ಒಂದು ಕಾಲದ ಸ್ಟಾರ್ ನಟಿ, ತಮಿಳು ಮೂಲದ ಸುಹಾಸಿನಿ ಅವರು ಮಾತನಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಟಿ ಸುಹಾಸಿನಿಯವರು...
ಒಂದು ಕಾಲದ ಸ್ಟಾರ್ ನಟಿ, ತಮಿಳು ಮೂಲದ ಸುಹಾಸಿನಿ (Suhasini Maniratnam) ಅವರು ಮಾತನಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಟಿ ಸುಹಾಸಿನಿಯವರು 1974-75ರ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ತಮಿಳುನಾಡಿನ ನಿವಾಸಿಯಾಗಿದ್ದ ಅವರು ಕರ್ನಾಟಕದ ಚಿತ್ರದುರ್ಗಕ್ಕೆ ಬಂದಿದ್ದರಂತೆ. ಅಲ್ಲಿ ಅಂದು ನಡೆದ ಘಟನೆಯನ್ನು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅದೀಗ ಭಾರೀ ವೈರಲ್ ಆಗಿದೆ!
ಹಾಗಿದ್ದರೆ ನಟಿ ಸುಹಾಸಿನಿ ಅದೇನು ಹೇಳಿದ್ದಾರೆ? ಇಲ್ಲಿದೆ ಡೀಟೇಲ್ಸ್.. ಓವರ್ ಟು ಸುಹಾಸಿನಿ. 'ಅಂದು ನಾನು ಕರ್ನಾಟಕದ ಚಿತ್ರದುರ್ಗಕ್ಕೆ ಆಟವೊಂದನ್ನು ಆಡಲು ತಮಿಳುನಾಡು ಕಡೆಯ ಟೀಮ್‌ನಿಂದ ಆಯ್ಕೆಯಾಗಿ ಬಂದಿದ್ದೆ. ಆಟದಲ್ಲಿ ದುರದೃಷ್ಟವಶಾತ್ ಕರ್ನಾಟಕ ವಿರುದ್ಧ ನಾವು ಸೋತಿದ್ದೆವು. ನಾನು ಅದೇ ಬೇಸರದಲ್ಲಿದ್ದೆ. ಆಗ ಯಾರೋ ಒಬ್ಬರು 'ನಾಗರಹಾವು' ಸಿನಿಮಾ ಬಿಡುಗಡೆ ಆಗಿದೆ, ಚೆನ್ನಾಗಿದೆ ನೋಡಿ ಅಂದ್ರು.
ವಿಷ್ಣುವರ್ಧನ್ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್; ಡೌಟ್ ಇದ್ರೆ ಇಲ್ನೋಡಿ!
ಬೇಸರದಲ್ಲಿದ್ದ ನಾನು ತಕ್ಷಣವೇ ಒಪ್ಪಿ ಸ್ನೇಹಿತೆಯರೊಂದಿಗೆ ವಿಷ್ಣುವರ್ಧನ್-ಆರತಿ ಜೋಡಿಯ ಅಭಿನಯದ 'ನಾಗರಹಾವು' ಸಿನಿಮಾವನ್ನು ವೀಕ್ಷಿಸಿದೆ. ನಾನು ದೇ ಮೊದಲು ಕನ್ನಡ ಸಿನಿಮಾವೊಂದನ್ನು ವೀಕ್ಷಿಸಿದ್ದೆ. ನನಗೆ ಆವತ್ತೇ ನಿರ್ದೇಶಕ ಪುಟ್ಟಣ್ಣ ಕಣಗಾಲ್, ನಟಿ ಆರತಿ ಹಾಗೂ ಯಂಗ್ ನಟ ವಿಷ್ಣುವರ್ಧನ್ (Vishnuvardhan) ಅವರೆಲ್ಲರ ಪರಿಚಯವಾಗಿದ್ದು' ಎಂದಿದ್ದಾರೆ ನಟಿ ಸುಹಾಸಿನಿ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ನಟಿ ಸುಹಾಸಿನಿ ಆಗಿನ್ನೂ ನಟಿ ಆಗಿರಲಿಲ್ಲ.
ಸುಹಾಸಿನಿ ಅವರು ಆ ಬಳಿಕ ನಟಿಯಾದರು. ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದು ಆಮೇಲೆ ಅವರು ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ಸಹ ನಟಿಸಿದ್ದಾರೆ. ಕನ್ನಡದಲ್ಲಿ ಅಚ್ಚರಿ ಎಂಬಂತೆ, ಅವರು ವಿಡಿಯೋದಲ್ಲಿ ಹೇಳಿರುವ ನಟ ವಿಷ್ಣುವರ್ಧನ್ ಜೊತೆಗೇ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕನ್ನಡದಲ್ಲಿ ಅನಂತ್ ನಾಗ್-ಲಕ್ಷ್ಮೀ ಜೋಡಿಯಂತೆ, ವಿಷ್ಣುವರ್ಧನ್-ಸುಹಾಸಿನಿ ಜೋಡಿ ಕೂಡ ತುಂಬಾ ಫೇಮಸ್.
ಕಿಚ್ಚ ಸುದೀಪ್ ಹೇಳಿದ ಈ ಸ್ಟೋರಿಯಲ್ಲಿನ ಆ ಸ್ನೇಹಿತ ಯಾರು? ಗೊತ್ತಾದ್ರೂ ಹೇಳ್ಬೇಡಿ!
ಕನ್ನಡ ಸಿನಿಪ್ರೇಕ್ಷಕರು ಮೆಚ್ಚಿನ ತಾರಾ ಜೋಡಿ ಹೇಳುವಾಗ ಇಂದಿಗೂ ಕೂಡ 'ವಿಷ್ಣುವರ್ಧನ್ ಹಾಗೂ ಸುಹಾಸಿನಿ' ಎಂದು ಹೇಳುತ್ತಾರೆ. ನಟ ವಿಷ್ಣುವರ್ಧನ್ ಜೊತೆಗೆ ಆರತಿ, ಲಕ್ಷ್ಮೀ, ಮಂಜುಳಾ, ಮಾಧವಿ ಸೇರಿದಂತೆ ಬಹಳಷ್ಟು ನಟಿಯರು ನಟಿಸಿದ್ದಾರೆ. ಆದರೆ, ಅಚ್ಚರಿ ಎಂಬಂತೆ, ವಿಷ್ಣುವರ್ಧನ್-ಸುಹಾಸಿನಿ ಜೋಡಿಯಲ್ಲೇ ಅತಿ ಹೆಚ್ಚು ಸೂಪರ್ ಹಿಟ್ ಚಿತ್ರಗಳು ಮೂಡಿಬಂದಿವೆ.
ಬೆಂಕಿಯಲ್ಲಿ ಅರಳಿದ ಹೂ, ಬಂಧನ ಹಾಗೂ ಮುತ್ತಿನ ಹಾರ ಸೇರಿದಂತೆ ಬಹಳಷ್ಟು ಚಿತ್ರಗಳಲ್ಲಿ ಈ ಜೋಡಿ ಒಟ್ಟಾಗಿ ನಟಿಸಿದ್ದಾರೆ. ಅಂದಹಾಗೆ, ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರನ್ನು ಮದುವೆಯಾಗಿರುವ ನಟಿ ಸುಹಾಸಿನಿಯವರು ಈಗ ಸುಹಾಸಿನಿ ಮಣಿರತ್ನಂ ಎಂದೇ ಫೇಮಸ್. ಅಂಥ ನಟಿ ಸುಹಾಸಿನಿ, ತಾವು ನಟ ವಿಷ್ಣುವರ್ಧನ್ ಅವರನ್ನು ಸಿನಿಮಾದಲ್ಲಿ ಮೊಟ್ಟಮೊದಲು ನೋಡಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ, ಹೇಳಿದ್ದಾರೆ.
ಶ್ರೀದೇವಿ ಸ್ನೇಹಿತೆ ಮೋನಾ ಮನೆಯಲ್ಲಿದ್ದಾಗ ಬೋನಿ ಕಪೂರ್‌ಗೆ ಏನಂತ ಕರೀತಿದ್ರು?