ಫ್ರೀ ಪೋಲ್ Vs ಎಕ್ಸಿಟ್ ಪೋಲ್.. ಯಾರಿಗೆ ಲಕ್, ಯಾರಿಗೆ ಶಾಕ್..?

May 11, 2023, 3:06 PM IST

ಸಿದ್ದರಾಮಯ್ಯ,ಬಿಎಸ್'ವೈ, ದಳಪತಿ, ಡಿಕೆಶಿ ಈ ನಾಲ್ವರಲ್ಲಿ ಯಾರ ಲೆಕ್ಕ ಪಕ್ಕಾ. ಈ ಪ್ರಶ್ನೆಗೆ ಉತ್ತರ ಸಿಗಲು ಇನ್ನು ಕೆಲವು ಗಂಟೆಗಳಷ್ಟೇ ಬಾಕಿ. ಬಹು ನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದೆ. ರಾಜ್ಯಾದ್ಯಂತ ಜನ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಮತದಾನ ಅಂತ್ಯಗೊಂಡ ಬೆನ್ನಲ್ಲಿ ಎಕ್ಸಿಟ್ ಪೋಲ್ ಪ್ರಕಟಗೊಂಡಿದೆ. ಅಂದರೆ ಸಮೀಕ್ಷೆ ಮೇ 13ರಂದು ಯಾರು ಗೆಲ್ತಾರೆ, ಕರ್ನಾಟಕದ ಕಿಂಗ್ ಯಾರು ಅನ್ನೋದನ್ನು ಸುಳಿವು ನೀಡುವುದು ಮತಗಟ್ಟೆ ಸಮೀಕ್ಷೆ. ಹಾಗಂತ ಇದೇ ಸತ್ಯ ಏನಲ್ಲ, ಸತ್ಯಕ್ಕೆ ಬಹಳಷ್ಟು ಹತ್ತಿರವಿರುವ ಸಮೀಕ್ಷೆಯಿದು. ಹಾಗಾದರೆ ಬೇರೆ ಬೇರೆ ಸಂಸ್ಥೆಗಳು ನಡೆಸಿರುವ ಎಕ್ಸಿಟ್ ಪೋಲ್  ಏನ್ ಹೇಳ್ತಾ ಇದೆ..? ಅದಕ್ಕೂ ಮುಂಚೆ ಅದೇ ಸಂಸ್ಥೆಗಳು ನಡೆಸಿದ್ದ  ಫ್ರೀ ಪೋಲ್ ಅಂದ್ರೆ ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ್ದೇನು..? ಎಕ್ಸಿಟ್ ಪೋಲ್ ಮತ್ತು ಫ್ರೀ ಪೋಲ್ ಮಧ್ಯೆ ಸಾಮ್ಯತೆ ಇದ್ಯಾ..? ಈ ಎಲ್ಲಾ ಪ್ರಶ್ನೆಗಳಿಗೆ  ಸಂಪೂರ್ಣ ಉತ್ತರ ಇದೆ.  ಹಾಗೇ ಅದಕ್ಕೂ ಮುಂಚೆ, ಚುನಾವಣೆಗೂ ಮೊದಲು ಮೂರೂ ಪಕ್ಷಗಳ ರಣಕಲಿಗಳ ರಣೋತ್ಸಾಹ ಹೇಗಿತ್ತು..? ಯಾರ್ಯಾರು ಎಷ್ಟು ಸೀಟುಗಳನ್ನು ಗೆಲ್ಲುತ್ತೇವೆ ಅಂದಿದ್ರು..? ಯಾರ ಟಾರ್ಗೆಟ್ ಎಷ್ಟಿತ್ತು ಅನ್ನೋದನ್ನು  ಈ ವಿಡಿಯೋದಲ್ಲಿ ಹೇಳಲಾಗಿದೆ ನೋಡಿ.