ಪ್ರಿಯಾಂಕಾ ಚೋಪ್ರಾ ಮಾತ್ರವಲ್ಲ ಈ ನಟಿಯರೂ ಮದ್ವೆಯಾಗಿದ್ದೂ ಕಿರಿಯ ವಯಸ್ಸಿನವರನ್ನೇ!

First Published | May 2, 2024, 5:39 PM IST

ನಟಿ ಕೊಂಕಣಾ ಸೇನ್ ಶರ್ಮಾ ಅವರು ತಮ್ಮಗಿಂತ ಕಿರಿಯ ನಟ ಅಮೋಲ್ ಪರಾಶರ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂದು ವರದಿಯಾಗಿದೆ. ಆದರೆ ಈ ರೀತಿ ಕಿರಿಯ ವಯಸ್ಸಿವರ ಜೊತೆ ಡೇಟ್‌ ಮಾಡಿರುವ ನಟಿಯರಲ್ಲಿ ಕೊಂಕಣಾ  ಮೊದಲನೇನೂ ಅಲ್ಲ.  ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಸಾಬೀತುಪಡಿಸಿ ತಮಗಿಂತ ಕಿರಿಯ ಯುವಕರನ್ನು ಡೇಟಿಂಗ್ ಮಾಡಿ ಮದುವೆಯಾಗಿ ಹಲವು ನಟಿಯರ ಉದಾಹರಣೆಗಳಿವೆ.

ಕೊಂಕಣಾ ಸೇನ್ ಶರ್ಮಾ ನಟ ಅಮೋಲ್ ಪರಾಶರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ನಟಿಯ ಮಾಜಿ ಪತಿ ರಣವೀರ್ ಶೋರೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ನಟ ಅಮೋಲ್ ಪರಾಶರ್ ಕೊಂಕಣಾಗಿಂತ 7 ವರ್ಷ ಚಿಕ್ಕವರು.

ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್:
ಐಶ್ವರ್ಯಾ ರೈ ಬಚ್ಚನ್ಮತ್ತು  ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಪವರ್‌‌ಫುಲ್ ಕಪಲ್‌.  ಐಶ್ವರ್ಯಾ ರೈಗಿಂತ ಅಭಿಷೇಕ್‌ ಎರಡು ವರ್ಷ ಚಿಕ್ಕವರು. ಅವರು 17 ವರ್ಷಗಳಿಂದ ಮದುವೆಯಾಗಿ ಜೊತೆಯಾಗಿದ್ದಾರೆ.

Tap to resize

ಅನುಷ್ಕಾ ಶರ್ಮ ಮತ್ತು ವಿರಾಟ್ ಕೊಹ್ಲಿ:
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರು 1988ರಲ್ಲಿಯೇ ಜನಿಸಿದವರು. ಆದರೆ ಅನುಷ್ಕಾ ಕೊಹ್ಲಿಗಿಂತ 6 ತಿಂಗಳು ದೊಡ್ಡವರು. ಈ ಜೋಡಿ 2017 ರಿಂದ ವೈವಾಹಿಕ ಜೀವನ ನಡೆಸುತ್ತಿದ್ದಾರೆ. 

ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್:
ಬಿಪಾಶಾ ಬಸು ಕರಣ್‌ಗಿಂತ ಮೂರು ವರ್ಷ ದೊಡ್ಡವರು. ಬಿಪಾಶಾ ಕರಣ್‌ಗೆ ಮೂರನೇ ಹೆಂಡತಿ. ಈ ಜೋಡಿ ಇತ್ತೀಚೆಗೆ ತಮ್ಮ ಎಂಟನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್:
ನಿಕ್ ಜೊನಾಸ್ ತಮ್ಮಗಿಂತ ಹತ್ತು ವರ್ಷ ಹಿರಿಯ ಪ್ರಿಯಾಂಕಾ ಚೋಪ್ರಾರನ್ನು ತನ್ನ ಆತ್ಮ ಸಂಗಾತಿ ಎಂದು ಗುರುತಿಸಿದ್ದಾರೆ. ನಿಕ್ ಮತ್ತು ಪ್ರಿಯಾಂಕಾ ಮದುವೆಯಾಗಿ 5 ವರ್ಷಗಳಾಗಿವೆ ಮತ್ತು ಮಾಲ್ಟಿ ಮೇರಿ ಚೋಪ್ರಾ ಜೋನಾಸ್ ಎಂಬ ಮಗುವಿದೆ.

ಪ್ರೀತಿ ಜಿಂಟಾ ಮತ್ತು ಜೀನ್ ಗುಡೆನಫ್:
ಪ್ರೀತಿ ಜಿಂಟಾ ಕೂಡ ತನ್ನ ಸಂಗಾತಿಯಾದ ಜೀನ್ ಗುಡ್‌ನಫ್‌ಗಿಂತ ಹತ್ತು ವರ್ಷ ಹಿರಿಯರು.

ಸೋಹಾ ಅಲಿ ಖಾನ್ ಮತ್ತು ಕುನಾಲ್ ಖೇಮು:
ಸೋಹಾ ಅಲಿ ಖಾನ್ ಮತ್ತು ಕುನಾಲ್ ಕೆಮ್ಮು ಮುದ್ದಾದ ಜೋಡಿಗಳಲ್ಲಿ ಒಂದು ಸೋಹಾ,  ಕುನಾಲ್ ಅವರಿಗಿಂತ ನಾಲ್ಕು ವರ್ಷ ದೊಡ್ಡವರು.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್:
ಬಾಲಿವುಡ್ ನಟಿ ಕಂಗನಾ ರಣಾವತ್ ವಿಕ್ಕಿ ಕೌಶಲ್ ತನಗಿಂತ ಐದು ವರ್ಷ ದೊಡ್ಡವರಾದ ಕತ್ರಿನಾ ಕೈಫ್ ಅವರನ್ನು ಮದುವೆಯಾಗಿದ್ದಕ್ಕಾಗಿ ಖುಷಿಯಲ್ಲಿದ್ದಾರೆ. ವಿಕ್ಕಿ ಮತ್ತು ಕತ್ರಿನಾ ಇವರಿಬ್ಬರು ಬಾಲಿವುಡ್‌ನ ಪವರ್‌ಫುಲ್ ಕಪಲ್ಸನಲ್ಲಿ ಒಂದು.

ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್:
ಸುಶ್ಮಿತಾ ಸೇನ್ ತನಗಿಂತ 15 ವರ್ಷ ಚಿಕ್ಕವನಾದ ರೋಹ್ಮನ್ ಶಾಲ್ ಜೊತೆ ಸಂಬಂಧ ಹೊಂದಿದ್ದರು. ಇವರು ತಮ್ಮ ಬ್ರೇಕಪ್‌ ಘೋಷಿಸಿಯಾಗಿತ್ತು. ಆದರೆ ಅವರು ಇನ್ನೂ ಸಂಬಂಧವನ್ನು ಹೊಂದಿದ್ದಾರೆ ಮತ್ತು ಸ್ನೇಹಿತರಾಗಿ ಉಳಿದಿದ್ದಾರೆಂದು ಇತ್ತೀಚಿನ ವರದಿಗಳು ಹೇಳುತ್ತವೆ. 

Latest Videos

click me!