ಹದ್ದು ಮೀರಿದ ಬೆಂಗಳೂರಿನ ಅಪೋಲೋ, ವಿಕ್ರಂ ಆಸ್ಪತ್ರೆಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ...!

Jul 14, 2020, 6:07 PM IST

ಬೆಂಗಳೂರು, (ಜುಲೈ.14): ನಗರದ ಎರಡು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಬಿಸಿ ಮುಟ್ಟಿಸಿದೆ.  ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ವಿಕ್ರಂ ಮತ್ತು ಅಪೋಲೋ ಆಸ್ಪತ್ರೆ ವಿರುದ್ಧ ಶಿಸ್ತು ಕ್ರಮಕೈಗೊಂಡಿದೆ.

2 ಆಸ್ಪತ್ರೆಗಳಿಗೆ ನೋಟಿಸ್; ಆದೇಶ ಉಲ್ಲಂಘಿಸಿದರೆ ಸೀಲ್‌ಡೌನ್ ಎಚ್ಚರಿಕೆ

ಈ ಹಿಂದೆ ನೀಡಿರುವ ನೋಟಿಸ್‌ಗೆ ಸ್ಪಂದಿಸದ ಈ ಎರಡು ಆಸ್ಪತ್ರೆಗಳ OPD ಚಿಕಿತ್ಸೆ ಬಂದ್ ಮಾಡುವಂತೆ ಆದೇಶ ನೀಡಿದೆ. ಅಲ್ಲದೇ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆಯನ್ನೂ ಸಹ ಕೊಡಲಾಗಿದೆ. ಇದು ಇನ್ನುಳಿದ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆಯ ಗಂಟೆಯೂ ಆಗಿದೆ.