ಬೆಂಗಳೂರಲ್ಲಿ ಕೆಟ್ಟು ನಿಂತ ನೀರಿನ ಘಟಕಗಳು: ಶುದ್ಧ ಕುಡಿಯುವ ನೀರಿಗಾಗಿ ಜನರ ಹಾಹಾಕಾರ

Oct 19, 2023, 11:44 AM IST

ಸಿಲಿಕಾನ್ ಸಿಟಿ ಜನರಿಗೆ ಕಾವೇರಿ ಶಾಕ್ ಮಧ್ಯೆಯೇ ಮತ್ತೊಂದು ಶಾಕ್ ಎದುರಾಗಿದೆ.ನಗರದಲ್ಲಿ ಶುದ್ಧ  ನೀರಿಗೆ  ಜನ್ರು ಪರದಾಡುವ ಸ್ಥಿತಿ ಎದುರಾಗಿದೆ.ಬಿಬಿಎಂಪಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿದ್ದು, ಒಂದು ಏರಿಯಾ ಬಿಟ್ಟು ಮತ್ತೊಂದು ಏರಿಯಾಗೆ ಹೋಗಿ ಜನ ನೀರು ತರಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಕೆಲ ನಗರಗಳಲ್ಲಿ ಶಾಸಕರ ಅನುದಾನ ಕೊಟ್ರೆ..ಇತ್ತ ಪಾಲಿಕೆ ಕೂಡ ಏಜೆನ್ಸಿಗೆ ಹಣ ನೀಡುತ್ತಿತ್ತು. ಆದ್ರೆ ಬಿಬಿಎಂಪಿ ಕಳೆದ 7 ತಿಂಗಳಿಂದ ಹಣ ನೀಡಿಲ್ಲ..ಹೀಗಾಗಿ ಏಜೆನ್ಸಿ ಶುದ್ಧಘಟಕವನ್ನೇ ಕ್ಲೋಸ್ ಮಾಡಿದೆ. ಆರೇಳು ತಿಂಗಳು ಕಳೆದ್ರೂ ಕೆಟ್ಟು ನಿಂತ ಘಟಕಗಳನ್ನು ಅಧಿಕಾರಿಗಳು ಸರಿ ಮಾಡಿಲ್ಲ. ಇತ್ತ ಕೆಲ ಕ್ಷೇತ್ರಗಳಲ್ಲಿ ಮಾಜಿ ಕಾರ್ಪೋರೇಟರ್‌ಗಳ ಬೆಂಬಲಿಗರಿಗೆ ಮತ್ತು ಆಪ್ತರಿಗೆ ಈ ಕುಡಿಯುವ ನೀರಿನ ಘಟಕಗಳ ಟೆಂಡರ್ ನೀಡಲಾಗಿದ್ದು, ವಾಟರ್ ಪ್ಯೂರಿಫೈಗೆ ಇವರು ಕೂಡ ದುಡ್ಡು ಕೊಟ್ಟಿಲ್ಲ. ಹೀಗಾಗಿ ಏಜೆನ್ಸಿಯವ್ರು ಅನಿವಾರ್ಯವಾಗಿ ಶುದ್ದ ಕುಡಿಯುವ ನೀರಿನ ಘಟಕಗಳನ್ನ ಬಂದ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಬೆಂಗಳೂರಿನಲ್ಲಿ ಬಲಿ ಪಡೆಯಲು ಕಾಯ್ತಿದೆ 11,361 ರಸ್ತೆ ಗುಂಡಿಗಳು !