'ಮೊಬೈಲ್‌, ಪವರ್‌ ಬ್ಯಾಂಕ್ ಇಟ್ಕೊಳ್ಳೋಕೇ ವ್ಯಾನಿಟಿ ಬ್ಯಾಗ್‌ ಬೇಕಾ..' ಕರಣ್‌ ಜೋಹರ್‌ ಏರ್‌ಪೋರ್ಟ್‌ ಲುಕ್‌ ಫುಲ್‌ ಟ್ರೋಲ್‌!

Published : May 08, 2024, 04:05 PM IST
'ಮೊಬೈಲ್‌, ಪವರ್‌ ಬ್ಯಾಂಕ್ ಇಟ್ಕೊಳ್ಳೋಕೇ ವ್ಯಾನಿಟಿ ಬ್ಯಾಗ್‌ ಬೇಕಾ..' ಕರಣ್‌ ಜೋಹರ್‌ ಏರ್‌ಪೋರ್ಟ್‌ ಲುಕ್‌ ಫುಲ್‌ ಟ್ರೋಲ್‌!

ಸಾರಾಂಶ

ಸ್ಟೈಲ್‌ ವಿಚಾರದಲ್ಲಿ ನಿರ್ದೇಶಕ-ನಿರ್ಮಾಪಕ ಕರಣ್‌ ಜೋಹರ್‌ ಬಾಲಿವುಡ್‌ನ ನಟಿಮಣಿಯರಿಗಿಂತ ಒಂದು ಕೈ ಮೇಲೆ. ಹಾಗಾಗಿ ಅವರ ಲುಕ್‌ ಬಗ್ಗೆ ಸದಾ ಒಂದಿಲ್ಲೊಂದು ಕಾಮೆಂಟ್‌ಗಳು ಬರ್ತಾನೆ ಇರುತ್ತವೆ.  

ನಟ ಕರಣ್‌ ಜೋಹರ್‌ ಈಗ ಸಖತ್‌ ಟ್ರೆಂಡಿಂಗ್‌ನಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಏರ್ಪೋರ್ಟ್‌ ಲುಕ್‌. ಇತ್ತೀಚೆಗೆ ಮುಂಬೈನಿಂದ ಲಾಸ್‌ ಏಂಜಲಿಸ್‌ಗೆ ಹೊರಟ ಕರಣ್‌ ಜೋಹರ್‌ ವಿಶಿಷ್ಟ ಲುಕ್‌ನಲ್ಲಿದ್ದರು. ಇಡೀ ದೇಶದಲ್ಲಿ ಹೀಟ್‌ವೇವ್‌ ಇದ್ರೂ, ಅದ್ಯಾವುದೂ ಅವರಿಗೆ ಎಫೆಕ್ಟ್‌ ಆಗದೇ ಇರೋ ರೀತಿಯಲ್ಲಿ ಫುಲ್‌ ಬ್ಲ್ಯಾಕ್‌ & ಬ್ಲ್ಯಾಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದರು. ಗೋಲ್ಡ್ ಗಾಲಾದಲ್ಲಿ ಪ್ರತಿಷ್ಠಿತ ಗೋಲ್ಡ್ ಲೆಜೆಂಡ್ ಗೌರವವನ್ನು ಸ್ವೀಕರಿಸಲು ಲಾಸ್ ಏಂಜಲೀಸ್‌ಗೆ ಕರಣ್‌ ಜೋಹರ್‌ ತೆರಳಿದ್ದಾರೆ. ಇದು ಪ್ರಖ್ಯಾತ ಡೈರಕ್ಟರ್‌ ಪಾಲಿಗೆ ಮಹತ್ವದ ಜಾಗತಿಕ ಮನ್ನಣೆ ಎನಿಸಿದೆ. ಕಪ್ಪು ಬಣ್ಣದ ಗ್ಲಾಸ್‌, ಟಿ ಶರ್ಟ್‌, ಪ್ಯಾಂಟ್‌, ಜಾಕೆಟ್‌ ಹಾಗೂ ಶೂ ಧರಿಸಿದ್ದ ಕರಣ್‌ ಜೋಹರ್‌ ಅವರ ವ್ಯಾನಿಟಿ ಬ್ಯಾಗ್‌ ಹಾಗೂ ಕಪ್ಪು ಬಣ್ಣದ ಶೂ ಕೂಡ ಧರಿಸಿದ್ದರು. ಶೂಗೆ ಕಟ್ಟಿರುವ ಲೇಸ್‌ನ ಬಣ್ಣ ಮಾತ್ರ ಬಿಳಿಯಾಗಿತ್ತಲ್ಲದೆ, ಬಹಳ ಡಿಫರೆಂಟ್‌ ಆಗಿ ಲೇಸ್‌ಅನ್ನು ಶೂಗೆ ಕಟ್ಟಲಾಗಿತ್ತು.

ಇನ್ನು ಕರಣ್‌ ಜೋಹರ್‌ ಅವರ ಈ ಲುಕ್‌ ಕಂಡವರೇ ಅವರನ್ನು ಟ್ರೋಲ್‌ ಮಾಡಲು ಆರಂಭಿಸಿದ್ದಾರೆ. ಗಂಡುಮಕ್ಕಳು ವ್ಯಾನಿಟಿ ಬ್ಯಾಗ್‌ ಹಿಡ್ಕೊಂಡು ತಿರುಗಾಡೋ ದಿನ ನೋಡೋ ಹಾಗಾಯಿತಲ್ಲ ಎಂದು ವಿಡಿಯೋಗೆ ಒಬ್ಬರು ಕಾಮೆಂಟ್‌ ಮಾಡಿದ್ದರೆ, ಮೊಬೈಲ್‌, ಪವರ್‌ ಬ್ಯಾಂಕ್ ಇಟ್ಕೊಳ್ಳೋಕೇ ವ್ಯಾನಿಟಿ ಬ್ಯಾಗ್‌ ತಗೊಂಡು ಹೋಗ್ತಾ ಇರೋದನ್ನು ಇದೇ ಮೊದಲ ಟೈಮ್‌ ನೋಡ್ತಾ ಇದ್ದೇನೆ ಎಂದು ಬರೆದಿದ್ದಾರೆ.

ಊರಿಗೆಲ್ಲಾ ಹೀಟ್‌ವೇವ್‌ ಅಂದ್ಕೊಂಡು ಬಟ್ಟೆ ಇಲ್ದೆ ತಿರುಗಾಡೋ ಸಿಚುವೇಶನ್‌ ಬಂದಿದ್ರೆ, ಇದ್ಯಾರಿದು.. ಇಂಥಾ ಸಖೆಯಲ್ಲೂ ಫುಲ್‌ ಕಪ್ಪು ಬಟ್ಟೆ ಹಾಕೊಂಡು ಬಂದಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ. ಅದೆಷ್ಟೇ ಎಸಿಯಲ್ಲಿ ಬಂದ್ರೂ ಕಾರ್‌ನಿಂದ ಇಳಿದ ತನಕ ಸಖೆಯಂತೂ ಆಗ್ಬೇಕಲ್ಲ. ಬಹುಶಃ ಇಂಥಾ ಸಖೆಯಲ್ಲೂ ಫ್ಯಾಶನ್‌ಗಾಗಿ ಕಪ್ಪು ಬಟ್ಟೆ ಹಾಕೋಬೇಕು ಅಂದ್ರೆ ಸೆಲೆಬ್ರಿಟಿಗಳೇ ಆಗಿರ್ಬೇಕು ಅಂತಾಯ್ತು ಎಂದು ಟ್ರೋಲ್‌ ಮಾಡಿದ್ದಾರೆ.

ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಸಲ್ಮಾನ್ ಖಾನ್ : ಒಪ್ಪಲು ಕಾರಣ ರಿವೀಲ್ ಮಾಡಿದ ಕರಣ್‌ ಜೋಹರ್‌

65 ಲಕ್ಷದ ಬ್ಯಾಗ್‌: ಇನ್ನು ಕರಣ್‌ ಜೋಹರ್‌ ಅವರ ಲುಕ್‌ನಲ್ಲಿ ಹೆಚ್ಚಿನವರು ಅವರು ಹಿಡಿದುಕೊಂಡು ಬ್ಯಾಗ್‌ನ ಬಗ್ಗೆ ಅಚ್ಚರಿ ಪಟ್ಟಿದ್ದಾರೆ. ಅವರು ಹಿಡಿದುಕೊಂಡಿದ್ದು ಬಿರ್ಕಿನ್‌ ಅವರ ವ್ಯಾನಿಟಿ ಬ್ಯಾಗ್‌. ಅದರ ಬೆಲೆ ಕನಿಷ್ಠವೆಂದರೂ 65 ಲಕ್ಷ. ಇನ್ನೂ ಕೆಲವರು ಇದು ಬಿರ್ಕಿನ್‌ ಅವರ ಬ್ಯಾಗ್‌ ಅಲ್ಲ. ಬಾಲೆನ್ಸಿಯಾಗ ಬ್ರ್ಯಾಂಡ್‌ನ ಬ್ಯಾಗ್‌ ಎಂದು ಹೇಳಿದ್ದಾರೆ.  ಫ್ರೆಂಚ್‌ ಲಕ್ಷುರಿ ಬ್ಯಾಗ್‌ ಮೇಕರ್‌ ಆಗಿರುವ ಹೆರ್ಮೆಸ್‌ ಅವರ ಬ್ರ್ಯಾಂಡ್‌ ಬಿರ್ಕಿನ್‌. ಇಂಗ್ಲೀಷ್‌-ಫ್ರೆಂಚ್‌ ನಟಿ ಹಾಗೂ ಸಿಂಗರ್‌ ಜೇನ್‌ ಬಿರ್ಕಿನ್‌ ಅವರ ಹೆಸರನ್ನೇ ಈ ಬ್ಯಾಗ್‌ಗೆ ಇಡಲಾಗಿದೆ.

ಆಲಿಯಾ ಭಟ್‌ ಎರಡನೇ ಮದುವೆ ಗುಟ್ಟನ್ನು ರಟ್ಟು ಮಾಡಿದ ಕರಣ್‌ ಜೋಹರ್‌

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!