Apr 14, 2023, 6:58 PM IST
ಬೆಂಗಳೂರು(ಏ.14): ಜನ್‌ಕಿ ಬಾತ್ ಹಾಗೂ ಸುವರ್ಣನ್ಯೂಸ್ ಕರ್ನಾಟಕ ವಿಧಾಸಭಾ ಚುನವಣಾ ಸಮೀಕ್ಷೆ ಪ್ರಕಟಿಸಿದೆ. ಕರ್ನಾಟಕದಲ್ಲಿ ಪ್ರತಿ ವಿಧಾನಸಭಾ ಚುನಾವಣೆ ವೇಳೆ ಒಂದೊಂದು ಮಹತ್ವದ ವಿಚಾರ ಮುಂದಿಟ್ಟು ಚುನಾವಣೆ ನಡೆದಿದೆ. 2008ರಲ್ಲಿ ವಚನ ಭ್ರಷ್ಟತೆ, ಯಡಿಯೂರಪ್ಪ ಸಿಎಂ ಆಗಬೇಕು, 2013ರ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪ ಬಿಜೆಪಿ ಸೋಲಿಸಲು ಪಣತೊಟ್ಟಿದ್ದರು. ಹೀಗೆ ಒಂದೊಂದು ಚುನಾವಣೆ ಒಂದೊಂದು ವಿಚಾರಕ್ಕೆ ನಡೆದಿದೆ. ಈ ಬಾರಿ ಇದು ಮತ್ತಷ್ಟು ಕುತೂಹಲಕಾರಿಯಾಗಿದೆ.