Aug 5, 2023, 5:30 PM IST
ಬೆಂಗಳೂರು (ಆ.05): ಕುಮಾರಸ್ವಾಮಿ ಅವರಿಗೆ ಬಹಳ ಫಟ್ರೇಷನ್‌ನಲ್ಲಿ ಇದ್ದಾರೆ. ಅವರು ಲೋಕಾಯುಕ್ತಕ್ಕೆ ಹೋಗಿ ದೂರು ನೀಡಲಿ ಎಂದು ಡಿ.ಕೆ.ಶಿವಕುಮಾರ್ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ಪೆನ್‌ಡ್ರೈವ್ ಬಿಡುಗಡೆ ಮಾತನಾಡಿದ ಅವರು ವರ್ಗಾವಣೆ ದಂಧೆಗೆ ಸಂಬಂಧಿಸಿದಿರಲಿ ಅಥವಾ ಇನ್ಯಾವುದಕ್ಕೋ ಸಂಬಂಧಪಟ್ಟಿರಲಿ ಅವರ ಬಳಿ ಏನು ದಾಖಲೆ ಇದೆ ಅದನ್ನ ಲೋಕಾಯುಕ್ತರಿಗೆ ಸಲ್ಲಿಸಿದರೆ ತನಿಖೆಯಾಗುತ್ತದೆ. ಯಾರಿಗೋ ಹೇಳಿದ ಹಾಗೆ, ಹೆದರಿಸಿದ ಹಾಗೆ ನನ್ನ ಬಳಿ ಹೇಳಿದರೆ, ಹೆದರಿಸಿದರೆ ಪ್ರಯೋಜವಿಲ್ಲ ಎಂದು ತಿರುಗೇಟು ನೀಡಿದರು. ಹಾಗೂ ಯಾವ ಬಾಂಬ್ ಹಾಕಿದರೂ ನಾನು ಜಗ್ಗಲ್ಲ, ಬಗ್ಗಲ್ಲ. 1975 ರಿಂದ ಇಂತಹ ಬಾಂಬ್‌ಗಳನ್ನ ಸಾಕಷ್ಟು ನೋಡಿದ್ದೇನೆ. ಕಾಂಗ್ರೆಸ್ ಲೂಟಿ ಮಾಡುತ್ತಿದೆ ಎಂಬ ಆರೋಪ ಮಾಡಿರುವ ಎಚ್ಡಿಕೆ ತಮ್ಮ ಬಳಿ ದಾಖಲೆ ಇದ್ದರೆ ಬಹಿರಂಗ ಪಡಿಸಲಿ, ಸುಮ್ಮನೇ ಫಸ್ಟ್ರೇಷನ್ ದಿಂದ ಇಲ್ಲದನ್ನು ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.