ಆರಾಧ್ಯ ಬರ್ತ್‌ಡೇ: ಬಚ್ಚನ್ ಕುಟುಂಬದ ಒಬ್ಬರಿಂದ ಮಾತ್ರ ಐಶ್ ಪುತ್ರಿಗೆ ವಿಶ್

First Published | Nov 19, 2024, 11:30 AM IST

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಡಿವೋರ್ಸ್ ರೂಮರ್ಸ್‌ಗಳ ನಡುವೆ, ಬಚ್ಚನ್ ಕುಟುಂಬದ ಒಬ್ಬರೇ ಒಬ್ಬ ಸದಸ್ಯ ಆರಾಧ್ಯಳ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದ್ದಾರೆ, ಇದು ದಂಪತಿಯ ಸಂಬಂಧದ ಬಗ್ಗೆ ಹೆಚ್ಚಿನ ಊಹಾಪೋಹಗಳಿಗೆ ಕಾರಣವಾಗಿದೆ.
 

ಬಾಲಿವುಡ್‌ನ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದಾದ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಡುವಣ ಸಂಬಂಧ ಮೊದಲಿನಂತಿಲ್ಲ ಯಾವುದು ಸರಿಯಾಗಿಲ್ಲ, ಎಂಬುದು ಬಹುಕಾಲದಿಂದ ಇರುವಂತಹ ಊಹಾಪೋಹ. ಈ ಮಧ್ಯೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಏಕೈಕ ಪುತ್ರಿ ಆರಾಧ್ಯಾ ಬಚ್ಚನ್ 14ನೇ ವರ್ಷಕ್ಕೆ ಕಾಲಿರಿಸಿದ್ದು, ಆರಾಧ್ಯಾಗೆ ಬಚ್ಚನ್ ಕುಟುಂಬದ ಒಬ್ಬ ವ್ಯಕ್ತಿಯ ಹೊರತಾಗಿ ಆ ಕುಟುಂಬದ ಬೇರೆ ಯಾರು ಕೂಡ ವಿಶ್ ಮಾಡಿಲ್ಲ ಎನ್ನಲಾಗಿದೆ.  ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ಭಾವ ಆಗಸ್ತ್ಯ ನಂದಾ, ಅತ್ತೆ ಶ್ವೇತಾ ಬಚ್ಚನ್, ಅತ್ತಿಗೆ ನವ್ಯಾ ನಂದ ನವೇಲಿ ಸೇರಿದಂತೆ ಯಾರೊಬ್ಬರೂ ವಿಶ್ ಮಾಡಿಲ್ಲ, ಇದು ಕುಟುಂಬದೊಳಗೆ ಐಶ್ ಮೇಲಿರುವ ಅಸಮಾಧಾನವನ್ನು ಸೂಚಿಸುತ್ತಿದೆ ಎಂಬ ಊಹಾಪೋಹಗಳು ಹಬ್ಬಿವೆ.

ಐಶ್ವರ್ಯಾ ರೈ ಪುತ್ರಿ ಆರಾಧ್ಯ ಸ್ಟಾರ್ ನಟಿಯ ಪುತ್ರಿಯಾದರು ತಮ್ಮ ವಿನಮ್ರ ಗುಣದ ಕಾರಣಕ್ಕೆ ಅನೇಕರ ಮೆಚ್ಚುಗೆ ಗಳಿಸಿದ್ದಾರೆ. ಸೇಫ್‌ಗಾರ್ಡ್ ರೀತಿ  ಅಮ್ಮನ ಜೊತೆ ಸದಾ ಇರುವ ಆರಾಧ್ಯಗೂ ಈಗ ಅನೇಕ ಅಭಿಮಾನಿಗಳಿದ್ದಾರೆ.  ಇತ್ತೀಚೆಗೆ ಅವರು ಅಬುಧಾಬಿಯಲ್ಲಿ ನಡೆದ ಐಫಾ ಕಾರ್ಯಕ್ರಮದಲ್ಲಿ ಅಮ್ಮ ಐಶ್ವರ್ಯಾ ರೈ ಜೊತೆ ಭಾಗವಹಿಸಿದ್ದರು, ಇದೇ ಕಾರ್ಯಕ್ರಮದಲ್ಲಿದ್ದ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್ ಅವರ ಕಾಲಿಗೆ ಬಿದ್ದು ಆರಾಧ್ಯ ಆಶೀರ್ವಾದ ಪಡೆದಿದ್ದು, ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಐಶ್ವರ್ಯಾ ರೈ ಮಗಳಿಗೆ ಒಳ್ಳೆಯ ಸಂಸ್ಖಾರ ಕಲಿಸಿದ್ದಾರೆ ಎಂದು ಜನ ಮಾತನಾಡಿದ್ದರು. ಆದರೂ ಈ ಬಾರಿ ಆರಾಧ್ಯ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನಡೆಸಿದಂತೆ ಕಾಣಿಸುತ್ತಿಲ್ಲ, , ಐಶ್ವರ್ಯಾ ಅಥವಾ ಅಭಿಷೇಕ್ ಅವರಾಗಲಿ ಯಾರೊಬ್ಬರು  ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ  ಆರಾಧ್ಯಾಗೆ ವಿಶ್ ಮಾಡಿಲ್ಲ, 

Tap to resize

ಆದರೆ ಐಶ್ವರ್ಯಾ ಮತ್ತು ಅಭಿಷೇಕ್ ಮೌನವಾಗಿದ್ದರು, ಆರಾಧ್ಯಳ ಅಜ್ಜ ಅಮಿತಾಬ್ ಬಚ್ಚನ್ ಮಾತ್ರ ಮೊಮ್ಮಗಳ ಹುಟ್ಟುಹಬ್ಬವನ್ನು ಮರೆತಿಲ್ಲ. ಅವರು ಟ್ವಿಟ್ಟರ್‌ನಲ್ಲಿ ಮೊಮ್ಮಗಳು ಆರಾಧ್ಯ  ಪೋಷಕರ ಜೊತೆಗಿರುವ ಮುದ್ದಾದ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮುದ್ದು ಮೊಮ್ಮಗಳಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ. ವೀಡಿಯೋದಲ್ಲಿ ಆಕೆಯ ಸುಂದರ ಬಾಲ್ಯದ ದೃಶ್ಯಾವಳಿಗಳಿವೆ. 

ವೀಡಿಯೊದಲ್ಲಿ ಆರಾಧ್ಯ ತನ್ನ ತಂದೆ ಅಭಿಷೇಕ್ ಕಡೆಗೆ ಓಡುತ್ತಿರುವ ಮತ್ತು ಪೋಷಕರೊಂದಿಗೆ ನೃತ್ಯ ಮಾಡುತ್ತಿರುವ ಭಾವುಕ ದೃಶ್ಯಗಳು ಸೇರಿವೆ. ಜೊತೆಗೆ ಅಭಿಷೇಕ್‌ಗೆ ಆರಾಧ್ಯಳ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಈ ವೀಡಿಯೋ  ಬಚ್ಚನ್ ಕುಟುಂಬದ ಖಾಸಗಿ ವಿಚಾರಗಳ ಬಗ್ಗೆ ಸಾರ್ವಜನಿಕರ ಕುತೂಹಲವನ್ನು ಹೆಚ್ಚಿಸಿದೆ.

ಐಶ್ವರ್ಯಾ ರೈ ಮೊದಲ ಸಿನಿಮಾ ಇದು

ಇತ್ತ ಐಶ್ವರ್ಯಾ ಮತ್ತು ಅಭಿಷೇಕ್ ಅವರ ಸಂಬಂಧದ ಬಗ್ಗೆ ಊಹಾಪೋಹಗಳು ಹೆಚ್ಚಾಗಿವೆ. ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಮತ್ತು ಗ್ರೇ ಡಿವೋರ್ಸ್‌ ಕಡೆಗೆ ಸಾಗುತ್ತಿದ್ದಾರೆ ಎಂಬ ವರದಿಗಳು ಕೇಳಿಬಂದಿವೆ. ಗಾಸಿಪ್‌ಗಳ ಹೊರತಾಗಿಯೂ, ಬಚ್ಚನ್ ಕುಟುಂಬವು ಎಲ್ಲೂ ಈ ವಿಚಾರಗಳ ಬಗ್ಗೆ ತುಟಿ ಬಿಚ್ಚಿಲ್ಲ,

Latest Videos

click me!