ಮಹಾಮಾರಿ ಕೊರೋನಾಗೆ ಬೆಚ್ಚಿ ಬಿದ್ದ ಗುಮ್ಮಟನಗರಿ ವಿಜಯಪುರ

Apr 13, 2020, 1:06 PM IST

ವಿಜಯಪುರ(ಏ.13): ನಿನ್ನೆ(ಭಾನುವಾರ) ಒಂದೇ ದಿನ ನಗರದಲ್ಲಿ ಆರು ಕೊರೋನಾ ಪಾಸಿಟಿವ್‌ ಪ್ರಕರಣಗಳು ಕಾಣಿಸಿಕೊಂಡಿವೆ. ಇದರಿಂದ ನಗರದ ಜನತೆ ಆತಂಕದಲ್ಲಿದ್ದಾರೆ.  ಕೊರೋನಾ ಸೋಂಕು ಕಾಣಿಸಿಕೊಂಡ ವೃದ್ಧೆಯ ಕುಟುಂಬದವರಿಂದ ಮಾಹಿತಿ ಮುಚ್ಚಿ ಹಾಕುವ ಯತ್ನ ನಡೆದಿದೆ. 

ವಿಜಯಪುರ ಕೊರೋನಾ ಪ್ರಕರಣ: ವೈರಸ್ ಮೂಲ ಇನ್ನೂ ನಿಗೂಢ, ಸೃಷ್ಟಿಸಿದೆ ತಲ್ಲಣ!

ಮೊಬೈಲ್‌ ಕಾಲ್‌ ಹಿಸ್ಟರಿಯನ್ನ ವೃದ್ಧೆಯ ಕುಟುಂಬಸ್ಥರು ಡಿಲೀಟ್ ಮಾಡಿದ್ದರು. ಮಾಹಿತಿ ಕೇಳಿದ್ರೂ ಸರಿಯಾಗಿ ಮಾಹಿತಿ ನೀಡದಿದ್ದರಿಂದ ಮೊಬೈಲ್‌ ಅನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಸೋಂಕಿತ ವೃದ್ಧೆಯ ಮನೆಯಲ್ಲಿ 25 ಜನರು ಇದ್ದಾರೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಜನರು ಭಯದಿಂದ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.