ಲಾಕ್‌ಡೌನ್ ನಿಯಮ ಗಾಳಿಗೆ ತೂರಿ ಲೋಟ ಹಾಲಿಗೆ ಮುಗಿಬಿದ್ದ ದಾವಣಗೆರೆ ಮಂದಿ

Apr 16, 2020, 2:04 PM IST

ದಾವಣಗೆರೆ(ಏ.16): ದಾವಣಗೆರೆಯಲ್ಲಿ ಜನ ಲಾಕ್‌ಡೌನ್‌ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಬೆಳ್ಳಂಬೆಳಗ್ಗೆಯೇ ತರಕಾರಿ ಖರೀದಿಗೆ ಜನ ಮಾರ್ಕೆಟ್‌ಗೆ ಮುಗಿಬಿದ್ದಿದ್ದಾರೆ. ಅಂತರ ಕಾಪಾಡಿಕೊಳ್ಳದೆ ಜನ ತರಕಾರಿ ಕೊಳ್ಳಲು ಮುಗಿಬಿದ್ದಿದ್ದಾರೆ.

ಇನ್ನು ಲೋಟ ಹಾಲಿಗಾಗಿ ಮಹಿಳೆಯರು, ಮಕ್ಕಳು ಮುಗಿಬಿದ್ದಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಆಝಾದ್ ನಗರದಲ್ಲಿ ಜನ ಹಾಲಿಗಾಗಿ ಪೈಪೋಟಿ ನಡೆಸಿದ್ದಾರೆ.

'ಗೆಲ್ಲಿಸಿದ್ದು ನಾವು, ಬೆಂಗ್ಳೂರಲ್ಲಿ ರೇಷನ್ ಹಂಚ್ತೀರಾ'..? ಶೋಭಾ ವಿರುದ್ಧ ಕಿಡಿ

ಆರೋಗ್ಯ ಇಲಾಖೆಯಿಂದ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದ್ದರೂ ಜನ ಮಾತ್ರ ಮಾಸ್ಕ್ ಧರಿಸದೆ, ಅಂತರವನ್ನೂ ಕಾಯ್ದುಕೊಳ್ಳದೆ ಖರೀದಿಗೆ ಮುಗಿಬಿದ್ದಿದ್ದಾರೆ. ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ದಾವಣಗೆರೆ ಜನ ಎಚ್ಚೆತ್ತುಕೊಳ್ಳಬೇಕಿದೆ.