Panchanga: ಪಿತೃ ದೇವತೆಗಳ ಸ್ಮರಣೆಗೆ ಕಾರ್ತಿಕ ಮಾಸ ಪವಿತ್ರ ಕಾಲ!

Nov 17, 2022, 10:36 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಗುರುವಾರ, ನವಮಿ ತಿಥಿ, ಮಖಾ ನಕ್ಷತ್ರ. ಈ ದಿವಸ ಸೂರ್ಯ ಸಂಕ್ರಮಣ ಇದೆ. ಇಷ್ಟು ದಿನ ನೀಚಾ ಸ್ಥಾನದಲ್ಲಿದ್ದಂತ ಸೂರ್ಯ ಇಂದು ತನ್ನ ಮಿತ್ರನ ಮನೆಗೆ ಪ್ರವೇಶ ಮಾಡುತ್ತಿದ್ದಾನೆ. ಸೂರ್ಯ ಸಂಕ್ರಮಣ ಕಾಲದಲ್ಲಿ ನಾವು ಸೂರ್ಯನ ಪ್ರಾರ್ಥನೆಯನ್ನು ಮಾಡಬೇಕು. ನಾವು ಸಂಕ್ರಮಣ ಇದ್ದಾಗಲೂ ಕೂಡಾ ಪಿತೃ ದೇವತೆಗಳ ಆರಾಧನೆಯನ್ನು ಮಾಡಬೇಕು. ಪಿತೃ ದೇವತೆಗಳ ಸ್ಮರಣೆಗೆ ಕಾರ್ತೀಕ ಮಾಸ ಪವಿತ್ರ ಕಾಲ. ಹೀಗಾಗಿ ಭಾದ್ರಪದ ಮಾಸದಲ್ಲಿ ಪಿತೃಪೂಜೆ ಮಾಡದೇ ಇದ್ದವರು ಈ ಸಂಕ್ರಮಣದಲ್ಲಿ ಆರಾಧನೆ ಮಾಡಿದರೆ ಒಳಿತು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರ, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ.