ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ವಿದ್ಯಾರ್ಥಿನಿ ತುಂಡಾದ ವಿದ್ಯುತ್ ಸರ್ವಿಸ್ ವೈರ್ ತಗುಲಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ
ಕಾರವಾರ (ನ.28): ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ವಿದ್ಯಾರ್ಥಿನಿ ತುಂಡಾದ ವಿದ್ಯುತ್ ಸರ್ವಿಸ್ ವೈರ್ ತಗುಲಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ
ಸಾನ್ವಿ ಬಸವರಾಜ ಗೌಳಿ (8), ಮೃತ ವಿದ್ಯಾರ್ಥಿನಿ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ತಹಸೀಲ್ದಾರ್ ಪ್ರವೀಣ್ ಹುಚ್ಚನ್ನವರ, ಸಿಪಐ ಜಯವಂತ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಶಾಸಕ ಆರ್ ವಿ ದೇಶಪಾಂಡೆ ಅವರೂ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತಬಾಲಕಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಸ್ಥಳದಲ್ಲೇ ಸೂಚನೆ ನೀಡಿದರು.
ಹೊನ್ನಾವರ ಬಳಿ ಕಡಲಾಮೆ ಮೊಟ್ಟೆ ಸಂರಕ್ಷಣೆಗೆ ಪುನರ್ವಸತಿ-ಸಂರಕ್ಷಣಾ ಕೇಂದ್ರ
ದುರ್ಘಟನೆ ನಡೆದಿದ್ದು ಹೇಗೆ?
ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿ ಎಂದಿನಂತೆ ವಿಶ್ರಾಂತಿ ಸಮಯದಲ್ಲಿ ಮೂತ್ರ ವಿಸರ್ಜನೆಗೆ ಶಾಲೆಯ ಶೌಚಾಲಯದೊಳಗೆ ಹೋಗಿದ್ದಾಳೆ. ಈ ವೇಳೆ ಹೊರಗಡೆ ಶೌಚಾಲಯದ ಬಳಿಯೇ ಬೋರ್‌ವೆಲ್‌ಗೆ ಹಾಕಿದ್ದ ಅನಧಿಕೃತ ವಿದ್ಯುತ್ ಸಂಪರ್ಕ ಮಾಡಲಾಗಿದ್ದ ವೈರ್ ಶೌಚಾಲಯದೊಳಗೆ ಬಿದ್ದಿದೆ. ಅದನ್ನು ಗಮನಿಸದ ಮಗು ಹಾಗೆ ಒಳ ಹೋಗಿದ್ದಾಳೆ. ಈ ವೇಳೆ ವಿದ್ಯುತ್ ತಂತಿ ಸ್ಪರ್ಶದಿಂದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಪಡೆದ್ರೂ ಬಡತನ, ಹಣಕಾಸಿನ ಕಾರಣಕ್ಕೆ ಕೂಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿನಿ!
ಹೆಸ್ಕಾಂ-ಶಾಲಾ ಮುಖ್ಯೋಪಾಧ್ಯಾಯರ ನಿರ್ಲಕ್ಷ್ಯ:
ಶಾಲೆ ಅಂದಮೇಲೆ ಮಕ್ಕಳು ಓಡಾಡುವ ಜಾಗ. ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ತುಂಬಾ ಎಚ್ಚರಿಕೆ ವಹಿಸಬೇಕಿತ್ತು. ಆದರೆ ಅನಧಿಕೃತವಾಗಿ ಸರ್ವಿಸ್ ಲೈನ್‌ನಿಂದ ಬೋರ್‌ವೆಲ್‌ಗೆ ಸಂಪರ್ಕ ಕಲ್ಪಿಸಿದ್ದ ಶಾಲಾ ಮುಖ್ಯಸ್ಥರು. ಇದೇ ವೇಳೆ ಶಾಲೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರೂ ಹೆಸ್ಕಾಂ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಒಟ್ಟಿನಲ್ಲಿ ಹೆಸ್ಕಾಂ ಹಾಗೂ ಶಾಲಾ ಮುಖ್ಯೋಪಾಧ್ಯಾಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂಬ ಆರೋಪಿಸಲಾಗಿದೆ. ಆಕಸ್ಮಿಕವಾಗಿ ನಡೆದ ದುರ್ಘಟನೆಯಿಂದಾಗಿ ಬಾಲಕಿ ಕುಟುಂಬಸ್ಥರ ಅಕ್ರಮಂದ ಮುಗಿಲು ಮುಟ್ಟಿದೆ.