ಬಾಲಿವುಡ್ ತಾರೆಯರು ಮಕ್ಕಳ ಆರೈಕೆಗಾಗಿ ಶುಶ್ರೂಷಕಿಗೆ ಕೊಡುವ ಸಂಬಳ ಬಹಿರಂಗ

First Published | Nov 20, 2024, 5:01 PM IST

ಬಾಲಿವುಡ್ ತಾರೆಯರು ತಮ್ಮ ಮಕ್ಕಳ ಆರೈಕೆಗಾಗಿ ಶುಶ್ರೂಷಕಿಯರನ್ನು ನೇಮಿಸಿಕೊಳ್ಳುತ್ತಾರೆ. ಈ ಶುಶ್ರೂಷಕಿಯರು ಉತ್ತಮ ಸಂಬಳ ಪಡೆಯುತ್ತಾರೆ. ಈ ಲೇಖನದಲ್ಲಿ ಬಾಲಿವುಡ್ ತಾರೆಯರು ತಮ್ಮ ಮಕ್ಕಳ ಆರೈಕೆಗಾಗಿ ಶುಶ್ರೂಷಕಿಯರಿಗೆ ನೀಡುವ ಸಂಬಳದ ಬಗ್ಗೆ ಮಾಹಿತಿ ನೀಡಲಾಗಿದೆ.

ಬಾಲಿವುಡ್ ಸ್ಟಾರ್ ದಂಪತಿ ಪೋಷಕರಾಗುತ್ತಿದ್ದಂತೆ ಮಕ್ಕಳ ಆರೈಕೆಗಾಗಿ ಶುಶ್ರೂಷಕಿಯರನ್ನು ನೇಮಿಸಿಕೊಳ್ಳುತ್ತಾರೆ. ಸ್ಟಾರ್ ಕುಟುಂಬದ ಜೊತೆಯಲ್ಲಿ ಶುಶ್ರೂಷಕಿಯರು ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗುತ್ತಿರುತ್ತಾರೆ.

ಬಾಲಿವುಡ್ ಸೆಲಿಬ್ರಿಟಿಗಳು ಕುಟುಂಬದ ಜೊತೆ ವಿದೇಶಕ್ಕೆ ತೆರಳಿದರೂ ಅಲ್ಲಿಯೂ ಶುಶ್ರೂಷಕಿಯರನ್ನು ಕರೆದುಕೊಂಡು ಹೋಗುತ್ತಾರೆ. ಇತ್ತೀಚೆಗೆ ನಿರೂಪಕಿ, ಹಾಸ್ಯ ಕಲಾವಿದೆ ಭಾರತಿ ಸಿಂಗ್ ತಮ್ಮ ಜೊತೆಯಲ್ಲಿ ಇಬ್ಬರು ಶುಶ್ರೂಷಕಿಯರನ್ನು ಕರೆದುಕೊಂಡಿ ಹೋಗಿ ವ್ಲಾಗ್ ಮಾಡಿದ್ದರು.

Tap to resize

ಸಂಬಳ ಬಹಿರಂಗ

ತಮ್ಮ ಅನುಪಸ್ಥಿತಿಯನ್ನು ಮಕ್ಕಳನ್ನು ನೋಡಿಕೊಳ್ಳುವ ಶುಶ್ರೂಷಕಿಯರ ಉತ್ತಮ ಸಂಬಳ ಪಡೆಯುತ್ತಾರೆ. ಬಾಲಿವುಡ್ ತಾರೆಯರು ಮಕ್ಕಳ ಆರೈಕೆಗಾಗಿ ಶುಶ್ರೂಷಕಿಗೆ ಕೊಡುವ ಸಂಬಳ ಬಹಿರಂಗವಾಗಿದೆ. ಯಾರು ಎಷ್ಟು ಸಂಬಳ ಕೊಡ್ತಾರೆ ಅನ್ನೋದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್

ಬಾಲಿವುಡ್ ಸ್ಟಾರ್ ಜೋಡಿಯಾಗಿರುವ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ದಂಪತಿಗೆ ಮಿಶಾ ಮತ್ತು ಜೈನ್ ಇಬ್ಬರು ಮುದ್ದಾದ ಮಕ್ಕಳಿಗೆ. ಮಿಶಾ ಮತ್ತು ಜೈನ್ ಆರೈಕೆ ಮಾಡುವ ಶುಶ್ರೂಷಕಿ/ನ್ಯಾನಿ ಪ್ರತಿ ತಿಂಗಳು 80,000 ರೂ. ಸಂಬಳ ಪಡೆಯುತ್ತಾರೆ ಎಂದು ವರದಿಯಾಗಿದೆ.

ರೂಖ್ ಖಾನ್-ಗೌರಿ ಖಾನ್

ಬಾಲಿವುಡ್ ಕಿಂಗ್ ಶಾರೂಖ್ ಖಾನ್-ಗೌರಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಹಾನಾ ಮತ್ತು ಆರ್ಯನ್ ಇಬ್ಬರು ವಯಸ್ಕರಾಗಿದ್ದಾರೆ. ಮೂರನೇ ಮಗ ಅಬ್ರಾಹಂ ಆರೈಕೆಗಾಗಿ ನೇಮಕಗೊಂಡಿರುವ ಶುಶ್ರೂಷಕಿ ಪ್ರತಿ ತಿಂಗಳು 2 ರಿಂದ 5 ಲಕ್ಷ ರೂಪಾಯಿ ಪಡಯುತ್ತಾರಂತೆ.

ಸೈಫ್ ಅಲಿ ಖಾನ್-ಕರೀನಾ ಕಪೂರ್

ರಾಜಮನೆತನದವರಾಗಿರುವ ನಟ ಸೈಫ್ ಅಲಿ ಖಾನ್-ಕರೀನಾ ಕಪೂರ್ ಮಕ್ಕಳಾದ ತೈಮೂರು ಮತ್ತು ಜೇಹ್ ಆರೈಕೆಗಾಗಿ ಶುಶ್ರೂಷಕಿಯನ್ನು ನೇಮಿಸಿಕೊಂಡಿದ್ದಾರೆ. ಈ ಇಬ್ಬರ ಮಕ್ಕಳನ್ನು ನೋಡಿಕೊಳ್ಳುವ ಶುಶ್ರೂಷಕಿಗೆ 1.5 ರಿಂದ 3 ಲಕ್ಷ ರೂಪಾಯಿ ನೀಡುತ್ತಾರೆ ಎಂದು ವರದಿಯಾಗಿದೆ.

ನಿರ್ದೇಶಕ ಕರಣ್ ಜೋಹರ್

ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದುಕೊಂಡಿದ್ದಾರೆ. ಅವಳಿ ಮಕ್ಕಳಾದ ಯಶ್ ಮತ್ತು ರೂಹಿ ಆರೈಕೆಗಾಗಿ ನೇಮಕವಾಗಿರುವ ಶುಶ್ರೂಷಕಿಗೆ 6 ರಿಂದ 8 ಲಕ್ಷ ರೂಪಾಯಿ ನೀಡ್ತಾರಂತೆ. ತಾಯಿ ಇಲ್ಲದ ಕಾರಣ ಈ ಮೊತ್ತ ಹೆಚ್ಚಾಗಿರುವ ಸಾಧ್ಯತೆಗಳಿವೆ.

ಸನ್ನಿ ಲಿಯೋನ್- ವೇಬರ್

ಸನ್ನಿ ಲಿಯೋನ್- ವೇಬರ್ ಸಹ ಮೂರು ಮಕ್ಕಳ ಪೋಷಕರಾಗಿದ್ದಾರೆ. ಒಂದು ಮಗುವನ್ನು ದತ್ತು ಪಡೆದ್ರೆ, ಇಬ್ಬರನ್ನು ಬಾಡಿಗೆ ತಾಯಿ ಮೂಲಕ ಪಡೆದುಕೊಂಡಿದ್ದಾರೆ. ಮೂರು ಮಕ್ಕಳನ್ನು ನೋಡಿಕೊಳ್ಳುವ ಇಬ್ಬರು ಶುಶ್ರೂಷಕಿಯರು ತಲಾ 2 ಲಕ್ಷ ರೂಪಾಯಿ ಸಂಬಳ ನೀಡಲಾಗುತ್ತಂತೆ

ನಟ ಅಮಿರ್ ಖಾನ್

ಇನ್ನು ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಂತ ಗುರುತಿಸಿಕೊಂಡಿರುವ ನಟ ಅಮಿರ್ ಖಾನ್ ಮಗ ಅಜಾದ್ ಆರೈಕೆಗಾಗಿ ವರ್ಷಕ್ಕೆ ಅಂದಾಜು 2.5 ಕೋಟಿ ರೂಪಾಯಿ ಮಾಡುತ್ತಾರೆ. ಇದರಲ್ಲಿಯೇ ಶುಶ್ರೂಷಕಿಯ ಸಂಬಳವೂ ಸೇರ್ಪಡೆಯಾಗುತ್ತದೆ. ಅಮಿರ್ ಖಾನ್ ಹಿರಿಯ ಮಗ ಜುನೈದ್ ನಾಯಕ ನಟನಾಗಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅಂಗದ್ ಬೇಡಿ ಮತ್ತು ನೇಹಾ ಧುಪಿಯಾ

ಇನ್ನು ಸ್ಟಾರ್ ಜೋಡಿಯಾದ ಅಂಗದ್ ಬೇಡಿ ಮತ್ತು ನೇಹಾ ಧುಪಿಯಾ ತಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ಶುಶ್ರೂಷಕಿಗೆ ಪ್ರತಿ ತಿಂಗಳು ಅಂದಾಜು 60 ಸಾವಿರ ರೂಪಾಯಿ ನೀಡುತ್ತಾರೆ. ನೇಹಾ ಧುಪಿಯಾ ಸಿನಿಮಾ ಜೊತೆಯಲ್ಲಿ ರಿಯಾಲಿಟಿ ಶೋ ತೀರ್ಪುಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. 

Latest Videos

click me!