Panchang: ಇಂದು ಬುಧ ಗ್ರಹ ಗೋಚಾರ, ರಾಶಿಗಳ ಮೇಲೆ ಪರಿಣಾಮವೇನು?

Dec 27, 2022, 8:55 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಶ್ಯ ಮಾಸ, ಶುಕ್ಲ ಪಕ್ಷ, ಮಂಗಳವಾರ, ಚತುರ್ಥಿ ಉಪರಿ ಪಂಚಮಿ ತಿಥಿ, ಧನಿಷ್ಠ ನಕ್ಷತ್ರ.  

 ಪಂಚಮಿ ತಿಥಿಯು ನಾಗಾರಾಧನೆಗೆ ತುಂಬಾ ಉತ್ಕೃಷ್ಟ. ನಾಳೆ ಷಷ್ಠಿ ಇರುವುದರಿಂದ ನಾಳೆ ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಬೇಕು. ನಮ್ಮೊಳಗಿನ ಕುಂಡಲಿನಿ ಶಕ್ತಿಯನ್ನು ಜಾಗ್ರತಗೊಳಿಸುವುದು ನಾಗಾರಾಧಾನೆಯ ಶ್ರೇಷ್ಠ ದಾರಿ. ಈ ಆರಾಧಾನೆಯಿಂದ ವಂಶವೃಕ್ಷ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ನಾಗನನ್ನು ಸಂಪ್ರೀತಗೊಳಿಸಲು ಏನೆಲ್ಲ ಮಾಡಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ಇಂದು ಬುಧ ಗ್ರಹ ರಾಶಿ ಪರಿವರ್ತನೆ ಮಾಡುತ್ತಿದ್ದಾನೆ. ಇದರ ಪರಿಣಾಮಗಳು, ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನೂ ತಿಳಿಸಲಾಗಿದೆ. 

ಬರೋಬ್ಬರಿ 30 ವರ್ಷದ ಬಳಿಕ ಶನಿ ಕುಂಭ ಸಂಕ್ರಮಣ; 3 ರಾಶಿಗಳಿಗೆ ವರ ತರಲಿರುವ ಶಶ ಮಹಾಪುರುಷ ಯೋಗ