ವಿಶೇಷಚೇತನರಿಗೆ ಎಲೆಕ್ಟ್ರಿಕಲ್ ಮೋಟಾರ್ ಸೈಕಲ್‌ಗಳು, ಕೂಲಿಂಗ್ ಗ್ಲಾಸ್ ಹಾಗೂ ಸ್ಟಿಕ್ ವಿತರಣೆ

Apr 9, 2022, 10:05 AM IST

ಚಿತ್ರದುರ್ಗ (ಏ. 09): ನಗರದ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯಿಂದ ಆಯೋಜನೆಗೊಂಡ ವಿಶೇಷಚೇತನರಿಗಾಗಿ ವಿಶೇಷ ವ್ಯವಸ್ಥೆಯನ್ನು ಕೇಂದ್ರ ಸಚಿವ ನಾರಾಯಣಸ್ವಾಮಿ ಉದ್ಘಾಟನೆ‌ ಮಾಡಿದರು.

ದೇಶದ ನೆಚ್ಚಿನ ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಲ್ಲಿ ವಿಶೇಷಚೇತನರಿಗೆ ವಿಶೇಷ ಸವಲತ್ತುಗಳನ್ನು ನೀಡುವುದು ಒಂದಾಗಿದೆ. ಸುಮಾರು 1700 ಕ್ಕೂ ಅಧಿಕ ವಿಶೇಷಚೇತನರು ಹಾಗೂ ವಯೋ ವೃದ್ದರಿಗಾಗಿಯೇ ಎಲೆಕ್ಟ್ರಿಕಲ್ ಮೋಟಾರ್ ಸೈಕಲ್ ಗಳು ಹಾಗೂ ಕಣ್ಣಿನ ದೃಷ್ಟಿಯಿಂದ ಬಳಲುತ್ತಿರುವವರಿಗೆ ಕೂಲಿಂಗ್ ಗ್ಲಾಸ್ ಮತ್ತು ನಡೆದಾಡಲು ಸಮಸ್ಯೆ ಪಡೋರಿಗೆ ಸ್ಟಿಕ‌್ ವಿತರಣೆ ಮಾಡುವ ಮೂಲಕ ಅದ್ದೂರಿ ಕಾರ್ಯಕ್ರಮವನ್ನು ನೆರವೇರಿಸಿದರು. ವಯಸ್ಸಾದ ಮೇಲೆ ಅವರಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಈ ರೀತಿಯ ಯೋಜನೆಗಳನ್ನು ನಮ್ಮ ಸರ್ಕಾರ ಹಾಕಿಕೊಂಡು ಬಂದಿದೆ. ಜೊತೆಗೆ ವಿಶೇಷಚೇತನರಿಗೆ ವಿನೂತನವಾಗಿ ಅವರ ಬೆನ್ನೆಲುಬಾಗಿ ಇರಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕೊಡಗಿನಲ್ಲಿ ಇನ್ನೂ ಸೆರೆಯಾಗದ ನರಭಕ್ಷಕ ಹುಲಿ, ಗ್ರಾಮಸ್ಥರಿಂದ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ವಿಕಲಚೇತರಿಗೆ ಪ್ರತೀ ವರ್ಷ ಇಲಾಖೆ ವತಿಯಿಂದ ವಾಹನಗಳ ವಿತರಣೆ ಮಾಡಲಾಗುತ್ತದೆ. ಆದ್ರೆ ಬಹಳಷ್ಟು ಫಲಾನುಭವಿಗಳು ಅದರಿಂದ ವಂಚಿತರಾಗುತ್ತಿದ್ದರು. ಆದ್ರೆ ಈ ಬಾರಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ವತಿಯಿಂದ ಈ ರೀತಿಯ ದೊಡ್ಡ ಕಾರ್ಯಕ್ರಮ ಏರ್ಪಡಿಸಿ  ವಿಕಲಚೇತನರಿಗಾಗಿಯೇ ವಿಶೇಷ ಅನುದಾನದಡಿ ಎಲ್ಲರಿಗೂ ವಾಹನಗಳ ವಿತರಣೆ ಹಾಗೂ ಇನ್ನಿತರ ಅವರಿಗೆ ಬೇಕಾದನ್ನು ವಿತರಣೆ ಮಾಡ್ತಿರೋದಕ್ಕೆ ಎಲ್ಲರ ಮೊಗದಲ್ಲೂ ಸಂತಸ ಮೂಡಿದೆ ಅಂತಾರೆ ವಿಶೇಷಚೇತನರೊಬ್ಬರು.