May 3, 2023, 11:51 AM IST
ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ವರುಣದಲ್ಲಿ ಸಚಿವ ವಿ. ಸೋಮಣ್ಣ ಸೋಲಿಸಿದ್ರೆ, ಬಂಪರ್ ಆಫರ್ ನೀಡಲಾಗುವುದು ಎಂಬ ಮಾತು ಬಿಜೆಪಿ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ. ಈ ಬಗ್ಗೆ ಅಮಿತ್ ಶಾ ವರುಣ ಸಮಾವೇಶದಲ್ಲಿ ಬಹಿರಂಗವಾಗಿ ಉನ್ನತ ಹುದ್ದೆ ನೀಡುವುದಾಗಿ ಹೇಳಿದ್ದಾರೆ. ಪಕ್ಷದಲ್ಲೋ ಅಥವಾ ಸರ್ಕಾರದಲ್ಲಿ ಉನ್ನತ ಹುದ್ದೆಯೋ, ಇಲ್ಲವೇ ಲಿಂಗಾಯತ ಲೀಡರ್ ಎಂಬ ಪಟ್ಟ ಸಿಗಲಿದೆಯಾ ಎಂಬುದು ಗೊತ್ತಿಲ್ಲ. ಆದ್ರೆ ಸಮಾವೇಶದಲ್ಲಿ ಅಮಿತ್ ಶಾ ಉನ್ನತ ಹುದ್ದೆ ನೀಡುವ ಕುರಿತು ಮಾತನಾಡಿರುವುದಂತೂ ಸತ್ಯ. ಈ ಮೂಲಕ ವರುಣದಲ್ಲಿ ಸಿದ್ದರಾಮಯ್ಯ ಕಟ್ಟಿಹಾಕಲು ಬಿಜೆಪಿ ರಣತಂತ್ರ ಹೂಡಿದೆ. ಅಲ್ಲದೇ ಬಿಎಸ್‌ವೈ ಬಳಿಕ ಸೋಮಣ್ಣ ಲಿಂಗಾಯತ ಲೀಡರ್ ಆಗ್ತಾರಾ ಎಂಬ ಪ್ರಶ್ನೆ ಸಹ ಈಗ ಮೂಡಿದೆ.
ಇದನ್ನೂ ವೀಕ್ಷಿಸಿ: ಪ್ರಣಾಳಿಕೆಯಲ್ಲೂ ಯಟವಟ್ಟು ಮಾಡಿಕೊಳ್ತಾ ಕಾಂಗ್ರೆಸ್? : ಸಿಟ್ಟಿಗೆದ್ದಿರುವ ಹಿಂದೂಪರ ಸಂಘಟನೆಗಳು