ಆಕ್ಷನ್ ಕ್ವೀನ್‌ ಮಾಲಾಶ್ರೀ ಸ್ಥಾನ ಕಿತ್ತುಕೊಳ್ಳುತ್ತಾರಾ ನಿಶ್ವಿಕಾ ನಾಯ್ಡು, ಮೇಘನಾ ಶೆಟ್ಟಿ; ಏನಿದು ಗೊಂದಲ?

Published : Sep 30, 2024, 04:30 PM IST
ಆಕ್ಷನ್ ಕ್ವೀನ್‌ ಮಾಲಾಶ್ರೀ ಸ್ಥಾನ ಕಿತ್ತುಕೊಳ್ಳುತ್ತಾರಾ ನಿಶ್ವಿಕಾ ನಾಯ್ಡು, ಮೇಘನಾ ಶೆಟ್ಟಿ; ಏನಿದು ಗೊಂದಲ?

ಸಾರಾಂಶ

ಆಕ್ಷನ್ ಕ್ವೀನ್ ಆಗಲು ರೆಡಿಯಾಗುತ್ತಿದ್ದಾರೆ ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ. ಮಾಲಾಶ್ರೀ ಸ್ಥಾನಕ್ಕೆ ಯಾರು ಬರ್ತಾರೆ?  

ಸ್ಯಾಂಡಲ್‌ವುಡ್ ಪಾಲಿಗೆ ಆಕ್ಷನ್ ಕ್ವೀನ್ ಅಂದ್ರೆ ಅದು ಒನ್ ಆಂಡ್ ಓನ್ಲಿ ಮಾಲಾಶ್ರೀ. ಸದ್ಯ ಆ ಆಕ್ಷನ್ ಕ್ವೀನ್ ಜಾಗ ತುಂಬಲು ಇಬ್ಬರು ಚೆಂದುಳ್ಳಿ ಚೆಲುವೆಯರು ಸಿದ್ದವಾಗ್ತಾ ಇದ್ದಾರೆ. ಗ್ಲಾಮರಸ್ ರೋಲ್‌ನಲ್ಲಿ ಇವರನ್ನು ನೋಡಿ ಮನಸೋತವರು, ಇವರ ಹೊಸ ಅವತಾರ ನೋಡಿದರೆ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳೋದು ಪಕ್ಕಾ. ಹಾಗಾದ್ರೆ ಇವರಿಬ್ಬರ ಆ್ಯಕ್ಷನ್ ಅವತಾರ ಹೇಗಿದೆ..?.

ಯೆಸ್! ಕನ್ನಡ ಚಿತ್ರರಂಗದಲ್ಲಿ ಆಲ್ ಟೈಂ ಆಕ್ಷನ್ ಕ್ವೀನ್ ಪಟ್ಟ ನಮ್ಮ ಮಾಲಾಶ್ರೀ ಬಿಟ್ರೆ ಇನ್ಯಾರಿಗೂ ಕೊಡೋಕೆ ಸಾಧ್ಯವೇ ಇಲ್ಲ. ಮಾಲಾಶ್ರೀ ನಟಿಸಿದ ಆಕ್ಷನ್ ಮೂವಿಗಳು ಒಂದು ಕಾಲದಲ್ಲಿ ನಾಯಕಪ್ರಧಾನ ಸಿನಿಮಾಗಿಂತಲೂ ಬಿಗ್ ಹಿಟ್ ಆದ ಉದಾಹರಣೆ ಇವೆ. ಈಗಿನ ಸ್ಟಾರ್ಸ್ ಕಲೆಕ್ಷನ್ ಮಾಡುತ್ತಿದ್ದಂತೆ ಆಗ ಮಾಲಾಶ್ರೀ ಸಿನಿಮಾಗಳು ಬಾಕ್ ಆಫೀಸ್‌ ದೋಚುತ್ತಿದ್ವು. ಅದು ಮಾಲಾಶ್ರಿಯ ಆ್ಯಕ್ಷನ್ ಡೈಲಾಗ್ ನಿಂದ ಮಾತ್ರ.. ಹೀಗಾಗೆ ಮಾಲಾಶ್ರಿಗೆ ಕನ್ನಡದ ಲೇಡಿ ಸೂಪರ್ ಸ್ಟಾರ್ ಅಂತ ಕರೀತಾ ಇದ್ದಾರೆ. ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಬಳಿಕ ಈ ಸ್ಥಾನ ತುಂಬಲು ತುಂಬಾ ನಟಿಯರು ಪ್ರಯತ್ನ ಪಟ್ಟರುವ ಯಾರಿಗೂ ಅಂಥಾ ದೊಡ್ಡ ಯಶಸ್ಸು ಸಿಕ್ಕಿಲ್ಲ. ನಟಿ ರಾಗಿಣಿ ಒಂದಿಷ್ಟು ದಿನ ಮಾಲಾಶ್ರೀಯನ್ನು ನೆನಪಿಸುವ ಕೆಲಸ ಮಾಡಿದ್ದರು ಆದರೆ ಅದು ಕ್ಲಿಕ್‌ ಆಗ್ಲಿಲ್ಲ. ಮಾಲಶ್ರಿಗೆ ಮಾಲಾಶ್ರೀಯೇ ಸರಿ ಸಾಟಿ ಮತ್ತಿನ್ಯಾರು ಅವರ ಹಾಗೆ ಮಿಂಚೋಕೆ ಸಾಧ್ಯವಿಲ್ಲ ಅನ್ನೋದು ಗೊತ್ತಾಯ್ತು.

ಆರಾಧ್ಯ ನನ್ನ ಮಗಳು ಆಕೆ ಯಾವತ್ತಿದ್ದರೂ ಬೆಸ್ಟ್‌; ಕನ್ನಡ ನಟಿಯ ಟೀಕೆಗೆ ಟಾಂಗ್ ಕೊಟ್ಟ ಐಶ್ವರ್ಯ ರೈ

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಆಕ್ಟಿವ್ ಆಗಿರೋ ಇಬ್ಬರು ನಟಿಮಣಿಯರು ನಾವೊಂದು ಕೈ ನೋಡೇಬೇಡೋಣ  ಅಂತ ಆಕ್ಷನ್ ಮೋಡ್‌ಗಿಳಿದಿದ್ದಾರೆ. ಅದಕ್ಕಾಗಿ ಜುಟ್ಟು ಕಟ್ಟಿಕೊಂಡು ಬೆವರು ಹರಿಸುತ್ತಾ ಅ್ಯಕ್ಷನ್‌ನ ಎಲ್ಲಾ ಕಲೆಗಳನ್ನು ಕಲಿಯುತ್ತಿದ್ದಾರೆ. ಅವರೇ ಹಾಟಿ ಮೇಘಾ ಶೆಟ್ಟಿ ಹಾಗು ಬ್ಯೂಟಿ ನಿಶ್ವಿಕಾ ನಾಯ್ಡು. ಮೇಘಾ ಶೆಟ್ಟಿ ಮತ್ತು ನಿಶ್ವಿಕಾ ನಾಯ್ಡು ಇವರಿಬ್ಬರು ಈಗ ಬರೀ ಗ್ಲಾಮರ್ ಗೊಂಬೆಗಳಲ್ಲ ಟೆರರ್ ಚೆಲುವೆಯರು ಹೌದು. ಯಾಕಂದ್ರೆ ಇಬ್ಬರು ಈಗ ಕನ್ನಡದ ಆ್ಯಕ್ಷನ್ ಕ್ವಿನ್ಸ್ ಆಗಿದ್ದಾರೆ. ಕಿರುತೆರೆಯಿಂದ ಬಿಗ್ ಸ್ಕ್ರೀನ್‌ಗೆ ಬಂದು ತನ್ನ ಗ್ಲಾಮರ್ ಲುಕ್‌ನಿಂದ ಕಿಕ್ ಕೊಟ್ಟ ಮೇಘಾ ಶೆಟ್ಟಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ತ್ರಿಬಲ್ ರೈಡಿಂಗ್ , ದಿಲ್ ಪಸಂದ್ ಮತ್ತು  ಕೈವ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿರೋ ಈ ಚೆಲುವೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ.

ಈ ನಡುವೆ ಸದಾ ಜಿಮ್‌ನಲ್ಲಿ ಬೆವರಿಳಿಸೋ ಈ ಸುಂದರಿ, ತನ್ನ ಕೋಮಲ ಮೈಯನ್ನು ಜಿಮ್‌ನಲ್ಲಿ ದಂಡಿಸ್ತಾ ಇರುತ್ತಾರೆ. ಹಲವು ಸಾಹಸ ಕಲೆಗಳನ್ನು ಕೂಡ ಕಲೀತಾ ಫಿಟ್ ಆಂಡ್ ಫೈನ್ ಆಗಿ ಕಂಗೊಳಿಸ್ತಾ ಇದ್ದಾರೆ. ಇತ್ತೀಚಿಗೆ ಮೇಘನಾ ಸೋಷಿಯಲ್ ಮಿಡಿಯಾದಲ್ಲಿ ಕಿಕ್ ಅಪ್ ಮಾಡೋ ವಿಡಿಯೋವನ್ನ ಶೇರ್ ಮಾಡಿದ್ದರು. ಇನ್ನೂ ಮೇಘಾ ಕಂಬವನ್ನು ಏರುವ ವಿಡಿಯೋ ಕೂಡ ಶೇರ್ ಮಾಡಿದ್ದರು. ಬ್ಯಾಕ್ ಫ್ಲಿಪ್ ಮಾಡೋದನ್ನೂ ಮೇಘಾ ಕಲಿತುಕೊಂಡಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡೋ ಹಲವು ವಿಡಿಯೋ ಮೇಘಾ ಶೇರ್ ಮಾಡಿದ್ದಾರೆ. ಇದನ್ನೆಲ್ಲಾ ನೋಡಿವದರು ಈಕೆ ಖಂಡಿತ ಮಾಲಾಶ್ರೀ ಸ್ಥಾನ ತುಂಬ್ತಾಳೆ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ.

ಯೋಚನೆ ಮಾಡಿ ಮಾಡಿ ಅದೆಷ್ಟೋ ದಿನ ನಿದ್ರೆ ಮಾಡಿಲ್ಲ; ಅವಕಾಶ ಗಿಟ್ಟಿಸಿಕೊಂಡ ಸತ್ಯ ಬಿಚ್ಚಿಟ್ಟ ದುನಿಯಾ ವಿಜಯ್ ಪುತ್ರಿ ಮೋನಿಷಾ!

ಕನ್ನಡದ ಮೊದಲ ಸಿಕ್ಸ್ ಪ್ಯಾಕ್ ಹೀರೋಯಿನ್ ನಿಶ್ವಿಕಾ..!

ಇನ್ನೂ ಸ್ಯಾಂಡಲ್‌ವುಡ್‌ನ ಮತ್ತೊಬ್ಬ ಆಕ್ಷನ್ ಕ್ವೀನ್ ಅಂದ್ರೆ ನಿಶ್ವಿಕಾ ನಾಯ್ಡು. ಹೊಡಿರಲೇ ಹಲಗಿ ಅಂತ ನರ್ತಿಸಿ ಪಡ್ಡೆ ಹೈಕಳನ್ನು ಹುಚ್ಚೆದ್ದು ಕುಣಿಸಿದ ಈ ಚೆಲುವೆ, ಗರಡಿಯಲ್ಲಿ ಕುಸ್ತಿ ಪಟುವಾಗೋದಕ್ಕೂ ಸೈ. ಜಿಮ್‌ನಲ್ಲಿ ಕಸರತ್ತು ಮಾಡಿ ಹುಡುಗರನ್ನೂ ಮೀರಿಸುವಂತೆ ಆಬ್ಸ್‌ಗಳಿಸಿಕೊಂಡಿದ್ದಾರೆ ಈ ಚೆಲುವೆ. ಹೀರೋಗಳನ್ನೂ ಮೀರಿಸುವಂತೆ ಕನ್ನಡದ ಮೊದಲ ಸಿಕ್ಸ್ ಪ್ಯಾಕ್ ಹೀರೋಯಿನ್ ಆದವರು ನಿಶ್ವಿಕಾ ನಾಯ್ಡು. ಹಾರ್ಸ್ ರೈಡಿಂಗ್‌ನಲ್ಲಿ ಪಂಟರ್ ಆಗಿರೋ ನಿಶ್ವಿಕಾ ಇತ್ತೀಚಿಗೆ ಬಾಕ್ಸಿಂಗ್ ಕೂಡ ಕಲೀತಾ ಇದ್ದಾರೆ. ತಮ್ಮ ವರ್ಕೌಟ್ ಮತ್ತು ಸಾಹಸ ಕಲಿಕೆಗಳ ಫೋಟೋ,  ವಿಡಿಯೋನ ನಿಶ್ವಿಕಾ ಶೇರ್ ಮಾಡ್ತಾ ಇರ್ತಾರೆ. ಈಕೆಯ ಗ್ಲಾಮರ್ ಅವತಾರ ಕಂಡು ಕಣ್ಣು ತಂಪು ಮಾಡಿಕೊಂಡವರು, ಆಕ್ಷನ್ ಅವತಾರ ನೋಡಿದ್ರೆ ಅಬ್ಬಬ್ಬಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳೋದು ಫಿಕ್ಸ್.

ಒಟ್ಟಾರೆ ಸ್ಯಾಂಡಲ್‌ವುಡ್‌ನ ಹೊಸ ಆಕ್ಷನ್ ಕ್ವೀನ್ ಯಾರಾಗ ಬಹುದು ಅಂದ್ರೆ ಖಂಡಿತ ಇವರಿಬ್ಬರನ್ನು ತೋರಿಸಬಹುದು. ಬರೀ ಗ್ಲಾಮರ್ ಅಷ್ಟೇ ಅಲ್ಲ ..ಇವರ ಆಕ್ಷನ್ ಖದರ್ ತೋರಿಸೋವಂಥಾ ಸ್ಕ್ರಿಪ್ಟ್ ಗಳು ಸಿಕ್ಕಿದ್ರೆ, ಖಂಡಿತ ಈ ಚೆಂದುಳ್ಳಿ ಚೆಲುವೆಯರು ಹಲಗಿ ಹೊಡೆದು, ಸದ್ದು ಮಾಡೋದ್ರಲ್ಲಿ ಡೌಟೇ ಇಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜೈಲಿನಿಂದ Darshan Thoogudeepa ರಿಲೀಸ್‌ ಆಗೋ ವಿಷಯ; ಮಹತ್ವದ ಹೇಳಿಕೆ ಕೊಟ್ಟ ಹೊಸ CM ಡಿಕೆ ಶಿವಕುಮಾರ್!
Kiccha Sudeep Bodyguard:‌ ಇಟಲಿಯಿಂದ ಬಂದ ಕಿಚ್ಚ ಸುದೀಪ್ ಬಾಡಿಗಾರ್ಡ್‌ ಸಾಧನೆ ಅಷ್ಟಿಷ್ಟಲ್ಲ; ಆ ಆಸೆ ಇದ್ಯಂತೆ