ಶಾರುಖ್‌ ಖಾನ್ ಪಾರ್ಟಿಗೆ ದೀಪಿಕಾ ಪಡುಕೋಣೆ ಹಾಕ್ಕೊಂಡ ಡ್ರೆಸ್ ಟ್ರೋಲ್‌!

Published : May 02, 2024, 05:12 PM ISTUpdated : May 02, 2024, 05:15 PM IST

ನಟಿ ದೀಪಿಕಾ ಪಡುಕೋಣೆ ನಿಸ್ಸಂದೇಹವಾಗಿ ಹೆಚ್ಚು ಪ್ರೀತಿಸುವ ಮತ್ತು ಅನುಸರಿಸುವ ನಟಿಯರಲ್ಲಿ ಒಬ್ಬರು, ಅವರು ಲಕ್ಷಾಂತರ ಜನರ ಹೃದಯವನ್ನು ಆಳುತ್ತಿದ್ದಾರೆ. ನೋಟ ಮತ್ತು ಕೆಲವು ಉತ್ತಮ ಫ್ಯಾಶನ್ ಸೆನ್ಸ್‌ನಿಂದ ಅಭಿಮಾನಿಗಳು ಮತ್ತು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಬಾಲಿವುಡ್‌ ದಿವಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ತಮ್ಮ ಉಡುಗೆಗಳಿಂದ ಬೆರಗುಗೊಳಿಸುತ್ತಾರೆ. ಅದೇ ಸಮಯದಲ್ಲಿ ಹಲವು ಬಾರಿ ಅವರ ಡ್ರೆಸ್‌ಗಳಿಗಾಗಿ ನೆಟಿಜನ್ಸ್‌ನಿಂದ ನೆಗೆಟಿವ್‌ ಕಾಮೆಂಟ್‌ಗಳನ್ನು ಸಹ ಎದುರಿಸುತ್ತಾರೆ. ಇದೇ ರೀತಿ ಶಾರುಖ್‌ಖಾನ್‌ ಅವರು ಆಯೋಜಿಸಿದ್ದ  ಪಾರ್ಟಿಯಲ್ಲಿನ ದೀಪಿಕಾರ ಲುಕ್‌ ಬಗ್ಗೆ ಸಾಕಷ್ಟು ಟ್ರೋಲ್‌ಗಳಿಗೆ ಗುರಿಯಾಗಬೇಕಾಯಿತು. 

PREV
16
ಶಾರುಖ್‌ ಖಾನ್ ಪಾರ್ಟಿಗೆ  ದೀಪಿಕಾ ಪಡುಕೋಣೆ ಹಾಕ್ಕೊಂಡ ಡ್ರೆಸ್ ಟ್ರೋಲ್‌!

ನಟ ಶಾರುಖ್ ಖಾನ್ ತಮ್ಮ 58ನೇ ಹುಟ್ಟುಹಬ್ಬವನ್ನು 2023ರ ನವೆಂಬರ್ 2 ರಂದು ಸ್ಟಾರ್-ಸ್ಟಡ್ ಪಾರ್ಟಿಯನ್ನು ಏರ್ಪಡಿಸುವ ಮೂಲಕ ಆಚರಿಸಿಕೊಂಡರು. ಆಪ್ತ ಸ್ನೇಹಿತರಿಂದ ಹಿಡಿದು ಉದ್ಯಮದ ಸಹೋದ್ಯೋಗಿಗಳವರೆಗೆ, ಅನೇಕ ಸೆಲೆಬ್ರಿಟಿಗಳು ಪಾರ್ಟಿಯಲ್ಲಿ  ಹಾಜರಾಗಿದ್ದರು.

26

ಅವರ ಆಪ್ತ ಸ್ನೇಹಿತೆ ಮತ್ತು ಸಹ-ನಟಿ ದೀಪಿಕಾ ಪಡುಕೋಣೆ ಕೂಡ ತಮ್ಮ ಪತಿ ರಣವೀರ್ ಸಿಂಗ್ ಅವರೊಂದಿಗೆ ಪಾರ್ಟಿಗೆ ಆಗಮಿಸಿದ್ದರು. ಈ ಸಮಯದಲ್ಲಿ ದೀಪಿಕಾ  ಮಿನುಗುವ ಸಿಲ್ವರ್ ಮಿನಿ ಡ್ರೆಸ್ ಧರಿಸಿದ್ದರು. ಆರು ತಿಂಗಳ ಹಿಂದೆ ದೀಪಿಕಾ ಶಾರುಖ್ ಪಾರ್ಟಿಗೆ ಹೋಗಿದ್ದು. ಇದೀಗ ಅವರು ಗರ್ಭಿಣಿ. ಆದರೆ, ಡ್ರೆಸ್ ಬಗ್ಗೆ ಜನರು ಟ್ರೋಲ್ ಮಾಡುತ್ತಿದ್ದಾರೆ. 

36

ತನ್ನ ಅದ್ಭುತವಾದ ಉಡುಪಿನಲ್ಲಿ ತುಂಬಾ ಹಾಟ್ ಆಗಿ ಕಾಣುತ್ತಿದ್ದ ದೀಪಿಕಾರ ಫೋಟೋಗಳು  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು. ಆದರೆ ನಟಿಯ ಈ ಲುಕ್‌ ಮೆಚ್ಚದ ಅನೇಕರು ಅವರನ್ನು ಟ್ರೋಲ್ ಮಾಡಿದರು.

46

ಅನೇಕರು ನಟಿಯ ಡ್ರೆಸ್ಸಿಂಗ್ ಸ್ಟೈಲ್‌ನಿಂದ ಸ್ವಲ್ಪವೂ ಸಂತೋಷವಾಗಿಲ್ಲ ಎಂದು ತಮ್ಮ ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಅವರು ತಮ್ಮ ಪತಿ ರಣವೀರ್ ಸಿಂಗ್ ಅವರ ಬನಿಯನ್ ಧರಿಸಿ ಬಂದಿದ್ದಾರೆ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

56

ಅನೇಕ ಜನರು ಅವರು ಅವಳು ಸರಿಯಾಗಿ ಡ್ರೆಸ್ ಮಾಡಿಲ್ಲ ಆತುರದಲ್ಲಿದ್ದರು ಎಂದು ಹೇಳಿದ್ದಾರೆ. ಅಲ್ಲದೆ ಆಕೆಯ ಸ್ಟೈಲಿಸ್ಟ್ ರಜೆಯಲ್ಲಿರಬೇಕು ಅದಕ್ಕಾಗಿಯೇ ಆಕೆ ಹಾಗೆ ಕಾಣುತ್ತಿದ್ದರು ಎಂದು ಹಲವರು ಹೇಳುತ್ತಿದ್ದಾರೆ.

66

ಅಷ್ಷಕ್ಕೂ ದೀಪಿಕಾ ಧರಿಸಿದ್ದ ಮಿನುಗುವ ಬೆಳ್ಳಿಯ ಮಿನಿ ಡ್ರೆಸ್ ಬೆಲೆ ಎಷ್ಟು ಗೊತ್ತಾ?   €1.170,00 ಅಂದರೆ ದೀಪಿಕಾರ ಔಟ್‌ಫಿಟ್‌  1,00,000 ರೂಪಾಯಿಗಿಂತ ಸ್ವಲ್ಪ ಹೆಚ್ಚು ಬೆಲೆಯದು.

Read more Photos on
click me!

Recommended Stories