ರಾಮಾಯಣ: ಸಾಯಿ ಪಲ್ಲವಿ ಬಿಟ್ಟು ಬೇರೆ ನಟಿಯರು ಸೀತಾ ಮಾಡಿದ್ದರೆ ಹೇಗೆ ಕಾಣ್ತಿದ್ದರು?

Published : May 08, 2024, 04:45 PM ISTUpdated : May 09, 2024, 12:17 PM IST

ರಣಬೀರ್‌ ಕಪೂರ್‌ ಮತ್ತು ಸಾಯಿಪಲ್ಲವಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಿತೀಶ್ ತಿವಾರಿ ಅವರ ಬಹು ನೀರಿಕ್ಷಿತ ಪ್ರಾಜೆಕ್ಟ್‌ ರಾಮಾಯಾಣ ಚಿತ್ರೀಕರಣ ಪ್ರಾರಂಭವಾಗಿದೆ. ಈ ಸಿನಿಮಾದ ಶೂಟಿಂಗ್‌‌ನ ಕೆಲವು ಪೋಟೋಗಳು ಹೊರಬಿದ್ದಿವೆ. ನಟಿ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿರುವ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಹಾಗಾದರೆ ಸಾಯಿ ಪಲ್ಲವಿ ಬದಲು ಈ ಪಾತ್ರಕ್ಕೆ ಹೆಚ್ಚು ಸೂಟ್‌ ಆಗುವ ನಟಿ ಯಾರಾಗಬಹುದಿತ್ತು? ಈ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ ಚರ್ಚೆ ನಡೆಯುತ್ತಿದ್ದು, ಈ ಸಂಬಂಧ ಬೇರೆ ಬೇರೆ ನಟಿಯರು ಸೀತಾ ಡ್ರೆಸ್ಸಲ್ಲಿರೋ ಫೋಟೋಗಳು ವೈರಲ್ ಆಗಿವೆ.   

PREV
19
ರಾಮಾಯಣ: ಸಾಯಿ ಪಲ್ಲವಿ ಬಿಟ್ಟು ಬೇರೆ ನಟಿಯರು ಸೀತಾ ಮಾಡಿದ್ದರೆ ಹೇಗೆ ಕಾಣ್ತಿದ್ದರು?

ನಿತೀಶ್ ತಿವಾರಿ ಬಹಳ ಸಮಯದಿಂದ ರಾಮಾಯಣದ ಮೇಲೆ ಚಲನಚಿತ್ರ ಮಾಡಲು ಯೋಚಿಸುತ್ತಿದ್ದು, ಅಂತೂ ಇಂತೂ ಕೆಲವು ವಾರಗಳ ಹಿಂದೆ ಚಿತ್ರದ ಶೂಟಿಂಗ್ ಸಹ ಆರಂಭವಾಗಿದೆ. 
 

29

ವರದಿಗಳ ಪ್ರಕಾರ ನಿತೇಶ್ ತಿವಾರಿಯವರ ರಾಮಾಯಣದಲ್ಲಿ ರಾಮನಾಗಿ ರಣಬೀರ್ ಕಪೂರ್, ಸನ್ನಿ ಡಿಯೋಲ್ ಹನುಮಾನ್ , ಸೀತೆ ಆಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಯಶ್ ನಟಿಸಿದ್ದಾರೆ.

39

ಕೆಲವು ದಿನಗಳ ಹಿಂದೆ ರಾಮಾಯಣದ ಸೆಟ್‌ಗಳಿಂದ ರಣಬೀರ್‌ ಮತ್ತು ಸಾಯಿ ಪಲ್ಲವಿಯವರ ಕೆಲವು ಚಿತ್ರಗಳು ಸೋರಿಕೆಯಾಗಿದ್ದು, ದೊಡ್ಡ ವಿವಾದವನ್ನೇ ಸೃಷ್ಟಿಸುತ್ತಿದೆ.

49

 ಸೀತೆಯಾಗಿ ನಟಿಸುತ್ತಿರುವ ಸಾಯಿ ಪಲ್ಲವಿಯನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ. ಹಾಗಾದರೆ ಸಾಯಿ ಪಲ್ಲವಿಗಿಂತ ಸೀತೆಯಾಗಿ ನಟಿಸಲು ಯಾವ ನಟಿ ಹೆಚ್ಚು ಸೂಕ್ತ?

59

ದೀಪಿಕಾ ಪಡುಕೋಣೆ:
 ದೀಪಿಕಾ ಪಡುಕೋಣೆ ಮಸ್ತಾನಿ ಮತ್ತು ಪದ್ಮಾವತಿಯಂತಹ  ಐತಿಹಾಸಿಕ ಪಾತ್ರಗಳಲ್ಲಿ ಮಿಂಚಿದ್ದಾರೆ ಮತ್ತು ಅವರು ಸೀತೆಯಾಗಿ ಆಕರ್ಷಕವಾಗಿ ಕಾಣುತ್ತಾರೆ.

69

ತ್ರಿಷಾ ಕೃಷ್ಣ:
ಮಣಿರತ್ನಂ PS1 ಮತ್ತು PS2 ನಲ್ಲಿ ತ್ರಿಶಾ ರಾಣಿ ಕಂಡವೈ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಅಭಿಮಾನಿಗಳು ಅವರನ್ನು ಸೀತೆಯಾಗಿ ನೋಡಲು  ಇಷ್ಟಪಟ್ಟಿದ್ದಾರೆ.

79

ಮೃಣಾಲ್ ಠಾಕೂರ್:
 ಅಭಿಮಾನಿಗಳು ಮೃಣಾಲ್ ಠಾಕೂರ್ ಅವರ ಸೀತಾ ರಾಮಂನಲ್ಲಿನ ಸೀತೆಯ ಪಾತ್ರಕ್ಕೆ ಹೆಚ್ಚು ಸಮಂಜವೆಂದು ಯೋಚಿಸುತ್ತಿದ್ದು, ಇವರನ್ನೇ ಸೀತೆ ಮಾಡಬಹುದಿತ್ತೆಂದು ಸಲಹೆ ನೀಡುತ್ತಿದ್ದಾರೆ. 

89

ಆಲಿಯಾ ಭಟ್:
ವರದಿಗಳ ಪ್ರಕಾರ, ಮೂಲತಃ  ಈ ಚಿತ್ರಕ್ಕಾಗಿ ಆಲಿಯಾ ಸೀತಾ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಅವರು ಸಿನಿಮಾದಿಂದ ಹೊರ ನಡೆದಿದ್ದಾರೆ. ಆಲಿಯಾ RRR ನಲ್ಲಿ ಸೀತಾ ಪಾತ್ರವನ್ನು ಸಹ ಮಾಡಿದ್ದಾರೆ ಮತ್ತು ಅಭಿಮಾನಿಗಳು ಅವಳನ್ನು ತೆರೆ ಮೇಲೆ ರಣಬೀರ್ ಜೊತೆ ಜೋಡಿಯಾಗಿ ನೋಡಲು ಇಷ್ಟ ಪಡುತ್ತಾರೆ.

99

ಶ್ರಿಯಾ ಸರನ್:
ಶ್ರಿಯಾ ಶರಣ್ ಸೀತೆಯಂತಹ ದೈವಿಕ ಪಾತ್ರವನ್ನು ನಿರ್ವಹಿಸಲು ಪರಿಪೂರ್ಣವಾದ ಮುಖದ ವೈಶಿಷ್ಟ್ಯವನ್ನು ಹೊಂದಿದ್ದಾರೆ. 

Read more Photos on
click me!

Recommended Stories