ತಮಿಳು ಚಿತ್ರರಂಗದಲ್ಲಿ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ನಟಿಸಿ, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟ ಜಯಂ ರವಿ. 'ಜಯಂ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರಿಗೆ, ಆ ಚಿತ್ರದ ಹೆಸರೇ ಅವರ ಗುರುತಿನ ಚಿಹ್ನೆಯಾಯಿತು. 'ಎಂ.ಕುಮಾರನ್ ಸನ್ ಆಫ್ ಮಹಾಲಕ್ಷ್ಮಿ', 'ಉನಕ್ಕುಮ್ ಎನಕ್ಕುಮ್', 'ದೀಪಾವಳಿ', 'ಸಂತೋಷ ಸುಬ್ರಮಣ್ಯಂ' ಮುಂತಾದ ಚಿತ್ರಗಳು ಸತತವಾಗಿ ಯಶಸ್ಸು ಗಳಿಸಿದವು.