ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದ ರಾಹುಲ್ ಗಾಂಧಿಗೆ ಸತ್ಯ ಅರಿವಾಗಿದೆ: ವಿಜಯೇಂದ್ರ

By Girish Goudar  |  First Published May 2, 2024, 5:35 PM IST

ರಾಹುಲ್ ಗಾಂಧಿ ಅವರ ಈ ರೀತಿ ಬೇಜವಾಬ್ದಾರಿ ಹೇಳಿಕೆಯನ್ನ ಜನರು ಗಮನಿಸುತ್ತಿದ್ದಾರೆ. ಇದು ಯಾವುದು ಬಿಜೆಪಿಗೆ ಹಿನ್ನಡೆ ಆಗಲ್ಲ. ರಾಜ್ಯದ ಮತದಾರರು ಬಿಜೆಪಿ ಪರ, ಮೋದಿ ಮತ್ತೆ ಪ್ರಧಾನಿ ಆಗಲಿ ಅಂತ‌ ಜೊತೆಗಿದ್ದಾರೆ ಎಂದು ಹೇಳಿದ ಬಿ.ವೈ.ವಿಜಯೇಂದ್ರ 


ಯಾದಗಿರಿ(ಮೇ.02):  ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಗೆ ದಾರಿ ತೋಚದಂತಾಗಿದೆ. ಜನರನ್ನ ಯಾಮಾರಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದ ಇವತ್ತು ಸತ್ಯ ಅರಿವಾಗಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಪೆನ್ ಡ್ರೈವ್ ಹಿಡಿದುಕೊಂಡು ಎರಡು ತಿಂಗಳು ಮಾಡ್ತಾಯಿದ್ರು. ಎರಡು ತಿಂಗಳ ಕಾಲ ಪೆನ್ ಡ್ರೈವ್ ಅವರ ಬಳಿನೇ ಹಿಡಿದುಕೊಂಡಿದ್ರು ಯಾಕೆ?. ತನಿಖೆಗೆ ಒಳಪಡಿಸಬಹುದಿತ್ತಿಲ್ಲಾ ಅವಾಗ್ಲೇ. ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊಳ್ತಾಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದ್ದಾರೆ. 

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಲು ಮೋದಿ ನೆರವು ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ ಅವರು, ರಾಹುಲ್ ಗಾಂಧಿ ಅವರ ಈ ರೀತಿ ಬೇಜವಾಬ್ದಾರಿ ಹೇಳಿಕೆಯನ್ನ ಜನರು ಗಮನಿಸುತ್ತಿದ್ದಾರೆ. ಇದು ಯಾವುದು ಬಿಜೆಪಿಗೆ ಹಿನ್ನಡೆ ಆಗಲ್ಲ. ರಾಜ್ಯದ ಮತದಾರರು ಬಿಜೆಪಿ ಪರ, ಮೋದಿ ಮತ್ತೆ ಪ್ರಧಾನಿ ಆಗಲಿ ಅಂತ‌ ಜೊತೆಗಿದ್ದಾರೆ ಎಂದು ಹೇಳಿದ್ದಾರೆ. 

Latest Videos

undefined

ಪ್ರಜ್ವಲ್‌ ರೇವಣ್ಣನಿಂದ 400 ಮಹಿಳೆಯರ ಮೇಲೆ ಅತ್ಯಾಚಾರ: ರಾಹುಲ್‌ ಗಾಂಧಿ ಆರೋಪ

ಎರಡು ತಿಂಗಳಿನಿಂದ ಅವರ ಬಳಿ ಪೆನ್ ಡ್ರೈವ್ ಇದೆ ಅಂತ ಚರ್ಚೆ ನಡೆದಿದೆ. ಈ ರೀತಿ ಮಾಹಿತಿ ಇದ್ರೂ ಸಹ ಚುನಾವಣೆ ಸಂದರ್ಭದಲ್ಲಿ ಅಸ್ತ್ರವಾಗಿ ಉಪಯೋಗಿಸಲು ಕಾಯ್ತಾಯಿದ್ರು. ಪ್ರಜ್ವಲ್ ರೇವಣ್ಣ ಆಗ್ಲಿ ಬೇರೆ ಯಾರೆ ಆದ್ರು ನಾವು ಇದರ ಪರವಾಗಿಲ್ಲ. ಕಾಂಗ್ರೆಸ್ ಸರ್ಕಾರ ಎಸ್‌ಐಟಿ ತನಿಖೆ ಎದುರಿಸಬೇಕಾಗುತ್ತೆ. ಸಿಎಂ‌ ಅವರು ಭಾರೀ ಬುದ್ದಿವಂತರಿದ್ದಾರೆ. ಈ ತರಹದ ವಿಚಾರದಲ್ಲಿ ಹೇಗೆ ರಾಜಕಾರಣ ಮಾಡಬೇಕು ಅಂತ ಚೆನ್ನಾಗಿ ಸಲಹೆಗಳು ಸಿಗ್ತಾಯಿವೆ. ಆದ್ರೆ ಯಾವುದು ಕೂಡ ಬಿಜೆಪಿಗೆ ಯಾವುದೇ ರೀತಿ ಹಿನ್ನಡೆ ಆಗುವುದಿಲ್ಲ. ಮೊದಲನೇ ಹಂತದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಭರ್ಜರಿಯಾಗಿ ಜಯಭೇರಿ ಬಾರಿಸುತ್ತೆ. 2ನೇ ಹಂತದಲ್ಲಿ ಹತಾಶೆರಾಗಿ ಮತದಾರರ ಗಮನ ಬೇರೆ ಕಡೆ ಸೆಳೆಯೋಕೆ ಸಿಎಂ ಈ ರೀತಿ ಹೇಳಿಕೆ ನಿಡ್ತಾಯಿದ್ದಾರೆ ಅಷ್ಟೇ ಅಂತ ಸಿದ್ದು ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

ಪ್ರಜ್ವಲ್ ಕೇಸ್ ರಾಜಕೀಯವಾಗಿ ಕಾಂಗ್ರೆಸ್ ಬಳಸಿಕೊಳ್ತಾಯಿದೆ. ಇದರಿಂದ ಅವರಿಗೆ ಏನು ಒಳ್ಳಯದಾಗಲ್ಲ ಎಂದು ವಿಜಯೇಂದ್ರ ತಿಳಿಸಿದ್ದಾರೆ. 

click me!