ಕೋವಿಡ್‌ ಕೇರ್‌ ಸೆಂಟರ್‌ನಲ್ಲೇ ಜೊಲ್ಲೆ ಫ್ಯಾಮಿಲಿಗೆ ಚಿಕಿತ್ಸೆ: ಇತರರಿಗೆ ಮಾದರಿಯಾದ ಸಚಿವೆ

Sep 16, 2020, 1:26 PM IST

ನಿಪ್ಪಾಣಿ(ಸೆ.16): ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಅವರ ಮಕ್ಕಳಿಗೂ ಮಹಾಮಾರಿ ಕೊರೋನಾ ವೈರಸ್‌ ತಗುಲಿದೆ. ಆದರೆ, ಅವರು ಯಾವುದೇ ದೊಡ್ಡ ಆಸ್ಪತ್ರಗೆ ದಾಖಲಾಗದೆ. ಸಮ್ಮ ಪ್ರಾಯೋಜಕತ್ವದಲ್ಲೇ ತೆರೆದಿರುವ ಕೊರೋ‌ನಾ ಕೇರ್ ಸೆಂಟರ್‌ನಲ್ಲಿ ದಾಖಲಾಗುವುವ ಮೂಲಕ ಮಾದರಿಯಾಗಿದ್ದಾರೆ. 

ಬಾಗಲಕೋಟೆ: ಶಾಸಕ ಚರಂತಿಮಠ ರೌಂಡ್ಸ್‌, ವಾರ್ಡನ್‌ಗಳಿಗೆ ವಾರ್ನಿಂಗ್‌

ಸಚಿವೆ ಶಶಿಕಲಾ ಜೊಲ್ಲೆ ಹಾಗೂ ತಮ್ಮ ಮಕ್ಕಳಾದ ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ ಅವರಿಗೂ ಸಹ ಕೊರೋನಾ ಸೋಂಕು ದೃಢವಾಗಿ ಈಗ ಇಬ್ಬರೂ ಮಕ್ಕಳು ಕೊರೋನಾದಿಂದ ಮುಕ್ತರಾಗಿದ್ದಾರೆ. ಆದರೆ ಸಚಿವೆ ಶಶಿಕಲಾ ಜೊಲ್ಲೆ ಇನ್ನೂ ಕೊರೋನಾದಿಂದ ಮುಕ್ತರಾಗಿಲ್ಲ ಹೀಗಾಗಿ ಅವರು ಕಳೆದ ಒಂದು ವಾರದಿಂದ ತಮ್ಮದೆ ಸಹಯೋಗದಲ್ಲಿ ನಿಪ್ಪಾಣಿ ನಗರದಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್‌ನಲ್ಲೇ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಮೂಲಕ ಕೋವಿಡ್ ದೊಡ್ಡ ರೋಗವಲ್ಲ ಕೋವಿಡ್ ವಿರುದ್ಧ ಹೋರಾಡಲು ಸರ್ಕಾರ ನಿಮ್ಮ ಜತೆಗಿದೆ ಎಂದು ಹೇಳುತ್ತಿದ್ದಾರೆ.