ದೇಶದ ಅತ್ಯಂತ ಎತ್ತರದ ಏಕಶಿಲಾ ವಿಗ್ರಹ: ಶನಿದೇವರ ವಿಶೇಷ ಆರಾಧನೆ

Jan 24, 2020, 2:35 PM IST

ಉಡುಪಿ(ಜ.24): ಮಕರ ರಾಶಿಗೆ ಶನಿ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಶನಿದೇವರಿಗೆ ವಿಶೇಷ ಪೂಜೆ ನಡೆಯುತ್ತಿದೆ. ಉಡುಪಿಯಲ್ಲಿ ವಿಶೇಷ ಶನಿ ದೇವಾಲಯವಿದ್ದು, ಇಲ್ಲಿ ದೇಶದಲ್ಲಿಯೇ ಅತ್ಯಂತ ಎತ್ತರದ ಶನಿ ದೇವರ ಮೂರ್ತಿ ಇದೆ.

ಉಡುಪಿಯ ಬನ್ನಂಜೆಯಲ್ಲಿದೆ ಅಪರೂಪದ ಶನಿ ಕ್ಷೇತ್ರದಲ್ಲಿ ವಿಶೇಷ ಪೂಜೆಗಳು ನಡೆದಿದ್ದು, ಇಲ್ಲಿರುವ ಏಕಶಿಲಾ ಶನಿ ವಿಗ್ರಹವೇ ಈ ದೇವಾಲಯದ ವಿಶೇಷ. ದೇಶದಲ್ಲಿ ಎತ್ತರದ ಶನಿ ವಿಗ್ರಹವಿರುವ ದೇಗುಲ ಇದಾಗಿದ್ದು, ಕ್ಷೇತ್ರದಲ್ಲಿಂದು ವಿಶೇಷ ಹೋಮ ಹವನಗಳು ನಡೆದಿವೆ.

ಮಕರ ರಾಶಿಗೆ ಶನಿ ಪ್ರವೇಶ: ಮಂಡ್ಯದಲ್ಲಿ ವಿಶೇಷ ಪೂಜೆ

ಇಲ್ಲಿ ಎಳ್ಳೆಣ್ಣೆಯನ್ನು ಜನರು ತಂದು ದೇವರಿಗೆ ಅರ್ಪಿಸುತ್ತಾರೆ. ಇಲ್ಲಿ ಭಕ್ತರೇ ದೇವರ ಸಮೀಪಕ್ಕೆ ಹೋಗಿ ಪೂಜೆ ಸಲ್ಲಿಸಬಹುದು. ಭಕ್ತರೇ ಆರತಿ ಬೆಳಗಿ ಪೂಜೆ ಮಾಡಲೂ ಇಲ್ಲಿ ಅವಕಾಶವಿದೆ. ಮಕರ ರಾಶಿಗೆ ಶನಿ ಪ್ರವೇಶಿಸುತ್ತಿರುವುದರಿಂದ ವಿಜೃಂಭಣೆಯಲ್ಲಿ ಪೂಜೆ ನಡೆದಿದೆ.