ಧಾರವಾಡದ ಸೋಂಕಿತನಿಗೆ ಟ್ರೀಟ್‌ಮೆಂಟ್ ನೀಡಿದ್ದ ವೈದ್ಯರಿಗೆ ಹೃದಯಸ್ಪರ್ಶಿ ಸ್ವಾಗತ

May 1, 2020, 9:14 PM IST

ಹುಬ್ಬಳ್ಳಿ(ಮೇ 01)  ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯ ಮನೆಗೆ ಹಿಂದಿರುಗಿದ್ದು ಅವರನ್ನು ಹೃದಯಸ್ಪರ್ಶಿ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಗಿದೆ.  ನಿಜಕ್ಕೂ ಈ ದೃಶ್ಯ ಒಂದು ಕ್ಷಣ ಎದ್ದು ನಿಂತು ಗೌರವ ನೀಡಲು ಪ್ರೇರೇಪಿಸುತ್ತದೆ.

ಕಾಶ್ಮೀರ ಟು ಕನ್ಯಾಕುಮಾರಿ, ಸೇನೆಯಿಂದ ಹೂ ಮಳೆ

ಹುಬ್ಬಳ್ಳಿಯ ಕಿಮ್ಸ್ ವೈದ್ಯ ಕೊರೋನಾ ವಾರಿಯರ್ಸ ಡಾ. ಸಚಿನ್ ಹೊಸಕಟ್ಟಿಗೆ ಹೃದಯಸ್ಪರ್ಶಿ ಸ್ವಾಗತ ನೀಡಲಾಗಿದೆ.  ಧಾರವಾಡ ಜಿಲ್ಲೆಯ ಪ್ರಥಮ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಕೊರೋನಾ ವಾರಿಯರ್ಸ್ ಎಂದು ಪ್ಲೇ ಕಾರ್ಡ್ ಹಿಡಿದು ಬಡಾವಣೆ ಜನ ವಂದನೆ ಸಲ್ಲಿಸಿದ್ದಾರೆ.