26ನೇ ವಯಸ್ಸಲ್ಲೇ ಈಕೆಗೆ 22 ಮಕ್ಕಳು, ಗಂಡ ಜೈಲಲ್ಲಿದ್ದರೂ ಅಮ್ಮನಾದ ಇವಳಿಗೆ ಇನ್ನೂ ಬೇಕಂತೆ ಮಕ್ಕಳು!

Published : May 02, 2024, 05:25 PM IST

26 ವರ್ಷದ ಯುವತಿಯೊಬ್ಬಳು ಶ್ರೀಮಂತ ವ್ಯಕ್ತಿಯನ್ನು ಮದುವೆಯಾದ ಕೇವಲ 16 ತಿಂಗಳಲ್ಲಿ 21 ಮಕ್ಕಳ ತಾಯಿಯಾಗಿದ್ದಾಳೆ. ಇದು ಹೇಗೆ ಎಂದು ನೀವು ಯೋಚನೆ ಮಾಡಿದ್ದೀರಾ? ಈಕೆಯ ಪತಿ ಕೋಟ್ಯಾಧಿಪರಿ, ಹಣಕ್ಕೇನು ಕಡಿಮೆ ಇಲ್ಲ, ಹಾಗಾಗಿ ಈಕೆ ಮಾಡಿದ್ದೇನು ಗೊತ್ತ?   

PREV
17
26ನೇ ವಯಸ್ಸಲ್ಲೇ ಈಕೆಗೆ 22 ಮಕ್ಕಳು, ಗಂಡ ಜೈಲಲ್ಲಿದ್ದರೂ  ಅಮ್ಮನಾದ ಇವಳಿಗೆ ಇನ್ನೂ ಬೇಕಂತೆ ಮಕ್ಕಳು!

ಜಗತ್ತಿನಲ್ಲಿ, ಅನೇಕ ಮಹಿಳೆಯರು ಒಂದೇ ಮಗು ಸಾಕು ಎಂದು ಫ್ಯಾಮಿಲಿ ಪ್ಲ್ಯಾನಿಂಗ್ ಮಾಡ್ತಾರೆ. ಆದರೆ ಇನ್ನೂ ಕೆಲವು ಮಹಿಳೆಯರು ಪ್ರತಿವರ್ಷ ಮಕ್ಕಳನ್ನು ಹೊಂದುವ ಮೂಲಕ ಕುಟುಂಬವನ್ನು ಬೆಳೆಸುತ್ತಾರೆ.  ಆದರೆ ಟರ್ಕಿಯ ಶ್ರೀಮಂತ ವ್ಯಕ್ತಿ ಪತ್ನಿ ಕ್ರಿಸ್ಟಿನಾ ಓಜ್ತುರ್ಕ್ ಗೆ ಕೇವಲ 26 ವರ್ಷ ವಯಸ್ಸಾಗಿರಬಹುದು, ಆದರೆ ಅವರು 22 ಮಕ್ಕಳ ತಾಯಿ. ಇದು ಹೇಗೆ ಸಾಧ್ಯ ಎಂದು ನೀವು ಯೋಚನೆ ಮಾಡ್ತಿರಬಹುದು ಅಲ್ವಾ?

27

ಇದು ಸಾಧ್ಯವಾಗಿದ್ದು ಬಾಡಿಗೆ ತಾಯ್ತನದ ಮೂಲಕ. ಕೋಟ್ಯಾದಿಪತಿಯ (millionaire) 26 ವರ್ಷದ ಹೆಂಡ್ತಿ ಬಾಡಿಗೆ ತಾಯ್ತನದ (surrogacy) ಮೂಲಕ 22 ಮಕ್ಕಳ ತಾಯಿಯಾಗಿದ್ದಾರೆ. ರಷ್ಯಾ ಮೂಲದ ಬ್ಲಾಗರ್ ಮಾರ್ಚ್ 2020 ಮತ್ತು ಜುಲೈ 2021 ರ ನಡುವೆ ತನ್ನ 57 ವರ್ಷದ ಮಿಲಿಯನೇರ್ ಉದ್ಯಮಿ ಪತಿ ಗ್ಯಾಲಿಪ್ ಅವರೊಂದಿಗೆ 21 ಬಾಡಿಗೆ ಶಿಶುಗಳನ್ನು ಪಡೆದಿದ್ದಾರೆ,  ಕ್ರಿಸ್ಟಿನಾ ಅವರು ಇನ್ನು ಹೆಚ್ಚು ಮಕ್ಕಳನ್ನು ಪಡೆಯುವ ಬಯಕೆ ಹೊಂದಿದ್ದಾರಂತೆ.
 

37

ಕ್ರಿಸ್ಟಿನಾ ಅವರ ಹಿರಿಯ ಮಗು, ವಿಕ್ಟೋರಿಯಾಗೆ ಎಂಟು ವರ್ಷ, ಈ ಮಗು ಕ್ರಿಸ್ಟಿನಾಳ ಹಳೆಯ ಸಂಗಾತಿಯಿಂದ ಸ್ವಾಭಾವಿಕವಾಗಿ ಜನಿಸಿದ ಮಗಳು, ಬಳಿಕ ಹಲವು ಮಕ್ಕಳಾನ್ನು ಸರೋಗೆಸಿ ಮೂಲಕ ಪಡೆದರು. ಇವರು ಅದಕ್ಕಾಗಿ ಸುಮಾರು 1 ಕೋಟಿಯ 46 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರಂತೆ. 
 

47

'ಮಕ್ಕಳನ್ನು ಖರೀದಿಸಿದ್ದಕ್ಕಾಗಿ' ಕ್ರಿಸ್ಟಿನಾ ತುಂಬಾ ಟ್ರೋಲ್ ಆಗಿದ್ದರೂ, ಈ ಮಹಾ ತಾಯಿಗೆ ಶೀಘ್ರದಲ್ಲೇ ಮಕ್ಕಳನ್ನು ಪಡೆಯುವುದನ್ನು ನಿಲ್ಲಿಸುವ ಯಾವುದೇ ಯೋಜನೆ ಇಲ್ಲ. ಕ್ರಿಸ್ಟಿನಾ ಈ ಹಿಂದೆ ತನಗೆ ಮೂರು ಅಂಕಿಗಳಷ್ಟು ಮಕ್ಕಳು ಬೇಕು ಎಂದಿದ್ದರು. 
 

57

ಕ್ರಿಸ್ಟಿನಾ ಮತ್ತು ಅವರ ಪತಿ ಇಬ್ಬರೂ ಮೊದಲು ರಷ್ಯಾದ ಮಾಸ್ಕೋದಲ್ಲಿನ ಕ್ಲಬ್‌ನಲ್ಲಿ ಭೇಟಿಯಾದರು ಅಂದಿನಿಂದ ಅವರು ಜಾರ್ಜಿಯಾದ ಬಟುಮಿಯಲ್ಲಿರುವ ಮೂರು ಅಂತಸ್ತಿನ ಐಷಾರಾಮಿ ಬಂಗಲೆಯಲ್ಲಿ ವಾಸಿಸೋದಕ್ಕೆ ಆರಂಭಿಸಿದರು. ಪತ್ನಿಯ ಹುಚ್ಚು ಆಸೆಯಿಂದಾಗಿ ಮನಿ ಲಾಂಡರಿಂಗ್ ಮತ್ತು ದಾಖಲೆಗಳನ್ನು ಸುಳ್ಳು ಮಾಡಿದ ಆರೋಪದ ಮೇಲೆ ಟರ್ಕಿಯ ಉದ್ಯಮಿ ಪತಿ 2023 ರಲ್ಲಿ ಜೈಲು ಸೇರಿದ್ದರು. ಅದೃಷ್ಟವಶಾತ್, ಮಕ್ಕಳ ವ್ಯಸನಿ ಪತ್ನಿ, ಕ್ರಿಸ್ಟಿನಾಗೆ ಸಹಾಯ ಮಾಡಲು 16 ಲಿವ್-ಇನ್ ನಾನಿಗಳ (live in nany) ಸೈನ್ಯ ಇದೆ. ಇವರು ಮಕ್ಕಳನ್ನು ನೋಡಿಕೊಳ್ಳುತ್ತಾರೆ. 
 

67

ಕ್ರಿಸ್ಟಿನಾ ಬೇಬಿಸ್ ಡೈರಿ (Babys Diary) ಎಂಬ ಪುಸ್ತಕವನ್ನು ಸಹ ಬಿಡುಗಡೆ ಮಾಡಿದ್ದಾರೆ, ಅಲ್ಲಿ ಅವರು ಹೆಚ್ಚು ಮಕ್ಕಳ ತಾಯಿಯಾಗಿ ತಮ್ಮ ಅನುಭವಗಳ ಬಗ್ಗೆ ಹೇಳಿದ್ದಾರೆ. ಮಕ್ಕಳ ಪಾಲನೆಯ ಬಗ್ಗೆ ಎಲ್ಲವನ್ನೂ ಈಗಾಗಲೇ ಬರೆಯಲಾಗಿದೆ ಎಂದು ಅವರು ಹೇಳುತ್ತಾರೆ, ಆದರೆ ಪ್ರತಿದಿನ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉತ್ತಮವಾದದ್ದನ್ನು ನೀಡಲು ಬಯಸುತ್ತಾರೆ, ಅದನ್ನೇ ನಾನು ಮಾಡುತ್ತಿದ್ದೇನೆ ಎಂದಿದ್ದಾರೆ. 
 

77

ಕ್ರಿಸ್ಟಿನಾ ಕನಿಷ್ಠ 105 ಮಕ್ಕಳನ್ನು ಪಡೆಯುವ ಆಕಾಂಕ್ಷೆ ಹೊಂದಿದ್ದಾರೆ.  ತನ್ನ ಅಸ್ತಿತ್ವದಲ್ಲಿರುವ ಮಕ್ಕಳು ದೊಡ್ಡವರಾದ ನಂತರ ಆ ಗುರಿಯತ್ತ ಮುಂದಿನ ಹೆಜ್ಜೆಗಳನ್ನು ಇಡಲು ಅವರು ಈಗ ಉದ್ದೇಶಿಸಿದ್ದಾರೆ. ಆಕೆ ಮತ್ತೆ ಗರ್ಭಿಣಿಯಾಗುವ ಸಾಧ್ಯತೆಯನ್ನು ತಳ್ಳಿಹಾಕದಿದ್ದರೂ, ಚಿಕ್ಕ ಮಕ್ಕಳಿಂದ ತುಂಬಿರುವ ಕುಟುಂಬದೊಂದಿಗೆ ಜೀವಿಸುವ ಬಗ್ಗೆ ಆಕೆ ಕನಸು ಕಂಡಿದ್ದಾರೆ. 
 

click me!

Recommended Stories