ಧಾರವಾಡದಲ್ಲಿ ರಾಮಮಂದಿರ ನಿರ್ಮಾಣ, ಮನಗೆದ್ದ ಮರಳಿನ ಕಲಾಕೃತಿ

Aug 4, 2020, 6:54 PM IST

ಧಾರವಾಡ(ಆ. 05)  ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಧಾರವಾಡದಲ್ಲಿಯೂ ರಾಮಮಂದಿರ ನಿರ್ಮಾಣವಾಗಿದೆ.

ಅಯೋಧ್ಯಾ ಹೇಗೆ ಕಂಗೊಳಿಸುತ್ತಿದೆ? ನೋಡಿಕೊಂಡು ಬನ್ನಿ

ಧಾರವಾಡ ದೊಡ್ಡನಾಯಕನ ಕೊಪ್ಪದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಕಲಾಕೃತಿಯನ್ನು ಮರಳಿನಲ್ಲಿ ರಚಿಸಲಾಗಿದೆ.  12 ಅಡಿ ಅಗಲ ಹಾಗೂ 8 ಅಡಿ ಎತ್ತರದ ಶ್ರೀರಾಮ ಮಂದಿರದ ಕಲಾಕೃತಿ ಸುಂದರವಾಗಿ ಮೂಡಿಬಂದಿದೆ. ಕೆಲಗೇರಿಯ ಪರಿಸರಸ್ನೇಹಿ ಮೂರ್ತಿ ಕಲಾವಿದ ಮಂಜುನಾಥ ಹಿರೇಮಠ ಕಲಾಕೃತಿ ನಿರ್ಮಿಸಿದ್ದಾರೆ.  ಜನಜಾಗೃತಿ ಸಂಘದ ಬಸವರಾಜ ಕೊರವರ ಮತ್ತು ಗ್ರಾಮಸ್ಥರು  ಸಹಕಾರ ನೀಡಿದ್ದಾರೆ.