ಉಡುಪಿ: ಇದು ಡಂಪಿಂಗ್ ಯಾರ್ಡ್ ಅಲ್ಲ, ಇದು ಮಲ್ಪೆ ಕಡಲ ತೀರ..!

Jul 13, 2023, 8:30 PM IST

ಉಡುಪಿ(ಜು.13): ಉಡುಪಿಯ ಮಲ್ಪೆ ಬೀಚ್‌ನಲ್ಲಿ ಇದೀಗ ಎಲ್ಲಿ ನೋಡಿದರೂ ಕಸ ಲೋಡುಗಟ್ಟಲೇ ಪ್ಲಾಸ್ಟಿಕ್ ಬಾಟ್ಲಿಗಳು ತುಂಬಿತುಳುಕುತ್ತಿವೆ. ಎಲ್ಲಿ ನೋಡಿದರೂ ಗಬ್ಬು ವಾಸನೆ ಕಾಲಿಡಲಾಗದಷ್ಟು ಕಸ ತುಂಬಿಕೊಂಡಿದೆ. ನಾವು ಹಾಕಿದ ಕಸವವನ್ನ ಅರಬ್ಬಿ ಸಮುದ್ರ ನಮಗೆ ವಾಪಸ್ ಕೊಡುತ್ತಿದೆ. ಹತ್ತು ದಿನಗಳ ಕಾಲ ಸುರಿದ ಧಾರಾಕಾರ ಮಳೆ ಹಾಗೂ ತೂಫಾನ್ ಎಫೆಕ್ಟ್ ನಿಂದಾಗಿ ಬೀಚ್‌ನಲ್ಲಿ ಇದೀಗ ಎಲ್ಲಿ ನೋಡಿದರೂ ಕಸ ಬಿದ್ದಿದೆ. ಇದು ಮನುಷ್ಯನ ಪರಿಸರ ವಿರೋಧಿ ಕೃತ್ಯಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಮಲ್ಪೆ ಎಂಬ ಸುಂದರ ತಾಣ ಉಳಿಸಿಕೊಳ್ಳುವುದು ಹೇಗೆ? ಅಂತ ಪರಿಸರ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ. 

ಸಚಿವರ ಜೊತೆ ರಾಹುಲ್‌ ಗಾಂಧಿ ಸಭೆ, ಲೋಕಸಭೆ ಚುನಾವಣೆಗೆ ಟಾಸ್ಕ್!