BJP ಕೋರ್ ಕಮಿಟಿ ಸಭೆ ಅಂತ್ಯ: ಬೈ ಎಲೆಕ್ಷನ್ ಟಿಕೆಟ್, ಅನರ್ಹರ ಬಗ್ಗೆ ಮಹತ್ವದ ನಿರ್ಧಾರ

Nov 13, 2019, 6:49 PM IST

ಬೆಂಗಳೂರು, [ನ.13]: ಅನರ್ಹ ಶಾಸಕರ ಹಣೆ ಬರಹ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನವಾಗಿದೆ. 17 ಜನ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್‌ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದು, ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ. 

ಇದರಿಂದ ಅನರ್ಹ ಶಾಸಕರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಅನರ್ಹರ ತೀರ್ಪು ಹೊರ ಬಿದ್ದಿದ್ದೇ ತಡ ರಾಜ್ಯ ಬಿಜೆಪಿ ರಾಜಕೀಯ ಗರಿಗೆದರಿದೆ. ತೀರ್ಪಿನ ನಂತರ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಬಿಜೆಪಿ ದಿಢೀರ್ ಕೋರ್ ಕಮಿಟಿ ಸಭೆ ನಡೆಸಿದೆ. 

 ಅನರ್ಹರಿಗೆ ಟಿಕೆಟ್, ಉಪಚುನಾವಣೆ ಸಿದ್ಧತೆ ಹಾಗೂ ಬಂಡಾಯ ಶಮನ ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಹಾಗಾದ್ರೆ ಏನೆಲ್ಲ ಆಯ್ತು ಎನ್ನುವುದನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಮಾಹಿತಿ ನೀಡಿದ್ದು, ಅದನ್ನು ವಿಡಿಯೋನಲ್ಲಿ ಅವರ ಬಾಯಿಂದಲೇ ಕೇಳಿ.