ರಾಕೇಶ್‌ ಜುಂಜುನ್‌ವಾಲಾ ಪತ್ನಿಗೆ ಒಂದೇ ದಿನ 800 ಕೋಟಿ, ಒಂದು ತಿಂಗಳಲ್ಲಿ 2360 ಕೋಟಿ ನಷ್ಟ!

By Santosh NaikFirst Published May 8, 2024, 4:40 PM IST
Highlights

ಷೇರು ಮಾರುಕಟ್ಟೆಯ ಬಿಗ್‌ಬುಲ್‌ ಎಂದೇ ಹೆಸರಾಗಿದ್ದ ರಾಕೇಶ್‌ ಜುಂಜುನ್‌ವಾಲಾ ಅವರ ಪತ್ನಿ ಸೋಮವಾರ ಒಂದೇ ದಿನ 800 ಕೋಟಿ ರೂಪಾಯಿ ನಷ್ಟ ಕಂಡಿದ್ದಾರೆ. ಇದು ಅವರು ಈವರೆಗೂ ಒಂದೇ ದಿನ ಎದುರಿಸಿದ ಅತಿದೊಡ್ಡ ನಷ್ಟದ ಪ್ರಮಾಣವಾಗಿದೆ.
 

ನವದೆಹಲಿ (ಮೇ.8):  ಬಿಗ್‌ಬುಲ್‌ ಎಂದೇ ಖ್ಯಾತರಾಗಿದ್ದ ಷೇರು ಮಾರುಕಟ್ಟೆ ನಿಪುಣ ರಾಕೇಶ್‌ ಜುಂಜುನ್‌ವಾಲಾ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಅವರು ಒಂದೇ ದಿನ ಷೇರುಮಾರುಕಟ್ಟೆಯಲ್ಲಿ 800 ಕೋಟಿ ರು.ನಷ್ಟ ಅನುಭವಿಸಿದ್ದಾರೆ. ಇದು ಈವರೆಗೂ ಅವರ ನಷ್ಟದಲ್ಲಿ ಅತ್ಯಧಿಕ ಪ್ರಮಾಣದ್ದಾಗಿದೆ. ರೇಖಾ ಅವರು ಟಾಟಾ ಕಂಪನಿ ಒಡೆತನದ ಟೈಟಾನ್‌ನಲ್ಲಿ 16,792 ಕೋಟಿ ರು. ಮೌಲ್ಯದ ಶೇ.5.35 ಪಾಲು ಹೊಂದಿದ್ದಾರೆ.  ಇದರ ಷೇರುಗಳು ಒಂದೇ ದಿನ ಪಾತಾಳಕ್ಕೆ ಕುಸಿತ ಕಂಡ ಪರಿಣಾಮ ರೇಖಾ ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ. ಟೈಟಾನ್‌ ಕಂಪನಿ ಮಂಗಳವಾರ ಒಂದೇ ದಿನ ಶೇ.7ರಷ್ಟು ಕುಸಿತ ಕಂಡಿದೆ. ಬುಧವಾರವೂ ಕೂಡ  ಮಾರುಕಟ್ಟೆಯಲ್ಲಿ ಶೇ. 0.50ರಷ್ಟು ಅಂದರೆ, ಪ್ರತಿ ಷೇರಿಗೆ 16 ರೂಪಾಯಿಯಂತೆ ಕುಸಿದಿದ್ದು, ಅವರ ನಷ್ಟದ ಪ್ರಮಾಣ ಇನ್ನಷ್ಟು ಏರಿಕೆಯಾಗಿದೆ. ಮಾರ್ಚ್ ತ್ರೈಮಾಸಿಕ ಗಳಿಕೆಯು ಹೂಡಿಕೆದಾರರನ್ನು ಹುರಿದುಂಬಿಸಲು ವಿಫಲವಾದ ಕಾರಣ, ಟೈಟಾನ್ ಷೇರುಗಳು 7% ಕ್ಕಿಂತ ಹೆಚ್ಚು ಕುಸಿದಿದ್ದರಿಂದ ಅವರು ಸೋಮವಾರ ದೊಡ್ಡ ನಷ್ಟವನ್ನು ಅನುಭವಿಸಿದ್ದಾರೆ.

ಸೋಮವಾರ ಷೇರು ಮಾರುಕಟ್ಟೆಯಲ್ಲಿ ಟೈಟಾನ್‌ ಗ್ರೂಪ್‌ನ 3352.25ರಂತೆ ವ್ಯವಹಾರ ಆರಂಭಿಸಿದ್ದವು. ದಿನದ ಕೊನೆಗೆ 3281.65ರಂತೆ ವಹಿವಾಟು ಮುಗಿಸಿದ್ದವು. ಇದರ ಪರಿಣಾಮ ಎನ್ನುವಂತೆ ಕಂಪನಿಯ ನಿವ್ವಳ ಮೌಲ್ಯ 3 ಲಕ್ಷ ಕೋಟಿಯಿಂದ ಕೆಳಗೆ ಇಳಿದಿದ್ದು ಸೋಮವಾರದ ವೇಳೆ 2.91 ಲಕ್ಷ ಕೋಟಿ ಆಗಿದೆ. ಸೋಮವಾರ ಒಂದೇ ದಿನ ಟೈಟಾನ್ಸ್ ಕಂಪನಿಯ ಮೌಲ್ಯದಲ್ಲಿ 22 ಸಾವಿರದಷ್ಟು ಇಳಿಕೆಯಾಗಿದೆ. ಬುಧವಾರದ ವೇಳೆಗೆ ಟೈಟಾನ್‌ ಕಂಪನಿಯ ಪ್ರತಿ ಷೇರುಗಳು 3252 ರೂಪಾಯಿಗೆ ಇಳಿಕೆ ಕಂಡಿದೆ. ಅಂದಾಜಿನ ಪ್ರಕಾರ, ಟೈಟಾನ್‌ನ ಈ ಕುಸಿತದಿಂದ ಜುಂಜುನ್‌ವಾಲಾ ಅವರ ಟೈಟಾನ್ ಷೇರಿನ ಮೌಲ್ಯವನ್ನು ಸುಮಾರು ₹ 15,986 ಕೋಟಿಗೆ ಇಳಿಕೆಯಾಗಿದೆ.

ಒಂದು ತಿಂಗಳ ಅವಧಿಯಲ್ಲಿ ಟೈಟಾನ್‌ ಕಂಪನಿಯ ಷೇರುಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಸರಿಯಾಗಿ ಒಂದು ತಿಂಗಳ ಹಿಂದೆ ಟೈಟಾನ್‌ ಕಂಪನಿಯ ಒಂದು ಷೇರಿನ ಬೆಲೆ 3749 ರೂಪಾಯಿ ಆಗಿತ್ತು. ಬುಧವಾರದ ವೇಳೆಗೆ ಇದು 3252 ರೂಪಾಯಿ ಆಗಿದೆ. ಇದರೊಂದಿಗೆ ಒಂದೇ ವಾರದಲ್ಲಿ ಕಂಪನಿಯ ಷೇರಿನ ಬೆಲೆಯಲ್ಲಿ  497 ರೂಪಾಯಿ ಇಳಿಕೆಯಾಗಿದೆ. ರೇಖಾ ಜುಂಜುನ್‌ವಾಲಾ ಮಾರ್ಚ್‌ 31ರ ವರದಿಯ ಅನುಸಾರ 4,74,83,470 ಷೇರುಗಳನ್ನು ಹೊಂದಿದ್ದಾರೆ. ಈ ಕುಸಿತವನ್ನೇ ಲೆಕ್ಕಾಚಾರ ಮಾಡಿದರೆ, ಅವರಿಗೆ ಒಂದು ತಿಂಗಳಲ್ಲಿ ಆಗಿರುವ ಒಟ್ಟಾರೆ ನಷ್ಟ 23,59,92,84,590 ರೂಪಾಯಿ ಅಂದರೆ, 2360 ಕೋಟಿ ರೂಪಾಯಿ.

ಒಂದೇ ಕಂಪನಿ ಷೇರಿನ ಮೂಲಕ 2 ತಿಂಗಳಲ್ಲಿ 2400 ಕೋಟಿ ಲಾಭ ಗಳಿಸಿದ ರೇಖಾ ಜುಂಜುನ್ವಾಲಾ: ಇವರ ಆಸ್ತಿ ಮೌಲ್ಯ ಎಷ್ಟು ನೋಡಿ..

ಹೊಸ ತ್ರೈಮಾಸಿಕದ ವರದಿಯ ಪ್ರಕಾರ, ಒಟ್ಟಾರೆ ತೆರಿಗೆ ಬಳಿಕದ ಆದಾಯದಲ್ಲಿ ಶೇ. 5ರಷ್ಟು ಏರಿಕೆಯಾಗಿ 771 ಕೋಟಿ ಮುಟ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯ ಪ್ಯಾಟ್‌ ಅಂದರೆ ತೆರಿಗೆ ಬಳಿಕದ ಆದಾಯ 736 ಕೋಟಿ ರೂಪಾಯಿ ಆಗಿತ್ತು. ಟೈಟಾನ್‌ನ ಒಟ್ಟು ಆದಾಯವು ಹಿಂದಿನ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ ₹ 9,419 ಕೋಟಿಯಿಂದ Q4 ರಲ್ಲಿ ₹ 11,472 ಕೋಟಿಗೆ ಏರಿಕೆಯಾಗಿದೆ. ಸಂಸ್ಥೆಯು FY23 ರಲ್ಲಿ ₹ 3,274 ಕೋಟಿಗೆ ಹೋಲಿಸಿದರೆ, ಹಿಂದಿನ ಹಣಕಾಸು ವರ್ಷದಲ್ಲಿ ₹ 3,496 ಕೋಟಿಗಳ ಏಕೀಕೃತ PAT ಅನ್ನು ಪೋಸ್ಟ್ ಮಾಡಿದೆ, FY24 ಗಾಗಿ ಕಂಪನಿಯ ಒಟ್ಟು ಆದಾಯವು 2022-23 ಹಣಕಾಸು ವರ್ಷದಲ್ಲಿ ₹ 38,675 ಕೋಟಿಗಿಂತ ₹ 47,501 ಕೋಟಿಗಳಷ್ಟಿದೆ.

ನನ್ನ ಅವಳಿ ಮಕ್ಕಳಿಗೆ 25 ವರ್ಷ ಆಗೋವರೆಗೆ ಬದುಕಬೇಕು, ಹಾಗಾಗಿ ಮೀನಿನ ಥರ ನೀರು ಕುಡಿತೇನೆ!

 

click me!