Apr 14, 2023, 9:57 PM IST
ಬೆಂಗಳೂರು (ಏ.14): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುವರ್ಣ ನ್ಯೂಸ್ ವತಿಯಿಂದ ನಡೆಸಲಾದ ಜನ್‌ಕಿ ಬಾತ್ ಸುವರ್ಣ ಸಮೀಕ್ಷೆಯಲ್ಲಿ ಮಧ್ಯ ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಬಹುಮತ ಸಿಗಲಿದೆ ಎಂಬುದರ ಮಾಹಿತಿ ಇಲ್ಲಿದೆ.
ಮಧ್ಯ ಕರ್ನಾಟಕದಲ್ಲಿ ಗೆದ್ದು ಬೀಗುವವರು ಯಾರು..? ಮಧ್ಯ ಕರ್ನಾಟಕದಲ್ಲಿ ಸುವರ್ಣ ನ್ಯೂಸ್ ಸಮೀಕ್ಷೆ ಏನೆಂಬುದು ಸ್ಪಷ್ಟವಾಗಿ ಜನರಿಂದಲೇ ಸಂಗ್ರಹಿಸಿದ ಮಾಹಿತಿಯಿಂದ ಈಗ ಹೊರಬಿದ್ದಿದೆ. ಈ ಸಲ ಚುನಾವನೆಯಲ್ಲಿ ಮತದಾರರು ಯಾರ ಕೈಹಿಡಿದು ವಿಧಾನಸಭೆಗೆ ಕಳುಹಿಸುತ್ತಾರೆ. ಯಾರಿಗೆ ಜನರ ಮನ್ನಣೆ ಹಾಕಿ ಸರ್ಕಾರ ರಚನೆಗೆ ಅವಕಾಶ ಕೊಡುತ್ತಾರೆ ಎನ್ನುವುದು ಕುತೂಹಲ ಮುಡಿಸಿದೆ. ಇನ್ನು ಮಧ್ಯ ಕರ್ನಾಟಕದಲ್ಲಿ ಬಿಜೆಪಿ 2018ರಂತೆಯೇ ಈ ಬಾರಿ ಕಮಾಲ್ ಮಾಡುತ್ತದೆಯೇ ಅಥವಾ ಕಾಂಗ್ರೆಸ್ ಮುನ್ನಡೆ ಸಾಧಿಸುವುದೇ ಎನ್ನುವುದು ಸಮೀಕ್ಷೆಯಿಂದ ಸಂಗ್ರಹಿಸಲಾಗಿದೆ. ಬಿಜೆಪಿ ವಿರುದ್ಧ ರಣತಂತ್ರ ಹೂಡಿ ಗೆಲ್ಲುತ್ತಾ ಕಾಂಗ್ರೆಸ್ ಎನ್ನುವುದು ಕುತೂಹಲ ಮೂಡಿಸಿದೆ.
ಮಧ್ಯ ಕರ್ನಾಟಕ - 26 ಕ್ಷೇತ್ರ
ಬಿಜೆಪಿ 13
ಕಾಂಗ್ರೆಸ್ 12
ಜೆಡಿಎಸ್ 01
ಇತರೆ 00