ಐಶ್ವರ್ಯ ರೈ- ಕತ್ರಿನಾ ಕೈಫ್ ಇಬ್ಬರಲ್ಲಿ ಸುಂದರಿಯರು ಯಾರು ಎಂದಾಗ ಮಾಜಿ ಲವರ್ ಸಲ್ಮಾನ್ ಖಾನ್ ಹೇಳಿದ್ದೇನು?
ಬಾಲಿವುಡ್ ಸ್ಟಾರ್ಸ್ ಐಶ್ವರ್ಯ ರೈ ಬಚ್ಚನ್ ಮತ್ತು ಸಲ್ಮಾನ್ ಖಾನ್ ಲವ್ ಸ್ಟೋರಿ ಎಲ್ಲರಿಗೂ ತಿಳಿದದ್ದೇ. ಐಶ್ವರ್ಯ ಅವರು, ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಸಲ್ಮಾನ್ ಖಾನ್ ಜೊತೆ ಡೇಟಿಂಗ್‌ನಲ್ಲಿ ಇದ್ದರು. ಇವರಿಬ್ಬರ ಮದುವೆ ನಡೆಯುತ್ತದೆ ಎಂದು ಭಾರಿ ಸುದ್ದಿಯಾಗಿತ್ತು. 90ರ ದಶಕದಲ್ಲಿ ಸಲ್ಮಾನ್ ಖಾನ್ (Salman Khan) ಮತ್ತು ಐಶ್ವರ್ಯಾ ರೈ (Aishwarya Rai) ಅವರ ಸಂಬಂಧ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ಅವರ ರೊಮ್ಯಾನ್ಸ್‌ಗಿಂತ ಬ್ರೇಕಪ್ ಹೆಚ್ಚು ಚರ್ಚೆಯಾಗಿತ್ತು. ವಾಸ್ತವವಾಗಿ, 1999 ರಲ್ಲಿ ಬಿಡುಗಡೆಯಾದ 'ಹಮ್ ದಿಲ್ ಚುಕೆ ಸನಮ್' ಚಿತ್ರದ ಸೆಟ್‌ಗಳಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ಪರಸ್ಪರ ಹತ್ತಿರವಾಗಿದ್ದರು. 2001 ರಲ್ಲಿ ಇಬ್ಬರೂ ಬೇರ್ಪಟ್ಟರು. ಇವರಿಬ್ಬರು ಬೇರ್ಪಟ್ಟಿರುವುದದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆಯಾದರೂ, ಐಶ್ವರ್ಯ ತಮಗೆ ಕೈಕೊಟ್ಟಿದ್ದಾರೆ ಎಂದು ಮೊನ್ನೆಮೊನ್ನೆಯವರೆಗೂ ಸಲ್ಮಾನ್ ಖಾನ್ ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ. ಇದೀಗ ಸಲ್ಲು ಭಾಯಿ ಅವಿವಾಹಿತರಾಗಿಯೇ ಉಳಿದಿದ್ದರೆ, ಐಶ್ವರ್ಯ ರೈ, ಬಚ್ಚನ್ ಕುಟುಂಬದ ಸೊಸೆಯಾಗಿ ಒಬ್ಬಳು ಮುದ್ದಾದ ಮಗಳು ಆರಾಧ್ಯಳ ಅಮ್ಮ ಕೂಡ ಆಗಿದ್ದಾರೆ.
ಸಲ್ಮಾನ್ ಖಾನ್ ಇಂದಿಗೂ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಆಗಿ ಉಳಿದಿದ್ದಾರೆ. ಅಷ್ಟಕ್ಕೂಐಶ್ವರ್ಯ ಮಾತ್ರವಲ್ಲದೇ ಕತ್ರೀನಾ ಕೈಫ್ ಅವರೊಂದಿಗೂ ಸಲ್ಮಾನ್ ರೋಮ್ಯಾಂಟಿಕ್ ಇತಿಹಾಸವನ್ನು ಹೊಂದಿದ್ದಾರೆ. ಈಗ, ಸಲ್ಮಾನ್ ಖಾನ್ ಅವರ ಹಳೆಯ ವಿಡಿಯೋ ಒಂದು ಮತ್ತೆ ವೈರಲ್ ಆಗಿದೆ, ಇದರಲ್ಲಿ ಸಲ್ಮಾನ್ ತಮ್ಮ ಮಾಜಿ ಗೆಳತಿಯರಾದ ಐಶ್ವರ್ಯಾ ಮತ್ತು ಕತ್ರಿನಾ ನಡುವೆ ಆಯ್ಕೆ ಮಾಡುವ ಪ್ರಶ್ನೆಗೆ ಉತ್ತರಿಸಿದ್ದಾರೆ.
ಮಗು ಹುಟ್ಟುವ ಸಮಯದಲ್ಲಿ ಮದ್ವೆ ಫೋಟೋ ಡಿಲೀಟ್ ಮಾಡಿದ್ದೇಕೆ ರಣವೀರ್ ಸಿಂಗ್? ಕೊನೆಗೂ ಸಿಕ್ತು ಕಾರಣ...
'ರೆಡ್ಡಿಟ್' ನಲ್ಲಿ ಹಳೆಯ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಟಾಕ್ ಶೋ 'ಕಾಫಿ ವಿತ್ ಕರಣ್'ದ ವಿಡಿಯೋ ಇದಾಗಿದೆ. ಇದರಲ್ಲಿ ಐಶ್ವರ್ಯಾ ರೈ ಬಚ್ಚನ್ ಅಥವಾ ಕತ್ರಿನಾ ಕೈಫ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಕರಣ್ ಸಲ್ಮಾನ್ ಅವರನ್ನು ಕೇಳಿದ್ದರು. ಐಶ್ವರ್ಯಾ ಮತ್ತು ಕತ್ರಿನಾ ಅವರಲ್ಲಿ ಯಾರು ಹೆಚ್ಚು ಸುಂದರಿ ಹಾಗೂ ಅದ್ಭುತ ಎಂದು ಕರಣ್ ಕೇಳಿದಾಗ, ಸಲ್ಮಾನ್ ಮೊದಲಿಗೆ ನಟಿ ಐಶ್ವರ್ಯಾ ರೈ ಬಚ್ಚನ್ ಹೆಸರು ಹೇಳುತ್ತಲೇ ಮಾತು ಬದಲಿಸಿ ಕತ್ರಿನಾ ಕೈಫ್ ಎಂದರು. ಸದ್ಯ ಕತ್ರಿನಾ ಅವರು ಸಿಂಗಲ್ ಆಗಿದ್ದು, ಅವರ ಹೆಸರಿನ ನಡುವೆ ಯಾರ ಸರ್ನೇಮ್ ಸೇರುತ್ತದೆ ಎಂದು ನೋಡಬೇಕಿದೆ ಎಂದರು. ಆದರೆ ಈಗ ಕತ್ರೀನಾ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿದ್ದಾರೆ.
'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದಲ್ಲಿ ಕೆಲಸ ಮಾಡುವಾಗ ಐಶ್ವರ್ಯಾ ರೈ ಮತ್ತು ಸಲ್ಮಾನ್ ಪರಸ್ಪರ ಹತ್ತಿರವಾಗಿದ್ದರು. ಆದಾಗ್ಯೂ, ಅವರು ಕೆಲವು ವರ್ಷಗಳ ನಂತರ ಬೇರ್ಪಟ್ಟರು. ಇದರ ನಂತರ, ಐಶ್ವರ್ಯಾ ಅಭಿಷೇಕ್ ಬಚ್ಚನ್ ಅವರನ್ನು ಭೇಟಿಯಾದರು ಮತ್ತು ಸ್ವಲ್ಪ ಸಮಯದ ಡೇಟಿಂಗ್ ನಂತರ ಅವರು ಏಪ್ರಿಲ್ 2007 ರಲ್ಲಿ ವಿವಾಹವಾದರು. ಮತ್ತೊಂದೆಡೆ ಕತ್ರಿನಾ ಮತ್ತು ಸಲ್ಮಾನ್ ಡೇಟಿಂಗ್ ಮಾಡಲು ಶುರು ಮಾಡಿದರು. ಆದರೂ ಕತ್ರಿನಾ 9 ಡಿಸೆಂಬರ್ 2021 ರಂದು 'ಸಿಕ್ಸ್ ಸೆನ್ಸ್ ಫೋರ್ಟ್' ಬರ್ವಾಡದಲ್ಲಿ ವಿಕ್ಕಿ ಕೌಶಲ್ ಅವರನ್ನು ವಿವಾಹವಾಗಿದ್ದಾರೆ.
ಕಮಲ ಹಾಸನ್ ವಿರುದ್ಧ ವಂಚನೆ ಆರೋಪ: ನಿರ್ಮಾಪಕರಿಂದ ದೂರು ದಾಖಲು: ಆಗಿದ್ದೇನು?