ಆಟವಾಡುತ್ತಾ ಕಟ್ಟಡದ ಮೇಲಿಂದ ಬಿದ್ದು ಒಂದೂವರೆ ವರ್ಷದ ಮಗು ಸಾವು

Mar 15, 2023, 9:56 AM IST

ಕಟ್ಟಡದ ಮೇಲಿಂದ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಚಾಮರಾಜಪೇಟೆಯ ಆಜಾದ್ ನಗರದ 6ನೇ ಕ್ರಾಸ್​ನಲ್ಲಿ ನಡೆದಿದೆ. ಒಂದೂವರೆ ವರ್ಷದ ದೀಕ್ಷಾ ಮಹಡಿ‌ ಮೇಲಿಂದ ಬಿದ್ದು ಸಾವನ್ನಪ್ಪಿದ ಮಗು. ವಿನಯ್ ಎಂಬ ದಂಪತಿಯ ಪುತ್ರಿ ದೀಕ್ಷಾ, ಸ್ನೇಹಿತರ ಮನೆಗೆ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ.  ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಗು  ಕೊನೆಯುಸಿರೆಳೆದಿದೆ. ರಾತ್ರಿ 9 ಗಂಟೆ ಸುಮಾರಿಗೆ ಊಟ ಮಾಡಿಸುತ್ತಿದ್ದ ದೀಕ್ಷಾ ತಾಯಿ. ಆ ವೇಳೆ ಆಟವಾಡುತ್ತ ಗ್ರಿಲ್ಸ್ ಮೇಲೆ ಮಗು ಹತ್ತಿದೆ. ಬಳಿಕ ನೋಡ ನೋಡುತ್ತಿದ್ದಂತೆ ಜಾರಿ ಕೆಳ ಬಿದ್ದಿದ್ದು, ಆಸ್ಪತ್ರೆ ಮಾರ್ಗ ಮಧ್ಯೆ ಮಗು ಕೊನೆಯುಸಿರೆಳೆದಿದೆ. ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.