ಆನಿವರ್ಸರಿ ದಿನ ಮದುವೆ ರಹಸ್ಯ ರಿವೀಲ್ ಮಾಡಿದ ಗಟ್ಟಿಮೇಳ ನಟಿ… ಒಂದು ವರ್ಷದಿಂದ ಮದ್ವೆ ವಿಷ್ಯ ಗುಟ್ಟಾಗಿಟ್ಟಿದ್ಯಾಕೆ?

Published : Nov 28, 2024, 04:06 PM ISTUpdated : Nov 28, 2024, 04:14 PM IST

ಗಟ್ಟಿಮೇಳ ನಟಿ ಅಶ್ವಿನಿ ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ಇವತ್ತು ಆ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಇಷ್ಟೂ ದಿನ ಯಾಕೆ ವಿಷ್ಯ ಗುಟ್ಟಾಗಿ ಇಟ್ಟಿದ್ದರು ಅನ್ನೋದನ್ನೂ ಸಹ ತಿಳಿಸಿದ್ದಾರೆ.   

PREV
110
ಆನಿವರ್ಸರಿ ದಿನ ಮದುವೆ ರಹಸ್ಯ ರಿವೀಲ್ ಮಾಡಿದ ಗಟ್ಟಿಮೇಳ ನಟಿ… ಒಂದು ವರ್ಷದಿಂದ ಮದ್ವೆ ವಿಷ್ಯ ಗುಟ್ಟಾಗಿಟ್ಟಿದ್ಯಾಕೆ?

ಗಟ್ಟಿಮೇಳ ಧಾರಾವಾಹಿ (Gattimela Serial) ಕೊನೆಯಾಗಿ ವರ್ಷಗಳಾಗುತ್ತ ಬಂತು, ಆದರೆ ಸೀರಿಯಲನ್ನು ಇವತ್ತಿಗೂ ಜನ ಇಷ್ಟ ಪಡ್ತಾರೆ, ಜೊತೆ ಪ್ರತಿ ಪಾತ್ರಗಳನ್ನು ಮಿಸ್ ಮಾಡಿಕೊಳ್ತಿದ್ದಾರೆ. ನಿಮಗೂ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರದಲ್ಲಿ ನಟಿಸಿದ್ದ ನಟಿ ಅಶ್ವಿನಿ ನೆನಪಿರಬೇಕು ಅಲ್ವಾ? ಖಂಡಿತಾ ನೆನಪಿರುತ್ತೆ, ತಮ್ಮ ಮುಗ್ಧ ಪಾತ್ರದ ಮೂಲಕ ಜನಮನ ಗೆದ್ದ ನಟಿ ಇವರು. 
 

210

ಅಶ್ವಿನಿಯವರು (Ashwini) ಸೀರಿಯಲ್ ಆರಂಭದಲ್ಲಿ ಆರತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಒಂದೆರಡು ವರ್ಷಗಳಲ್ಲಿ ಅವರು ಸೀರಿಯಲ್ ನಿಂದ ಹೊರ ಬಂದಿದ್ದರು. ಅದಾದ ಬಳಿಕ ನಟಿ ಯೂಟ್ಯೂಬ್ ಚಾನೆಲ್ ಮೂಲಕ ಜನರ ಜೊತೆ ಕನೆಕ್ಟ್ ಆಗುತ್ತಿದ್ದರು. ತಮ್ಮ ಹಾಡುಗಳು, ಅಡುಗೆ, ಹೀಗೆ ಏನಾದರೊಂದು ಮಾಹಿತಿಯನ್ನು ಅಶ್ವಿನಿ ಯೂಟ್ಯೂಬ್ ಮೂಲಕ ನೀಡುತ್ತಿದ್ದರು. 
 

310

ಇಲ್ಲಿವರೆಗೆ ತಮ್ಮ ಫ್ಯಾಮಿಲಿ ಬಗ್ಗೆ ಒಂದೂ ಮಾತನ್ನು ಆಡದ ನಟಿ, ಇದೀಗ ಹೊಸ ವಿಚಾರವನ್ನು ತಿಳಿಸುವ ಮೂಲಕ ಅಭಿಮಾನಿಗಳಿ ಶಾಕ್ ನೀಡಿದ್ದಾರೆ, ಅದೇನೆಂದರೆ, ಅಶ್ವಿನಿಯವರು ತಮ್ಮ ಮದುವೆ ವಿಚಾರವನ್ನು ಇಲ್ಲಿವರೆಗೆ ಗುಟ್ಟಾಗಿಯೇ ಇಟ್ಟಿದ್ದರು. ತಮ್ಮ ಕುಟುಂಬಸ್ಥರಿಗೆ ಬಿಟ್ಟು ಬೇರೆ ಯಾರಿಗೂ ಈ ಮಾಹಿತಿ ತಿಳಿದಿರಲಿಲ್ಲ. ಯಾಕಂದ್ರೆ ನಟಿಗೆ ವೈಯಕ್ತಿಕ ವಿಚಾರವನ್ನು (personal matter)ಸಾರ್ವಜನಿಕವಾಗಿ ಹಂಚಿಕೊಳ್ಳೋದು ಇಷ್ಟವಿರಲಿಲ್ಲ. ಹಾಗಾಗಿಯೇ ಮದುವೆ ವಿಚಾರ ಮುಚ್ಚಿಟ್ಟಿದ್ದರು. 
 

410

ಇದೀಗ ಇದೇ ಮೊದಲ ಬಾರಿಗೆ ತಮ್ಮ ಮೊದಲನೇ ವರ್ಷದ ಮದುವೆ ವಾರ್ಷಿಕೋತ್ಸವದ  (wedding anniversary)ಸಂದರ್ಭದಲ್ಲಿ ತಮ್ಮ ಮದುವೆ ವಿಚಾರವನ್ನು ರಿವೀಲ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಈ ಬಗ್ಗೆ ತಮ್ಮ ಇನ್’ಸ್ಟಾಗ್ರಾಂ ನಲ್ಲಿ ಹಂಚಿಕೊಂಡು, ಮದುವೆ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಹಾಗೂ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ಪ್ರೀತಿ, ಗಂಡ ಹಾಗೂ ವೈವಾಹಿಕ ಜೀವನದ ಬಗ್ಗೆ ತಿಳಿಸಿದ್ದಾರೆ. 
 

510

ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮದುವೆಯ ಫೋಟೋಗಳನ್ನು ಶೇರ್​ ಮಾಡಿಕೊಂಡ ನಟಿ ಎಲ್ಲರಿಗೂ ನಮಸ್ಕಾರ. ನನ್ನ ಜೀವನದ ಬಹು ಮುಖ್ಯವಾದ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನಾನು ಮತ್ತು ಅಜಯ್ ಅವರು ಪ್ರೀತಿಸಿ 15 ವರ್ಷಗಳಾಗಿವೆ. 27/11/2024 ಇಂದು ನಾವು ಮದುವೆಯಾದ ದಿನ ಅಂದರೆ ಮದುವೆಯ ವಾರ್ಷಿಕೋತ್ಸವ. ನಮ್ಮದು love come Arrange Marriage. ನಾನು ಮದುವೆಯಾಗಿರುವ ವಿಷಯ ನನ್ನ ಆತ್ಮೀಯರಿಗೆ ತಿಳಿದಿದೆ. ಆದರೆ ಈ ವಿಷಯವನ್ನು ನಾನು ಪಬ್ಲಿಕ್ ಮಾಡಿರಲಿಲ್ಲ ಅಷ್ಟೇ.
 

610

ಇಂದು ಆ ಸಮಯ ಬಂದಿದೆ ಹಾಗಾಗಿ ತಿಳಿಸುತ್ತಿದ್ದೇನೆ. ಇಲ್ಲಿ ನಾನು ಎಲ್ಲವನ್ನು ವಿವರಿಸಲು ಸಾಧ್ಯವಿಲ್ಲ. ಹಾಗಾಗಿ ಇದರ ಸಂಪೂರ್ಣ ಮಾಹಿತಿ Nimma Ashwini YouTube channelನಲ್ಲಿ ಇದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುವ ಅಜಯ್ ಮತ್ತು ಅಶ್ವಿನಿ ಅಂತ ಬರೆದುಕೊಂಡಿದ್ದಾರೆ.
 

710

ಸದ್ಯ ನಟಿ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಒಂದು ವರ್ಷದಿಂದ ಮದುವೆ ಬಗ್ಗೆ ಗುಟ್ಟಾಗಿಟ್ಟಿರುವ ಬಗ್ಗೆ ಹಾಗೂ ಈವಾಗ ಮಾಹಿತಿ ರಿವೀಲ್ ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಶ್ವಿನಿ. ನನಗೆ ನನ್ನ ಸೊಶಿಯಲ್ ಮೀಡಿಯಾದಲ್ಲಿ ಪರ್ಸನಲ್ ಮಾಹಿತಿ ಹಂಚಿಕೊಳ್ಳೋಕೆ ಇಷ್ಟ ಇರಲಿಲ್ಲ. ಹಾಗಾಗಿ ಹಂಚಿಕೊಂಡಿಲ್ಲ ಎಂದಿದ್ದಾರೆ. 
 

810

ಇನ್ನೂ ನಟಿ ಈ ವಿಚಾರವನ್ನು ಈಗ ಹೇಳಿಕೊಳ್ಳಲು ಒಂದು ಕಾರಣ ಕೂಡ ಇದೆ ಎಂದಿರುವ ನಟಿ, ಸಾಕಷ್ಟು ಮಂದಿ ಸೋಷಿಯಲ್​ ಮೀಡಿಯಾದಲ್ಲಿ ನಟಿಯ ಮದುವೆ ವಿಚಾರದ ಬಗ್ಗೆ ಪ್ರಶ್ನೆ ಮಾಡಿದ್ದಾರಂತೆ, ನೀವು ಒಬ್ಬರೇ ಇರೋದಾ, ನಿಮಗೆ ಫ್ಯಾಮಿಲಿ ಇಲ್ವಾ? ನೀವು ಏಕೆ ಇನ್ನೂ ಮದುವೆ ಆಗಿಲ್ಲ ಎಂದು ಕೆಲವರು ಕೇಳಿದ್ರೆ, ಮದ್ವೆ ಬಗ್ಗೆ ಗೊತ್ತಿರೋರು, ಏನು ನೀವು ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಶೇರ್ ಮಾಡೋದಿಲ್ಲ, ನಿಮ್ಮ ಮತ್ತು ಗಂಡನ ನಡುವೆ ಎಲ್ಲಾ ಸರಿ ಇಲ್ವ ಅಂತಾನೂ ಕೇಳಿದ್ದಾರಂತೆ. 
 

910

ಹಾಗಾಗಿಯೇ ನಟಿ ಇದೀಗ ಮದುವೆಯಾಗಿ ವರ್ಷಗಳ ನಂತರ ನಟಿ ಅಶ್ವಿನಿ ಮದುವೆ ಬಗ್ಗೆ ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲ ಇವರದ್ದು ಲವ್ ಮ್ಯಾರೇಜ್ ಆಗಿದ್ದು, ನಟಿ ಕಳೆದ 15 ವರ್ಷಗಳಿಂದ ಅಜಯ್ ಅವರನ್ನು ಲವ್ ಮಾಡುತ್ತಿದ್ದರಂತೆ. ಕುಟುಂಬಸ್ಥರನ್ನು ಒಪ್ಪಿಸಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿರೋದಾಗಿ ತಿಳಿಸಿದ್ದಾರೆ. 
 

1010

ತಮ್ಮ ಪತಿಯ ಬಗ್ಗೆ ಮಾತನಾಡಿರುವ ಅಶ್ವಿನಿ, ಅಜಯ್ (Ajay)​ ಅವರು ತುಂಬಾನೆ ಸಪೋರ್ಟಿವ್ ಆಗಿದ್ದಾರೆ. ವಿಡಿಯೋ, ಶೂಟಿಂಗ್ ಎಲ್ಲಾದಕ್ಕೂ ಇವರು ನೆರವು ನೀಡುತ್ತಾರೆ. ನಮ್ಮಿಬ್ಬರ ಮಧ್ಯೆ ಜಗಳ, ಕೋಪ ಎಲ್ಲಾ ನಡೆಯುತ್ತೆ, ಆದ್ರೆ ಪ್ರೀತಿ ಎಲ್ಲಾದಕ್ಕಿಂತ ಜಾಸ್ತಿ ಇದೆ. ಎಂದಿದ್ದಾರೆ. ಜೊತೆಗೆ ಮನೆಯಲ್ಲಿ ನಡೆದ ಸತ್ಯನಾರಾಯಣ ಸ್ವಾಮಿ ಪೂಜೆಯ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. 
 

Read more Photos on
click me!

Recommended Stories