ಕೋಲಾರದ ವೃದ್ಧ ದಂಪತಿಗೆ ಔಷಧಿ ಪೂರೈಕೆ; ಸ್ವೀಡನ್‌ನಿಂದ ವಿಜಯೇಂದ್ರ ತಂಡಕ್ಕೆ ಮಗಳ ಧನ್ಯವಾದ

May 2, 2020, 10:16 AM IST

ಕೋಲಾರ (ಮೇ. 02): ವಿಜಯೇಂದ್ರ ಅವರ ಸಾಮಾಜಿಕ ಕೆಲಸಕ್ಕೆ ವಿದೇಶದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.  ಲಾಕ್‌ಡೌನ್ ಘೋಷಣೆಯಾದಾಗಿನಿಂದ ವಿಜಯೇಂದ್ರ ನೇತೃತ್ವದ ಯುವ ಮೋರ್ಚಾ ತಂಡ ಔಷಧಿ ವಿತರಣೆಗೆ ಚಾಲನೆ ಕೊಟ್ಟಿತ್ತು. ಅದರಂತೆ ಯಾರಿಗಾದರೂ ತುರ್ತು ಔಷಧಿ ಅಗತ್ಯ ಬಿದ್ದರೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿತ್ತು. ಅದರಂತೆ ಕೋಲಾರದ ಇಪಶ್ವಿನಿ ಎಂಬುವವರ ಪೋಷಕರಿಗೆ ಔಷಧಿ ಅಗತ್ಯ ಇದೆ ತಿಳಿದಾಗ ಮನೆಗೆ ಬಂದು ಔ‍ಷಧಿ ಪೂರೈಸಿದ್ದಾರೆ. ವಿಜಯೇಂದ್ರ ತಂಡದ ಈ ಕೆಲಸಕ್ಕೆ ಸ್ವಿಡನ್‌ನಿಂದ ಇಪಶ್ವಿನಿ ಧನ್ಯವಾದ ತಿಳಿಸಿದ್ದಾರೆ. 

ಮಸೀದಿಯೊಳಗೆ ನುಗ್ಗಿದ ಲೇಡಿ ಸಿಂಗಂ, ಕೋಲಾರದ ತಹಶೀಲ್ದಾರ್ ದಿಟ್ಟತನ