Apr 14, 2023, 9:41 PM IST
ಬೆಂಗಳೂರು(ಏ.14): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗ್ರೇಟರ್ ಬೆಂಗಳೂರಿನಲ್ಲಿ ಅಧಿಪತ್ಯ ಸಾಧಿಸುವ ಪಕ್ಷ ಯಾವುದು? ಈ ಕುತೂಹಲಕ್ಕೆ ಜನ್ ಕಿ ಬಾತ್ ಸುವರ್ಣನ್ಯೂಸ್ ಸಮೀಕ್ಷೆ ಉತ್ತರ ನೀಡಿದೆ. ಬೆಂಗಳೂರಲ್ಲಿ ಕಳೆದ ಚುನಾವಣೆಯಲ್ಲಿ 11 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 15 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಇತ್ತ ಕಳೆದ ಚುನಾವಣೆಯಲ್ಲಿ 17 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ 3 ಸ್ಥಾನ ಕಳೆದುಕೊಂಡು 14 ಸ್ಥಾನಕ್ಕೆ ತೃಪ್ತಿಪಡಲಿದೆ ಎಂದಿದೆ. ಇನ್ನು ಜೆಡಿಎಸ್ 4 ರಿಂದ 3ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.