Sep 7, 2023, 9:47 AM IST
ರಾಜ್ಯಾದ್ಯಂತ ಬುಧವಾರ ಕೃಷ್ಣಜನ್ಮಾಷ್ಟಮಿಯ ಸಂಭ್ರಮ ಮೂಡಿತ್ತು. ಅದರಲ್ಲೂ ದೇವಾಲಯಗಳ ನಗರಿ ಉಡುಪಿಯ(Udupi) ಶ್ರೀಕೃಷ್ಣ ಮಠ ಹಬ್ಬದ ರಂಗಿನಿಂದ ಕಂಗೊಳಿಸುತ್ತಿತ್ತು. ದೇಗುಲದ ತುಂಬೆಲ್ಲಾ ವಿಶೇಷ ಅಲಂಕಾರ, ಭಕ್ತರಿಂದ ಜಪ ತಪ, ಪುರದ ತುಂಬ ಹುಲಿ ವೇಷಗಳ ಕಲರವ, ಕಡೆಗೋಲು ಕೃಷ್ಣನ(Krishna) ನಗರಿಯಲ್ಲಿ ಎರಡು ದಿನ ಸಂಭ್ರಮ ಮನೆಮಾಡಿತ್ತು. ಇನ್ನು ಮಠದಲ್ಲಿ ಅರ್ಘ್ಯ ಫ್ರದಾನದ ಮೂಲಕ ಕೃಷ್ಣ ದೇವರ ಹುಟ್ಟನ್ನು ಸಂಭ್ರಮಿಸುವ ವಿಶೇಷ ಆಚರಣೆ ನಡೆಯಿತು. ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು. ಇಂದು ಶ್ರೀ ಕೃಷ್ಣ ಲೀಲೋತ್ಸವದ(Krishna Leelotsava) ಪ್ರಯುಕ್ತ ವಿಟ್ಲಪಿಂಡಿ ಆಚರಣೆ ನಡೆಯಲಿದ್ದು, ಬುಧವಾರ ಬೆಳಗ್ಗಿನಿಂದಲೇ ಸಾವಿರಾರು ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ಸಂವಿಧಾನದಲ್ಲಿ ಏನಂತ ಬರೆದಿದೆ..ಅಂಬೇಡ್ಕರ್ ಹೇಳಿದ್ದೇನು ? ಇಂಡಿಯಾ ಹೆಸರಿಗಿರುವ ಇತಿಹಾಸವೇನು..?