗಳನ್ನ ತೆಗೆಸಿರೋ ಸಚಿವರೇ ಶಾಕ್ ಆಗಿದ್ದಾರೆ. ಮೊದಲು ಹಸಿರಿನಿಂದ ಕಂಗೊಳಿಸ್ತಾ ಇದ್ದ ಈ ಜಾಗವನ್ನ ಟಾಕ್ಸಿಕ್ ತಂಡ ಕಡಿದು ಬಟಾಬಯಲು ಮಾಡಿದೆ. ಈ ಫೋಟೊಗಳನ್ನ ಹಂಚಿಕೊಂಡಿರೋ ಅರಣ್ಯ ಸಚಿವರು ಟಾಕ್ಸಿಕ್ ಟೀಮ್ ಮೇಲೆ ಕ್ರಮಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ರಾಕಿಭಾಯ್ ಅಲ್ಲ ಪುಷ್ಪ..! ಪ್ರಕೃತಿ ಪ್ರಿಯರಿಂದ ಆಕ್ರೋಶ; ಅರಣ್ಯ ಇಲಾಖೆಯಿಂದ ನೊಟೀಸ್.. ಯಶ್ಗೂ ಸಂಕಷ್ಟ!
ಹೌದು, ರಾಕಿ ಭಾಯ್ ಮಾಡಿರೋ ಈ ಕೃತ್ಯವನ್ನ ನೋಡಿ ಪ್ರಕೃತಿ ಪ್ರಿಯರು ಬೇಸರ ವ್ಯಕ್ತಪಡಿಸ್ತಾ ಇದ್ದಾರೆ. ಶೂಟಿಂಗ್ ಕಾರಣಕ್ಕೆ ಹಲವಾರು ವರ್ಷಗಳಿಂದ ಬೆಳೆದುಕೊಂಡಿದ್ದ ನೂರಾರು ಮರಗಳನ್ನ ಕಡಿದುಹಾಕಿರೋದ್ರ ಬಗ್ಗೆ ಆಕ್ರೋಶಗೊಂಡಿದ್ದಾರೆ. ರಾಕಿಭಾಯ್ ಪುಷ್ಪನಂತೆ ಆಗಿಬಿಟ್ಟಿದ್ದಾನೆ ಅಂತ ಟೀಕೆ ಮಾಡ್ತಾ ಇದ್ದಾರೆ.
ನನಗೆ ಓದಲು ಹಾಗೂ ಬರೆಯಲು ಬರುವ ಏಕೈಕ ಭಾಷೆ ಕನ್ನಡ; ನಿಜ ಹೇಳಿದ್ಯಾಕೆ ನಿತ್ಯಾ ಮೆನನ್?
ಸದ್ಯ ಅರಣ್ಯ ಇಲಾಖೆ ಈ ಸಿನಿಮಾದ ನಿರ್ಮಾಪಕರು ಮತ್ತು ಮ್ಯಾನೇಜರ್ಗೆ ನೋಟೀಸ್ ಕೊಡೋದಕ್ಕೆ ಮುಂದಾಗಿದೆ. ಅಸಲಿಗೆ ಈ ಸಿನಿಮಾವನ್ನ ಕೆವಿಎನ್ ಸಂಸ್ಥೆ ಜೊತೆಗೂಡಿ ಯಶ್ ಕೂಡ ನಿರ್ಮಾಣ ಮಾಡ್ತಾ ಇದ್ದಾರೆ. ಸೋ ಯಶ್ಗೂ ಈ ನೊಟೀಸ್ ತಲುಪಲಿದೆ. ರಾಕಿಭಾಯ್ ತನಿಖೆ ಎದುರಿಸಬೇಕಿದೆ. ಅಷ್ಟೇ ಅಲ್ಲ ತಪ್ಪು ನಡೆದಿದ್ದೇ ನಿಜವಾದ್ರೆ ಕಠಿಣ ಶಿಕ್ಷೆಯನ್ನೂ ಅನುಭವಿಸಿಬೇಕಿದೆ.