ಸರ್ಕಾರದ ವಿರುದ್ಧ ಹಿಂದೂ ಕಾರ್ಯಕರ್ತರ ಆಕ್ರೋಶ..! ಏನಿದು 2017ರ ದತ್ತಪೀಠ ವಿವಾದ..?

Jan 5, 2024, 3:39 PM IST

ಒಂದು ಕಡೆ ರಾಮ ಮಂದಿರ ಲೋಕಾರ್ಪಣಾ ಕಾರ್ಯಕ್ರಮದ ಸಂಭ್ರಮ ದಿನೇ ದಿನೇ ಹೆಚ್ಚಾಗ್ತಾ ಇದೆ. ಇನ್ನೊಂದು ಕಡೆಯಲ್ಲಿ ಹಿಂದೂ ಹೋರಾಟಗಾರರ ಮೇಲಿನ ಹಳೆ ಕೇಸುಗಳಿಗೆ ಜೀವ ನೀಡುವ ಕೆಲಸ ಮಾಡ್ತಿದೆ ಅನ್ನೋದು ಹಿಂದೂ ಕಾರ್ಯಕರ್ತರ ಆರೋಪ. ಹುಬ್ಬಳ್ಳಿಯಲ್ಲಿ 31 ವರ್ಷದ ಕರಸೇವಕನನ್ನ ಅರೆಸ್ಟ್ ಮಾಡಿ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ ಈಗ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದೆ.  7 ವರ್ಷಗಳ ಹಿಂದಿನ ದತ್ತಪೀಠ ಕೇಸ್ ರಿ ಓಪನ್ ಆಗಿದೆ ಅಂತಾ ದತ್ತ ಪೀಠಕ್ಕಾಗಿ ಹೋರಾಟ ನಡೆಸಿದವರು ಆರೋಪಿಸ್ತಿದ್ದಾರೆ. ಒಂದು ಕಡೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ರಾಮ ಮಂದಿರ ಹೋರಾಟಕ್ಕಾಗಿ ಜೀವ ತೇಯ್ದ ಕರಸೇವಕರ ಖುಷಿ ಮುಗಿಲುಮುಟ್ಟಿದೆ. ಇದು ಹಿಂದೂ ಹೋರಾಟಗಾರರ ಖುಷಿಯನ್ನ ದುಪ್ಪಟ್ಟು ಮಾಡ್ತಾ ಇದೆ. ಇನ್ನೊಂದು ಕಡೆಯಲ್ಲಿ ಕರಸೇವಕರು ಅರೆಸ್ಟ್ ಭೀತಿಯಲ್ಲಿ ಇದ್ದಾರೆ. ಇದಕ್ಕೆ ಉದಾಹರಣೆಯಾಗಿ ಸಿಗೋದೇ 31 ವರ್ಷಗಳ ಹಿಂದಿನ ಕೇಸಿಗೆ ಮರುಜೀವ ಕೊಟ್ಟು ಹುಬ್ಬಳ್ಳಿಯಲ್ಲಿ ಕರಸೇವಕನನ್ನ ಬಂಧಿಸಿದ್ದು. 31 ವರ್ಷ ಗಳ ಹಿಂದಿನ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹುಬ್ಬಳ್ಳಿಯಲ್ಲಿ ಕರಸೇವಕನನ್ನ ಬಂಧಿಸಲಾಗಿತ್ತು. ಇದು ರಾಜ್ಯಾದ್ಯಂತ ದೊಡ್ಡ ಸದ್ದನ್ನು ಮಾಡಿತ್ತು. ಬಿಜೆಪಿ ಇದೊಂದು ಘಟನೆ ವಿರುದ್ಧ ರಾಜ್ಯದ ಮೂಲೆ ಮೂಲೆಯಲ್ಲಿ ಪ್ರತಿಭಟನೆ ಮಾಡಿತ್ತು. ಈ ಸುದ್ದಿ ಇನ್ನೂ ಹಸಿಯಾಗಿ ಇರುವಾಗಲೇ ಇನ್ನೊಂದು ಕೇಸ್ ಮತ್ತೆ ಭಾರಿ ಸದ್ದು ಮಾಡ್ತಾ ಇದೆ. 

ಇದನ್ನೂ ವೀಕ್ಷಿಸಿ:  ತಂದೆಯೇ ಮಗಳಿಗೆ ತಾಯಿ ಆಗಿದ್ದ..! ರೀಲ್ಸ್ ಗೆಳಯನಿಗಾಗಿ ಮಗುವನ್ನೇ ಬಿಟ್ಟಳು..!