ನೀವು ಗೆಲ್ಲಿಸಿ ನೋಡಿ, ನಾನು ಬುಗುರಿ ಆಡೋದು ತೋರಿಸುವೆ: ಡಿಕೆಶಿ ಹೊಸ ಆಟದ ಮುನ್ಸೂಚನೆ

Nov 27, 2019, 8:23 PM IST

ಮೈಸೂರು, [ನ.27]: ಮಾಜಿ ಸಚಿವ ಡಿಕೆ ಶಿವಕುಮಾರ್ ಮಿನಿ ಸಮರದ ಅಖಾಡಕ್ಕಿಳಿದಿದ್ದು, ಮುಂದಿನ ಹೊಸ ಆಟದ ಮುನ್ಸೂಚನೆ ಕೊಟ್ಟಿದ್ದಾರೆ.

ಇಂದು [ಬುಧವಾರ]  ಮೈಸೂರಿನ ಹಣಸೂರು ಉಪಚುನಾವಣೆ ಅಖಾಡಕ್ಕಿಳಿದಿದ್ದ ಡಿಕೆ ಶಿವಕುಮಾರ್, ನೀವು ಗೆಲ್ಲಿಸಿ ನೋಡಿ. ನಾನು ಮುಂದಿನ  ಬುಗುರಿ ಆಟವನ್ನು ನಾನು ತೋರಿಸ್ತೇನೆ ಎಂದು ಹೇಳುವ ಮೂಲಕ ಉಪಚುನಾವಣೆ ಬಳಿಕ ಹೊಸ ಆಟ ತೋರಿಸುವ ಮಾತುಗಳನ್ನಾಡಿದ್ದಾರೆ. ಹಾಗಾದ್ರೆ, ಡಿಕೆ ಶಿವಕುಮಾರ್ ಇನ್ನೂ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ಅವರ ಬಾಯಿಂದಲೇ ಕೇಳಿ.