ಕಿಸಿಕ್ ಎಂದು ಅಲ್ಲು ಅರ್ಜುನ್ ಎದುರು ಕುಣಿದ ಶ್ರೀ ಲೀಲಾ; ಇದಕ್ಕೆ ಕೋಟಿ ಡಿಮ್ಯಾಂಡ್ ಮಾಡಿದ್ದು ನಿಜವೇ?

By Vaishnavi Chandrashekar  |  First Published Nov 27, 2024, 5:59 PM IST

ಐಟಂ ಹಾಡಿಗೆ ಹೆಜ್ಜೆ ಹಾಕಿದ ಶ್ರೀಲೀಲಾ....ಹಾಡು ಅರ್ಥವಾಗದೆ ಫ್ಲಾಪ್‌ ಎಂದು ಟ್ರೋಲ್ ಮಾಡುತ್ತಿರುವ ಕನ್ನಡಿಗರು.......


ಭಾರತೀಯ ಚಿತ್ರರಂಗದಲ್ಲಿ ಹಿಸ್ಟರ್ ಕ್ರಿಯೇಟ್ ಮಾಡಿದ ಬ್ಲಾಕ್ ಬಸ್ಟರ್ ಪುಷ್ಪ ಚಿತ್ರದ ಎರಡನೇ ಸೀಕ್ವೆನ್ಸ್‌ ಇದೇ ಡೆಸೆಂಬರ್ 5ರಂದು ರಿಲೀಸ್ ಆಗುತ್ತಿದೆ. ಈಗಾಗಲೆ ಪುಷ್ಪ 2 ಚಿತ್ರ ಹಾಡುಗಳು, ಪೋಸ್ಟ್‌ ಲುಕ್ ಮತ್ತು ಟೀಸರ್ ಜನರ ಗಮನ ಸೆಳೆದಿದೆ. ಊ ಅಂಟಾವಾ ಹಾಡಿನಲ್ಲಿ ಸಮಂತಾ ಮೋಡಿ ಮಾಡಿದ ಹಾಗೆ ಈ ಸಲ ಜನರ ಮುಂದೆ ಕನ್ನಡತಿ ಶ್ರೀಲೀಲಾ ಬರ್ತಿದ್ದಾರೆ. ಅದುವೇ ಕಿಸಿಕ್ ಹಾಡಿನ ಮೂಲಕ. 

ಪುಷ್ಪ 2 ಚಿತ್ರದ ಕಥೆ ಮೇಲೆ ಜನರಿಗೆ ಎಷ್ಟು ಕ್ಯೂರಿಯಾಸಿಟಿ ಇದೆ ಅಷ್ಟೇ ಕ್ಯೂರಿಯಾಸಿಟಿ ಇರುವುದು ಐಟಂ ಹಾಡಿನ ಬಗ್ಗೆ. ಸಮಂತಾ ರುತ್ ಪ್ರಭು ಬದಲು ಕನ್ನಡತಿ ಶ್ರೀ ಲೀಲಾ ಕಾಣಿಸಿಕೊಂಡಿದ್ದಾರೆ. ಐಟಂ ಹಾಡಿನಲ್ಲಿ ಲೀಲಾ ಸಖತ್ ಹಾಟ್ ಆಗಿ ಕಾಣಿಸಿಕೊಂಡರೂ ಸಂಪೂರ್ಣ ವಿಡಿಯೋ ನೋಡುವವರೆಗೂ ವೀಕ್ಷಕರು ಏನೂ ಹೇಳುವುದಿಲ್ಲವಂತೆ ಏಕೆಂದರೆ ಹಾಡು ಅಷ್ಟಕ್ಕೆ ಅಷ್ಟೆ ಅಂತಿದ್ದಾರೆ. ಟಿ- ಸೀರಿಸ್‌ ತೆಲುಗು ಯುಟ್ಯೂಬ್ ಚಾನೆಲ್‌ನಲ್ಲಿ ಕಿಸಿಕ್ ಹಾಡಿನ ಲಿರೀಕ್ಸ್‌ನ ನವೆಂಬರ್ 24ರಂದು ಅಪ್ಲೋಡ್ ಮಾಡಲಾಗಿದೆ. ಈಗಾಗಲೆ 32 ಕೋಟಿ ವೀಕ್ಷಣೆ ಪಡೆದು ಇನ್ನೂ ಟ್ರೆಂಡಿಂಗ್‌ನಲ್ಲಿದೆ. 

Tap to resize

Latest Videos

ಸೀರೆಯಲ್ಲೂ ಸೊಂಟ ತೋರಿಸಬೇಡ ಚಾರು; ಪೋಟೋಗೆ ಬರೀ ಹುಡುಗರದ್ದೇ ಕಾಮೆಂಟ್!

ಚಂದ್ರ ಬೋಸ್ ಕಿಸಿಕ್‌ ಹಾಡಿನ ಸಾಹಿತ್ಯಕ್ಕೆ ಸುಬ್ಲಹ್ಷಿಣಿ ಕಂಠ ನೀಡಿದ್ದಾರೆ. ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಮಾಡಿದರೆ ವಿಕಾಸ್ ಮತ್ತು ರವಿ ಕೃಷ್ಣ ಕೀಬೋರ್ಡ್‌ ಮ್ಯೂಸಿಕ್ ನೀಡಿದ್ದಾರೆ. ಮನಸಿ ಮತ್ತು ಅಭಿಷೇಕ್ ಬ್ಯಾಕಿಂಗ್ ವೋಕಲ್ ಆಗಿದ್ದಾರೆ. ಈ ಹಾಡಲಿನಲ್ಲಿ ಕಾಣಿಸಿಕೊಳ್ಳಲು ಶ್ರೀಲೀಲಾ ಕೋಟಿಗಟ್ಟಲೆ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ.  ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು, ಧನಂಜಯ್, ರಾವ್ ರಮೇಶ್, ಸುನಿಲ್, ಅನಸೂಯ ಭಾರದ್ವಾಜ್ ಅಭಿನಯಿಸಿದ್ದಾರೆ. 

ಬಿಗ್ ಬಾಸ್‌ಗೆ ಕಾಲಿಡುವ ಮುನ್ನ ಕೂದಲು ಕತ್ತರಿಸಿದ ಭವ್ಯಾ ಗೌಡ

ಕನ್ನಡ ಕಿಸ್ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ಶ್ರೀಲೀಲಾ ಮುರ್ನಾಲ್ಕು ಕನ್ನಡ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡರು ಅದಾದ ಮೇಲೆ ತೆಲುಗು ಚಿತ್ರರಂಗಕ್ಕೆ ಹಾರಿಬಿಟ್ಟರು. ತೆಲುಗು ಚಿತ್ರರಂಗದಲ್ಲಿ ಅಷ್ಟಾಗಿ ಯಶಸ್ಸು ಕಾಣದಿದ್ದರೂ ಅಲ್ಲೇ ಇರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸುತ್ತಿದ್ದರು. ಹೇಗೆ ಸಮಂತಾಗೆ ಊ ಅಂಟಾವಾ ಹಾಡು ಕರಿಯರ್ ಬ್ರೇಕ್ ನೀಡಿತ್ತು ಹಾಗೆ ಶ್ರೀಲೀಲಾಗೆ ಈ ಹಾಡು ಬ್ರೇಕ್ ಕೊಡಲಿ ದೊಡ್ಡ ಯಶಸ್ಸು ಇನ್ನು ಮುಂದೆ ಆದರೂ ಕಾಣಲಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 

 

click me!