ಲಂಗ ದಾವಣಿ ತೊಟ್ಟು, ನೋ ಮೇಕಪ್ ಲುಕ್‌ನಲ್ಲಿ ಮೇಘಾ ಶೆಟ್ಟಿ, ವಾವ್ ಎಂದ ನೆಟ್ಟಿಗರು!

Published : May 01, 2024, 01:22 PM IST

ಜೊತೆಜೊತೆಯಲಿ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದ ನಟಿ ಮೇಘಾ ಶೆಟ್ಟಿ ಲಂಗ ದಾವಣಿಯುಟ್ಟು ನೋ ಮೇಕಪ್ ಲುಕ್ ನಲ್ಲಿ ಪೋಸ್ ಕೊಟ್ಟಿದ್ದಾರೆ.   

PREV
17
ಲಂಗ ದಾವಣಿ ತೊಟ್ಟು, ನೋ ಮೇಕಪ್ ಲುಕ್‌ನಲ್ಲಿ ಮೇಘಾ ಶೆಟ್ಟಿ, ವಾವ್ ಎಂದ ನೆಟ್ಟಿಗರು!

ಕನ್ನಡ ಕಿರುತೆರೆ ಲೋಕದಲ್ಲಿ ಇತಿಹಾಸ ಸೃಷ್ಟಿಸಿದ ಧಾರಾವಾಹಿ ಜೊತೆಜೊತೆಯಲಿ. 22 ವರ್ಷದ ಯುವತಿ ಮತ್ತು 50 ವರ್ಷದ ಮಧ್ಯವಯಸ್ಸಿನ ವ್ಯಕ್ತಿ ನಡುವೆ ಉಂಟಾಗುವ ಪ್ರೇಮಕಥೆ ಇದಾಗಿತ್ತು. ಈ  ಸೀರಿಯಲ್ ಮೂಲಕ ಮೇಘಾ ಶೆಟ್ಟಿ (Megha Shetty) ಕನ್ನಡಿಗರ ಮನಸ್ಸು ಗೆದ್ದಿದ್ದರು. 
 

27

ತಮ್ಮ ಮುದ್ದು ಮುಖ, ಅದ್ಭುತ ಅಭಿನಯದ ಮೂಲಕ ಪೂರ್ತಿ ಧಾರಾವಾಹಿಯನ್ನು (serial) ಆವರಿಸಿಕೊಂಡಿದ್ದ ಮೇಘಾ ಶೆಟ್ಟಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಂತೆ ಸಿನಿಮಾದಲ್ಲೂ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಸದ್ಯ ಸೀರಿಯಲ್ ಮುಗಿದಿದ್ದರೂ ಇಂದಿಗೂ ಜನರು ಜೊತೆಜೊತೆಯಲಿ ಸೀರಿಯಲ್ ನ ಅನು ಸಿರಿಮನೆ ಪಾತ್ರದಿಂದಲೇ ಅವರನ್ನು ಗುರುತಿಸುತ್ತಾರೆ. 
 

37

ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ (Golden star Ganesh) ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ದಿಲ್ ಪಸಂದ್, ಕೈವಾ ಸಿನಿಮಾದಲ್ಲೂ ನಟಿಸಿದ್ದರು. ಇನ್ನು ಆಫ್ಟರ್ ಆಪರೇಶನ್ ಲಂಡನ್ ಕೆಫೆ, ಚೀತಾ, ಗ್ರಾಮಾಯಣ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. 
 

47

ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ಮೇಘಾ ಶೆಟ್ಟಿ ಹೆಚ್ಚಾಗಿ ತಮ್ಮ ಫಿಟ್ನೆಸ್ ಬಗ್ಗೆ ವಿಡೀಯೋ ಮಾಡಿ ಶೇರ್ ಮಾಡುತ್ತಿರುತ್ತಾರೆ. ಜೊತೆಗೆ ಮಾಡರ್ನ್, ಟ್ರೆಡಿಶನಲ್ ವೇರ್ ಧರಿಸಿ ಫೋಟೋ ಶೂಟ್ ಮಾಡಿ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ. 
 

57

ಈ ಬಾರಿ ಮೇಘಾ ಶೆಟ್ಟಿ ಕೆಂಪು ಬಣ್ಣದ ಲಂಗ, ಬ್ಲೌಸ್ ಧರಿಸಿ, ಅದಕ್ಕೆ ಕಪ್ಪು ಬಣ್ಣದ ಸಿಂಪಲ್ ದಾವಣಿ ಧರಿಸಿರುವ ಫೋಟೋಗಳ ಸೀರೀಸ್ ನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನೋ ಮೇಕಪ್, ನೋ ಫಿಲ್ಟರ್, ಜಸ್ಟ್ ಮಿ (No makeup, No filter, Just Me) ಎಂದು ಬರೆದುಕೊಂಡಿದ್ದಾರೆ. 
 

67

ಒಂದಿಷ್ಟು ಮೇಕಪ್ ಮಾಡಿಕೊಳ್ಳದೇ ಇದ್ದರೂ ಸಹ ಮೇಘಾ ಶೆಟ್ಟಿ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅವರ ಮುದ್ದು ಮುದ್ದಾದ ಎಕ್ಸ್ ಪ್ರೆಷನ್ ನೋಡಿ ಅಭಿಮಾನಿಗಳು ಸಹ ತುಂಬಾನೆ ಖುಷ್ ಆಗಿದ್ದಾರೆ.
 

77

ಮೇಘಾ ಶೆಟ್ಟಿ ಫೋಟೋಗಳನ್ನು ಹೊಗಳಿ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ರಾಣಿ ತರ ಕಾಣ್ತಿರ. ಮುದ್ದು ಮೇಘಾ, ನೀವು ಎಂಗಿದ್ರು ಜಸ್ಟ್ ವಾವ್. ನಾನು ನಿಮ್ಮ ಅಂದಕ್ಕೆ ಅಭಿಮಾನಿ ಎಂದಿದ್ದಾರೆ ಒಬ್ಬರು. ನಿಮ್ಮನ್ನ ನೋಡಿದ ಆ ಚಂದ್ರನೂ ನಾಚಿ ನೀರಾಗಬೇಕು ಅಷ್ಟು ಸುಂದರವಾಗಿ ಕಾಣುತ್ತೀರಿ ಅಕ್ಕ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮಗೆ ಮೇಕಪ್ ಬೇಕಾಗಿಲ್ಲ, ನಗುವೇ ಸಾಕು ಎಂದು ಮತ್ತೊಬ್ಬರು ಬರೆದಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories