ಬಾಲಿವುಡ್ ದಿವಾ ದೀಪಿಕಾ ಪಡುಕೋಣೆ ಈ ಬಾರಿ ಮೆಟ್ ಗಾಲಾ ಇವೆಂಟ್‌ನಲ್ಲಿ ಭಾಗವಹಿಸಿಲ್ಲ. ಅವರ ಮತ್ತು ಪತಿ ರಣವೀರ್ ಸಿಂಗ್ ಅವರ ಫೋಟೋವೊಂದು ವೈರಲ್ ಆಗಿದೆ. ದೀಪಿಕಾ ಅಭಿಮಾನಿಗಳು ನಟಿ ಬೇಬಿಮೂನ್‌ಗೆ ಹೋಗಲು ಮೆಟ್ ಗಾಲಾ 2024ಅನ್ನು ಮಿಸ್ ಮಾಡಿದ್ದಾರೆ ಎಂದು ಊಹಿಸುತ್ತಿದ್ದಾರೆ.
ಮೆಟ್ ಗಾಲಾ ಮೇ ತಿಂಗಳ ಮೊದಲ ಸೋಮವಾರದಂದು ನಡೆಯುವ ಪ್ರಮುಖ ಫ್ಯಾಷನ್ ಕಾರ್ಯಕ್ರಮ. ಈ ವರ್ಷದ ಮೆಟ್ ಗಾಲಾ 2024 ಇದಕ್ಕೆ ಹೊರತಾಗಿಲ್ಲ, ವಿಶ್ವಾದ್ಯಂತ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಸೂಪರ್‌ಸ್ಟಾರ್ಸ್ ರೆಡ್ ಕಾರ್ಪೆಟ್‌ನಲ್ಲಿ ಮನಮೋಹಕವಾಗಿ ನಡೆಯುತ್ತಾರೆ.
210
ಈ ವರ್ಷ ಭಾರತದಿಂದ ಆಲಿಯಾ ಭಟ್ ಮತ್ತು ಇಶಾ ಅಂಬಾನಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳು ದೀಪಿಕಾ ಪಡುಕೋಣೆ ಅವರನ್ನು ಮಿಸ್ ಮಾಡಿಕೊಂಡಿದ್ದಾರೆ.
310
ಇದರ ನಡುವೆ , ಅವರು ತಮ್ಮ ಪತಿ ರಣವೀರ್ ಸಿಂಗ್ ಅವರೊಂದಿಗೆ ಇರುವ ಫೋಟೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ನೆಟಿಜನ್‌ಗಳು ನಟಿ ಬೇಬಿಮೂನ್ ಎಂಜಾಯ್ ಮಾಡುತ್ತಿದ್ದಾರೆ ಎಂದು ಊಹಿಸಿದ್ದಾರೆ.
410
ದೀಪಿಕಾ ಮತ್ತು ರಣವೀರ್ ವಿಮಾನದ ಮೆಟ್ಟಿಲು ಇಳಿಯುತ್ತಿರುವುದು ಕಾಣಬಹುದು. ನಟಿ ಪ್ರೆಗ್ನೆಂಸಿ ಸಮಯಕ್ಕೆಸೂಕ್ತವಾಗುವಂತೆ ಆರಾಮದಾಯಕ ಬಟ್ಟೆ ಧರಿಸಿದ್ದಾರೆ. ರಣವೀರ್, ಕ್ಯಾಶುಯಲ್ ಆಲ್-ವೈಟ್ ಧರಿಸಿದ್ದಾರೆ, ದೀಪಿಕಾರ ಬೇಬಿ ಬಂಪ್ ಸಹ ಗೋಚರಿಸುತ್ತದೆ.
510
'ಚಿಕ್ಕಬಂಪ್-ದೇವರು ಅವರನ್ನು ಮತ್ತು ಅವರ ಚಿಕ್ಕವರನ್ನು ಆಶೀರ್ವದಿಸಲಿ. ಅವರನ್ನು ದುಷ್ಟ ಕಣ್ಣುಗಳಿಂದ ರಕ್ಷಿಸಲ್ಪಡಲಿ' ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. 'ದೇವರು ಈ ದಂಪತಿಯನ್ನು ಆಶೀರ್ವದಿಸಲಿ'ಎಂದು ಇನ್ನೊಬ್ಬರು ಬರೆದಿದ್ದಾರೆ.
610
ದೀಪಿಕಾ ಪಡುಕೋಣೆ ಅವರು 2017 ರಲ್ಲಿ ಸ್ಟೈಕಿಂಗ್ ವೈಟ್ ಗೌನ್‌ನಲ್ಲಿ ಮೆಟ್ ಗಾಲಾದ ರೆಡ್‌ಕಾರ್ಪೆಟ್‌ಗೆ ಪಾದಾರ್ಪಣೆ ಮಾಡಿದರು.
710
2018 ರಲ್ಲಿ ಬಾಲಿವುಡ್ ದಿವಾ ಸ್ಟನ್ನಿಂಗ್ ಹೈ ಸ್ಲಿಟ್ ಹೊಂದಿದ ಕಡುಗೆಂಪು ಬಣ್ಣದ ಗೌನ್‌ನಲ್ಲಿ ಮೆಟ್‌ಗಾಲಾಗೆ ಆಗಮಿಸಿದರು.
810
ನಂತರ, ಮೆಟ್ ಗಾಲಾ 2019 ರಲ್ಲಿ, ದೀಪಿಕಾ ಪಡುಕೋಣೆ ಸ್ಟ್ರಾಪ್‌ಲೆಸ್ ಗುಲಾಬಿ ಬಣ್ಣದ ಗೌನ್‌ನೊಂದಿಗೆ ಎಲ್ಲರನ್ನೂ ಆಕರ್ಷಿಸಿದರು.
910
ದೀಪಿಕಾ ಸಿಂಗಂ ಅಗೇನ್ ಸಿನಿಮಾದಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ಸೆಟ್‌ನಲ್ಲಿ ತಾನು ಕೆಲಸ ಮಾಡುವ ಜೂನಿಯರ್ ಕಲಾವಿದರೊಂದಿಗೆ ಕಾಣಿಸಿಕೊಂಡರು. ಆಕೆಯ ಗರ್ಭಿಣಿಯ ಗ್ಲೋ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯಿತು.
1010
ಸೆಪ್ಟೆಂಬರ್ 2024 ರಲ್ಲಿ ರಣವೀರ್ ಸಿಂಗ್ ಅವರೊಂದಿಗೆ ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವ ದೀಪಿಕಾ ಪ್ರಸ್ತುತ ತನ್ನ ಗರ್ಭಾವಸ್ಥೆಯನ್ನು ಎಂಜಾಯ್ ಮಾಡುತ್ತಿದ್ದಾರೆ.