Apr 13, 2023, 2:04 PM IST
ಬೆಂಗಳೂರು (ಏ.13): ರಾಜ್ಯದಲ್ಲಿ ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಹಲವು ನಾಯಕರಿಗೆ ಅಸಮಾಧಾನ ಇದೆ. ಅದರಲ್ಲಿ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಅವರನ್ನು ಕರೆದು ನಾವು ಮಾತನಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಈಗಾಗಲೇ ಮೂಡಿಗೆರೆ ಶಾಸಕ ತಮಗೆ ಟಿಕೆಟ್ ತಪ್ಪಲು ಸಿಟಿ ರವಿ ಅವರೇ ಕಾರಣ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸಿ.ಟಿ. ರವಿಯೇ ಮುಖ್ಯ ಕಾರಣವಾಗಿದ್ದಾರೆ. ಸಿಟಿ ರವಿ ವೈಯುಕ್ತಿಕ ದ್ವೇಷದಿಂದ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಸಿಟಿ ರವಿ ಪಕ್ಷಕ್ಕೆ ಒಳೆಯದು ಮಾಡೋದಿಲ್ಲ. ಬಿಜೆಪಿ ಮುಗಿಸುವವರೆಗೆ ಸಿ.ಟಿ. ರವಿ ವಿಶ್ರಾಂತಿ ಪಡೆಯಲ್ಲ. ನಾನು ರೈತರ ಪರವಾಗಿ ಪ್ರತಿಭಟನೆ ಮಾಡಿದ್ದೆ, ಅವರಿಗೆ ಪರಿಹಾರ ಕೊಡಿಸುವಲ್ಲಿಯೂ ನಾನು ಸಫಲನಾಗಿದ್ದೆ ಅದನ್ನು ಹೈಕಮಾಂಡ್ ಗೆ ತಪ್ಪಾಗಿ ಅರ್ಥೈಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಲ್ಲ ಅಸಮಾಧಾನಿತರೊಂದಿಗೆ ಆತನಾಡವುದಾಗಿ ಹೇಳಿದ್ದಾರೆ.