ಗುಂಡಮ್ಮಂಗೆ ಇಂಗ್ಲೀಷ್ ಕಲಿಸೋಕೆ ಕವಿರತ್ನ ಕಾಳಿದಾಸ ಸಿನಿಮಾದಂತೆ ದೇವಿ ರೂಪ ತಾಳಿಯೇ ಬಿಟ್ಲು ಪಾರು!

First Published | Nov 20, 2024, 5:17 PM IST

ಅಣ್ಣಯ್ಯ ಧಾರಾವಾಹಿ ಸಿಕ್ಕಾಪಟ್ಟೆ ಸೂಪರ್ ಆಗಿ ಮೂಡಿ ಬರುತ್ತಿದ್ದು, ಜನ ಮೆಚ್ಚಿಕೊಂಡಿದ್ದಾರೆ. ಇದೀಗ ಗುಂಡಮ್ಮಂಗೆ ಇಂಗ್ಲಿಷ್ ಕಲಿಸೋದಕ್ಕೆ ದೇವಿ ರೂಪ ತಾಳಿದ್ದಾಳೆ ಅತ್ತಿಗೆ ಪಾರು. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ (Annayya Serial) ದಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಧಾರಾವಾಹಿಯಲ್ಲಿ ದಿನಕ್ಕೊಂದು ಟ್ವಿಸ್ಟ್ ಹಾಗೂ ಅದ್ಬುತ ಕಥಾ ಹಂದರದ ಮೂಲಕ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ವೀಕ್ಷಕರಂತೂ ಅಣ್ಣಯ್ಯ ಸೀರಿಯಲ್ ನೋಡೋದಕ್ಕೆ ಕುತೂಹಲದಿಂದ ಕಾಯುತ್ತಿರುತ್ತಾರೆ, ಅಷ್ಟೊಂದು ಅದ್ಭುತವಾಗಿ ಮೂಡಿ ಬರ್ತಾ ಇದೆ ಸೀರಿಯಲ್.
 

ಅಣ್ಣಯ್ಯ ಧಾರಾವಾಹಿಯಲ್ಲಿ ನಾಯಕ ಶಿವು ಆಗಿರಬಹುದು, ನಾಯಕಿ ಪಾರು ಆಗಿರಬಹುದು ಜೊತೆಗೆ ಶಿವು 4 ಜನ ತಂಗಿಯರು, ಪ್ರತಿಯೊಬ್ಬರ ಪಾತ್ರವೂ ಕನ್ನಡಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಧಾರಾವಾಹಿ ಆರಂಭವಾಗಿ ಸ್ವಲ್ಪ ಸಮಯ ಕಳೆದಿದ್ದರೂ ಸಹ ಪ್ರತಿಯೊಂದು ಪಾತ್ರವನ್ನು ಜನರು ಎಷ್ಟೊಂದು ಇಷ್ಟಪಟ್ಟಿದ್ದಾರೆ ಅಂದರೆ ಪ್ರತಿ ಪಾತ್ರಗಳಿಗೂ ಪ್ರೀತಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ನಾಯಕಿ ಪಾರು ಪಾತ್ರದಲ್ಲಿ ನಟಿಸುತ್ತಿರುವ ನಿಶಾ ರವಿಕೃಷ್ಣನ್ (Nisha Ravikrishnan) ನಟನೆಗೆ ಫಿದಾ ಆಗಿದ್ದಾರೆ ಜನ.
 

Tap to resize

ಕೆಲ ದಿನಗಳ ಹಿಂದೆ ಧಾರಾವಾಹಿಯಲ್ಲಿ ದೀಪಾವಳಿ ಎಪಿಸೋಡ್ ಪ್ರಸಾರವಾಗಿದ್ದು, ಪಾರು ಶಿವಣ್ಣನನ್ನು ಕರೆದುಕೊಂಡು ತನ್ನ ತವರು ಮನೆಗೆ ಹೋಗಿದ್ದು, ಅಲ್ಲಿ ತನ್ನ ತಂದೆಯ ಎದುರು, ತನ್ನ ಗಂಡನಿಗೆ ಸಿಗಬೇಕಾದ ಎಲ್ಲಾ ಮರ್ಯಾದೆ ಸಿಗುವಂತೆ ಮಾಡುವ ಮೂಲಕ ಅಪ್ಪನಿಗೆ ಸವಾಲು ಎಸೆದು ನಿಂತಿದ್ದಳು ಪಾರು.  ಅಷ್ಟೇ ಅಲ್ಲ ಅಪ್ಪನ ನೀಚ ಬುದ್ಧಿಯನ್ನು ಅರಿತು ಎಲ್ಲಾ ಸಮಸ್ಯೆಗಳಿಂದ ಶಿವ ಮತ್ತು ಕುಟುಂಬವನ್ನು ಪಾರು ಮಾಡುವುದಕ್ಕೂ ಸಹ ಪಾರು ತಯಾರಾಗಿ ನಿಂತಿದ್ದಾಳೆ. 
 

ಇದೀಗ ಧಾರಾವಾಹಿಯ ಹೊಸ ಪ್ರೋಮೊ ಬಿಡುಗಡೆಯಾಗಿದ್ದು,  ಸಕ್ಕತ್ ಮನರಂಜನೆ ನೀಡುತ್ತಿದೆ. ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ನಟ ರಾಜಕುಮಾರ್ ನಾಲಿಗೆ ಮೇಲೆ ತಾಯಿ ಸರಸ್ವತಿ ಓಂ ಅಕ್ಷರವನ್ನು ಬರೆಯುವ ದೃಶ್ಯವನ್ನು ಇಲ್ಲಿ ರಿಕ್ರಿಯೇಟ್ ಮಾಡಲಾಗಿದೆ. ಇದು ಸ್ವಲ್ಪ ವಿಚಿತ್ರವಾಗಿ ಕಂಡರೂ, ಅತಿ ಆಯ್ತು ಅನಿಸಿದರೂ, ನೋಡೋದಕ್ಕೆ ಚೆನ್ನಾಗಿದೆ. 
 

ಶಿವಣ್ಣನ ಮೂರನೇ ತಂಗಿ ಆಗಿರುವ ಗುಂಡಮ್ಮ ಓದೋದ್ರಲ್ಲಿ ಹಿಂದೆ, ಆದರೆ ತಿನ್ನೋದ್ರಲ್ಲಿ ಸದಾ ಮುಂದೆ. ಇಂಗ್ಲಿಷ್ ನಲ್ಲಿ ಸಿಕ್ಕಾಪಟ್ಟೆ ವೀಕ್ ಆಗಿರುವ ಗುಂಡಮ್ಮನಿಗೆ ಇಂಗ್ಲಿಷ್ ಕಬ್ಬಿಣದ ಕಡಲೆ ಅಲ್ಲ ಅನ್ನೋದನ್ನ ಮನವರಿಕೆ ಮಾಡುವ ಪಾರು ಇಂಗ್ಲಿಷ್ ತುಂಬಾನೆ ಸಿಂಪಲ್ ಭಾಷೆ, ಅದಕ್ಕೆ ಕನ್ನಡದಷ್ಟು ಶಕ್ತಿ ಇಲ್ಲ. ಇಂಗ್ಲೀಷಲ್ಲಿ ಇರೋದು ಬರಿ 26 ಅಕ್ಷರ, ಅದಕ್ಕೆ ಒತ್ತಕ್ಷರ, ಅಲ್ಪಪ್ರಾಣ, ಮಹಾ ಪ್ರಾಣ ಯಾವುದು ಗೊತ್ತಿಲ್ಲ. ಆದರೆ ಕನ್ನಡದಲ್ಲಿ ಸ್ವರಗಳು, ವ್ಯಂಜನಗಳು, ವರ್ಗಿಯ ವ್ಯಂಜನ, ಅವರ್ಗೀಯ ವ್ಯಂಜನ, ಸಂಧಿಗಳು, ಸಮಾಸಗಳು ಎಲ್ಲ ಇವೆ. ಜಗತ್ತಿನಲ್ಲಿ ಅತ್ಯಂತ ಬಡ ಭಾಷೆ ಅಂದ್ರೆ ಇಂಗ್ಲಿಷ್. ಹಾಗಾಗಿ ಇಂಗ್ಲಿಷ್ ಭಾಷೆ ವೀಕ್ ಹೊರತು , ಇಂಗ್ಲಿಷ್ ಮಾತನಾಡು ನಾವು ವೀಕ್ ಆಗೋದಕ್ಕೆ ಸಾಧ್ಯನೇ ಇಲ್ಲ . ಆದ್ದರಿಂದ ಇಂಗ್ಲಿಷ್ ಮಾತನಾಡುವಾಗ ಇಂಗ್ಲಿಷ್ ಬರೋದೇ ಇಲ್ಲ ಅನ್ನೋ ಯೋಚನೆ ತಲೆಯಿಂದ ತೆಗೆದುಹಾಕಿ ಮಾತನಾಡಿದರೆ ಇಂಗ್ಲಿಷ್ ಚೆನ್ನಾಗಿ ಬರುತ್ತೆ ಅನ್ನುತ್ತಾಳೆ ಅತ್ತಿಗೆ ಪಾರು
 

ಆವಾಗ ಗುಂಡಮ್ಮ ಅತ್ತಿಗೆ ಮುಂದೆ ಕಾಲೂರಿ ಕುಳಿತು, ಅತ್ತಿಗೆ ಎಂತ ದಿವ್ಯ ಜ್ಞಾನ ಕೊಟ್ಟಿದ್ದಾರೆ ಅತ್ತಿಗೆ ಎನ್ನುತ್ತಾ ತನ್ನ ಕನಸಿನ ಲೋಕಕ್ಕೆ ಹೋಗುತ್ತಾಳೆ. ಅಲ್ಲಿ ಗುಂಡಮ್ಮಂಗೆ ತನ್ನ ಅತ್ತಿಗೆ ಪಾರು ದೇವಿಯ ರೂಪದಲ್ಲಿ ಕಾಣುತ್ತಾಳೆ. ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ವಿದ್ಯೆಯಿಲ್ಲದ ಕಾಳಿದಾಸನ ನಾಲಿಗೆ ಮೇಲೆ ದೇವಿ ಓಂ ಎಂದು ಬರೆಯುತ್ತಾ, ಕಾಳಿದಾಸನನ್ನು ವಿದ್ಯಾವಂತನನ್ನಾಗಿ ಮಾಡಿರುವ ಹಾಗೆ, ತನ್ನ ನಾಲಿಗೆ ಮೇಲೆಯೂ ಇಂಗ್ಲಿಷ್ ಅಕ್ಷರವನ್ನು ಬರೆದು, ತನಗೆ ಇಂಗ್ಲಿಷ್ ಬರುವಂತೆ ಮಾಡು ಎಂದು ಗುಂಡಮ್ಮ ದೇವಿ ರೂಪದಲ್ಲಿರುವ ಪಾರುವನ್ನು ಕೇಳುತ್ತಾಳೆ. ಹಾಗೆ ಪಾರು ಗುಂಡಮ್ಮನ ನಾಲಿಗೆ ಮೇಲೆ ಎ ಎಂದು ಇಂಗ್ಲಿಷ್ನಲ್ಲಿ ಬರೆಯುತ್ತಾಳೆ.
 

ಇದನ್ನೆಲ್ಲಾ ಕನಸು ಕಾಣುತ್ತಾ ಕುಳಿತಗೊಂಡ ಗುಂಡಮ್ಮನನ್ನು, ಪಾರು ಎಚ್ಚರಿಸುತ್ತಾ ಏನಾಯ್ತು ಗುಂಡು ಎನ್ನುತ್ತಾಳೆ. ಆವಾಗ ಗುಂಡಮ್ಮ ಏನಿಲ್ಲ ಅತ್ತಿಗೆ, ಎನ್ನುತ್ತಾ ವಾಸ್ತವ ಜಗತ್ತಿಗೆ ಮತ್ತೆ ಬರುತ್ತಾಳೆ.  ಈ ಎಪಿಸೋಡ್ ಒಳ್ಳೆಯ ಮನರಂಜನೆಯನ್ನು ನೀಡುತ್ತಿದೆ. ಅಷ್ಟೇ ಅಲ್ಲ  ಗುಂಡಮ್ಮನ ಕಾಮಿಡಿ ಸಖತ್ತಾಗಿದೆ ಹಾಗೂ ಪಾರು ಆಕ್ಟಿಂಗ್ ಅಂತೂ ಸೂಪರ್ ಎನ್ನುತ್ತಿದ್ದಾರೆ ವೀಕ್ಷಕರು. 
 

Latest Videos

click me!