ಅಮರಿಕದ ಟೆಸ್ಲಾದಲ್ಲಿ ಕೋಟಿ ಕೋಟಿ ರೂಪಾಯಿ ಸಂಬಳ ಗಿಟ್ಟಿಸಲು ಎಲ್ಲರು ಹಾತೊರೆಯುತ್ತಾರೆ. ಹಲವರು ಪ್ರಯತ್ನಿಸುತ್ತಾರೆ. ಇದೀಗ ಭಾರತೀಯನೊಬ್ಬ ಕಳೆದ 5 ತಿಂಗಳಿನಿಂದ ನಿದ್ದೆಗೆಟ್ಟು ಪ್ರಯತ್ನಿಸಿ ಇದೀಗ ಉದ್ಯೋಗ ಗಿಟ್ಟಿಸಿಕೊಂಡಿದ್ದಾನೆ. ಉದ್ಯೋಗಕ್ಕಾಗಿ 300 ಅರ್ಜಿ ಸಲ್ಲಿಸಿದ್ದಾನೆ, 500 ಇಮೇಲ್ ಕಳುಹಿಸಿದ್ದಾನೆ. ಈ ರೋಚಕ ಜರ್ನಿ ಹಲವರಿಗೆ ಸ್ಪೂರ್ತಿಯಾಗಿದೆ.
ನವದೆಹಲಿ(ಅ.31) ಎಲಾನ್ ಮಸ್ಕ್ ಒಡೆತನದ ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಉತ್ಪದಾನಾ ಕಂಪನಿ ಟೆಸ್ಲಾದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಹುತೇಕ ಎಲ್ಲಾ ಎಂಜಿನೀಯರ್ ಪ್ರಯತ್ನಿಸುತ್ತಾರೆ. ಕೈತುಂಬದ ಸಂಬಳ, ಹಲವು ಸೌಲಭ್ಯ ಸೇರಿದಂತೆ ಕರಿಯರ್ ಬದಲಿಸಬಲ್ಲ ಉದ್ಯೋಗ ಇದಾಗಿದೆ. ಇದೀಗ ಭಾರತೀಯ ಯುವಕ ಕಳೆದ 5 ತಿಂಗಳಿನಿಂದ ನಡಿಸೆದ ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಯುವ ಎಂಜಿನೀಯರ್ ಇದೀಗ ಟೆಸ್ಲಾದಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಕಳೆದ 5 ತಿಂಗಳ ಉದ್ಯೋಗಾಗಿ 300 ಅರ್ಜಿ, 500 ಇಮೇಲ್ ಕಳುಹಿಸಿದ್ದಾನೆ. 5 ತಿಂಗಳು ವೇತನ ಇಲ್ಲದೆ ಅಲೆದಾಡಿದ್ದಾನೆ. ಹೌದು ಪುಣೆಯ ಧ್ರುವ್ ಲೋಯಾ ಪಯಣ ಕೆಲಸ ಅರಸುತ್ತಿರುವ ಹಲವರಿಗೆ ಸ್ಪೂರ್ತಿಯಾಗಿದೆ. ಟೆಸ್ಲಾ ಉದ್ಯೋಗ ಗಿಟ್ಟಿಸಿಕೊಳ್ಳಲು ಈ ಯುವ ಎಂಜಿನೀಯರ್‌ಗೆ ಲಿಂಕ್ಡ್ಇನ್, ಚಾಟ್‌ಜಿಪಿ ಕೂಡ ನರವಾಗಿದೆ ಅನ್ನೋದು ವಿಶೇಷ.
ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಧ್ರುವ್ ಲೋಯಾ ಪಯಣ ನೆರವಾಗಲಿದೆ. ಕಾರಣ ಲಿಂಕ್ಡ್‌ಇನ್ ಮೂಲಕ ಕೆಲಸ ಹುಡುಕುವುದು, ರೆಸ್ಯೂಮ್ ತಯಾರಿಸಲು ಚಾಟ್‌ಜಿಪಿ ನೆರವು ಪಡೆದುಕೊಳ್ಳುವುದು, ತಂತ್ರಜ್ಞಾನಗಳ ಬಳಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಪ್ರೂಫೈಲ್‌ನ್ನು ಸರಿಯಾಗಿ ಹಾಗೂ ಪರಿಣಾಮಕಾರಿಯಾಗಿ ರೆಡಿ ಮಾಡಿದರೆ ಕೆಲಸ ಗಿಟ್ಟಿಸಿಕೊಳ್ಳಲು ನೆರವಾಗಲಿದೆ ಎಂದು ಧ್ರುವ್ ಲೋಯಾ ಹೇಳಿದ್ದಾರೆ.
ಯೂನಿಯನ್ ಬ್ಯಾಂಕ್ ನೇಮಕಾತಿ, 1500ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಅಹ್ವಾನ!
ಟೆಸ್ಲಾದಲ್ಲಿ ಟೆಕ್ನಿಕಲ್ ಸಪರ್ಟೋಸ್ ಸ್ಪಷಲಿಸ್ಟ್ ಆಗಿ ಧ್ರುವ್ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಧ್ರುವ್ ತನ್ನ ಕೋರ್ಸ್ ಮುಗಿಸಿ ನೇರವಾಗಿ ಅಮೆರಿಕದಲ್ಲಿ ಇಂಟರ್ನ್‌ಶಿಪ್ ಮಾಡಿದ್ದಾರೆ. ಕುರಿತು ಧ್ರುವ್ ಲಿಂಕ್ಡ್‌ಇನ್ ಮೂಲಕ ಹೇಳಿಕೊಂಡಿದ್ದಾರೆ. 300ಕ್ಕೂ ಹೆಚ್ಚು ಅರ್ಜಿಗಳನ್ನು ವಿವಿಧ ಕಂಪನಿಗಳಿಗೆ ಸಲ್ಲಿಸಿದ್ದೇನೆ. 500ಕ್ಕೂ ಹೆಚ್ಚು ಇಮೇಲ್ ಮೂಲಕ ರೆಸ್ಯೂಮ್ ಕಳುಹಿಸಿದ್ದೇನೆ. 10 ಸಂದರ್ಶನದಲ್ಲಿ ಕೆಲಸಕ್ಕಾಗಿ ತಯಾರಿಯೊಂದಿಗೆ ಪಾಲ್ಗೊಂಡಿದ್ದೇನೆ. ಇವೆಲ್ಲವೂ ಒಂದು ಉದ್ಯೋಗ ಆಫರ್‌ಗೆ. 3 ತಿಂಗಳ ಇಂಟರ್ನ್‌ಶಿಪ್ ಬಳಿಕ ಮತ್ತೆರೆಡು ಕೆಲಸಕ್ಕಾಗಿ ಅಲೆದಾಡಿದ್ದೇನೆ. ಈ ವೇಳೆ ನಾನು ಟೆಸ್ಲಾದಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಅಮೆರಿಕದಲ್ಲಿ ಉಳಿಯುತ್ತೇನ ಎಂದುಕೊಂಡಿರಲಿಲ್ಲ. ಹಣ ಖಾಲಿಯಾಗಿತ್ತು. ಆರೋಗ್ಯ ವಿಮೆ ಮುಗಿದಿತ್ತು. ವೀಸಾ ಅವಧಿ ಮುಗಿಯುತ್ತಿತ್ತು. ಅಮೆರಿಕದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ತುಡಿತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು ಎಂದು ಧ್ರುವ್ ಹೇಳಿಕೊಂಡಿದ್ದಾರೆ.
ಕೆಲ ತಿಂಗಳ ಕಾಲ ಗೆಳೆಯರ ಅಪಾರ್ಟ್‌ಮೆಂಟ್ ಸ್ಥಳಾಂತರಗೊಂಡೆ. ಏರ್ ಮ್ಯಾಟ್ರೆಸ್‌ನಲ್ಲಿ ಮಲಗುತ್ತಿದ್ದೆ. ಒಂದೊಂದು ಡಾಲರ್ ಉಳಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೆ. ಕಾರಣ ನನಗೆ ಉದ್ಯೋಗ ಸಿಗುವವರೆ ನಿಲ್ಲಬೇಕಿತ್ತು. ಇದೀಗ ಟೆಸ್ಲಾದಲ್ಲಿ ಟೆಕ್ನಿಕಲ್ ಸಪೋರ್ಟ್ ಸ್ಪೆಷಲಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದೇನೆ ಎಂದು ಧ್ರುವ್ ಹೇಳಿದ್ದಾರೆ.
ಉದ್ಯೋಗ ಅರಸುವವರಿಗೆ ನನ್ನ ಸಲಹೆ, ನೀವು ಉದ್ಯೋಗ ಹುಡುಕುವುದನ್ನು 9 ರಿಂದ 5 ಗಂಟೆ ಕೆಲಸ ಎಂದುಕೊಳ್ಳಿ. ಹುಡುಕಾಡಿ, ತಡಕಾಡಿ, ಆದರೆ ವಾರಾಂತ್ಯ, ರಜಾ ದಿನಗಳಲ್ಲಿ ವಿಶ್ರಾಂತಿ ಪಡೆಯಲು ಎಜಾಂಯ್ ಮಾಡಲು ಮರೆಯದಿರಿ. ಇವು ನಿಮ್ಮನ್ನು ಭಾವನಾತ್ಮಕವಾಗಿ ಹಾಗೂ ಉತ್ಸಾಹಭರಿತನಾಗಿ ಮಾಡಲು ಸಹಾಯ ಮಾಡುತ್ತದೆ. ನನಗೆ ಕೆಲಸ ಹುಡುಕಲು ಲಿಂಕ್ಡ್‌ಇನ್, ಚಾಟ್‌ಜಿಪಿಟಿ ಸೇರಿದಂತೆ ಇತರ ಕೆಲ ಆ್ಯಪ್ ಹಾಗೂ ತಂತ್ರಜ್ಞಾನ ಬಳಸಿಕೊಂಡಿದ್ದೇನೆ ಎಂದು ಧ್ರುವ್ ಹೇಳಿಕೊಂಡಿದ್ದಾರೆ.
ಬೆಂಗಳೂರಿನ ಹೊಸ ಆ್ಯಪಲ್ ಸ್ಟೋರ್‌ನಲ್ಲಿ ಉದ್ಯೋಗ, ಲಕ್ಷ ರೂ ಸಂಬಳದ 400 ಹುದ್ದೆಗೆ ನೇಮಕಾತಿ!