ತನ್ನನ್ನೇ ಮದುವೆಯಾಗಿ ಸುದ್ದಿಯಾದವಳು ತನ್ನನ್ನೇ ಕೊಂದಳು: ಟಿಕ್‌ಟಾಕ್‌ ಸ್ಟಾರ್‌ ಸುಸೈ*ಡ್‌

By Anusha Kb  |  First Published Sep 30, 2024, 4:20 PM IST

ತನ್ನನ್ನೇ ತಾನು ಮದುವೆಯಾಗಿ ಫೇಮಸ್ ಆಗಿದ್ದ ಟರ್ಕಿಯ ಇನ್ಫ್ಲುಯೆನ್ಸರ್ ಕುಬ್ರ ಆಯ್ಕುತ್ ಸಾವಿಗೆ ಶರಣಾಗಿದ್ದಾರೆ. ತೂಕ ಇಳಿಕೆಯಿಂದ ಖಿನ್ನತೆಗೆ ಒಳಗಾಗಿದ್ದ ಅವರು, ತಮ್ಮ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಇಸ್ತಾಂಬುಲ್‌: ತನ್ನನ್ನೇ ತಾನು ಮದುವೆಯಾಗಿ ಫೇಮಸ್ ಆಗಿದ್ದ ಟರ್ಕಿಯ ಖ್ಯಾತ ಇನ್ಫ್ಲುಯೆನ್ಸರ್‌  ಕುಬ್ರ ಆಯ್ಕುತ್‌ ಅವರು ಸಾವಿಗೆ ಶರಣಾಗಿದ್ದಾನೆ. ತಾವು ವಾಸವಾಗಿದ್ದ ಐಷಾರಾಮಿ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಿಂದ ಹಾರಿ ಅವರು ಸಾವಿಗೆ ಶರಣಾಗಿದ್ದು, ಅವರಿಗೆ ಕೇವಲ 26 ವರ್ಷ ವಯಸ್ಸಾಗಿತ್ತು. ಸಾಯುವುದಕ್ಕೂ ಮೊದಲು ಕುಬ್ರ ಅವರು ತಮ್ಮ ತೂಕ ಇಳಿಕೆಯಿಂದಾಗಿ ಖಿನ್ನತೆಗೆ ಒಳಗಾಗಿದ್ದರು, ಇದನ್ನು ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಆದರೆ ಇದಾಗಿ ಕೆಲ ಗಂಟೆಗಳಲ್ಲಿ ಅವರು ಸಾವಿಗೆ ಶರಣಾಗಿದ್ದಾರೆ. ಇಸ್ತಾಂಬುಲ್‌ನ ಸುಲ್ತಾನ್‌ಬೆಲ್ಲಿ ಜಿಲ್ಲೆಯಲ್ಲಿ ವಾಸವಾಗಿದ್ದ ಅವರು ಅಲ್ಲಿನ ಬಹುಮಹಡಿ ಕಟ್ಟದ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಿಂದ ಕೆಳಗೆ ಹಾರಿ ಬದುಕಿಗೆ ಗುಡ್ ಬಾಯ್ ಹೇಳಿದ್ದಾರೆ. ಆಕೆ ಸಾವಿಗೀಡಾದ ಸ್ಥಳದಲ್ಲಿ ಡೆತ್‌ನೋಟ್‌ ಕೂಡ ಲಭ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಶರು ಈಕೆಯ ಸಾವಿಗೆ ಏನು ಕಾರಣ ಎಂಬ ಬಗ್ಗೆ ತನಿಖೆ ಮಾಡುತ್ತಿದ್ದಾರೆ. 

ಸಾವಿಗೆ ಕೆಲ ಗಂಟೆಗಳ ಮೊದಲು ಆಕೆ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ತಾನು ನಿರಂತರ ತೂಕ ಕಳೆದುಕೊಳ್ಳುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ನಾನು ತೂಕ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ, ತೂಕ ಏರಿಕೆಯಂತೂ ಆಗುತ್ತಿಲ್ಲ, ಪ್ರತಿದಿನವೂ ನನ್ನ ಒಂದು ಕೇಜಿ ತೂಕ ಇಳಿಕೆಯಾಗುತ್ತಿದೆ. ನನಗೆ ಏನೂ ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ, ನನಗೆ ತುರ್ತಾಗಿ ತೂಕ ಹೆಚ್ಚಿಸಿಕೊಳ್ಳಬೇಕು ಎಂದು ಆಕೆ ಕೊನೆಯದಾಗಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ ಹೇಳಿಕೊಂಡಿದ್ದಳು. ಅಲ್ಲದೇ ಕೊನೆ ವೀಡಿಯೋದಲ್ಲಿ ಆಕೆ ಮನೆಯನ್ನು ಸ್ವಚ್ಚ ಮಾಡುವುದು ಕಾಣಿಸಿತ್ತು. 

Tap to resize

Latest Videos

ಕಿತ್ತೋಗಿರೋ ಜೀನ್ಸ್ ತೊಟ್ಟು ಮೆಟ್ರೋದಲ್ಲಿ ಆಜ್‌ ಕಿ ರಾತ್ ಹಾಡಿಗೆ ಡಾನ್ಸ್: ಸಿಟ್ಟಿಗೆದ್ದ ಜನ

2023ರಲ್ಲಿ ಈಕೆ ತನ್ನನ್ನು ತಾನೇ ಮದುವೆಯಾಗುವ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಳು. ವರನಿಲ್ಲದೇ ಈಕೆ ತನ್ನನ್ನು ತಾನೇ ಮದುವೆಯಾಗಿದ್ದಳು ಅಲ್ಲದೇ ಈ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೇ ಧೈರ್ಯವಾಗಿ ಪೋಸ್ಟ್ ಮಾಡಿದ್ದಳು. ನನಗೆ ಯೋಗ್ಯನಾದ ವರ ಸಿಗಲಿಲ್ಲ ಹೀಗಾಗಿ ನನ್ನನ್ನು ನಾನೇ ಮದುವೆಯಾಗುತ್ತಿದ್ದೇನೆ ಎಂದು ಆಕೆ ಬರೆದುಕೊಂಡಿದ್ದಳು. 

ಆದರೆ ಇಷ್ಟೊಂದು ಧೈರ್ಯ ತೋರಿದ್ದ ಯುವತಿಗೆ ಹೀಗೆ ಹಠಾತ್ ಆಗಿ ಸಾವಿಗೆ ಶರಣಾಗಿರುವುದು ಆಕೆಯ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆಕೆಯ ಅನೇಕ ಅಭಿಮಾನಿಗಳು ಆಕೆಯ ಸಾವಿನ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ. ಇನ್ನು ಆಕೆಯ ಅಂತ್ಯಕ್ರಿಯೆಯೂ ಆಕೆಯ ಪೋಷಕರು ವಾಸವಾಗಿರುವ ಊರಿನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

ಹೈವೇಯಲ್ಲಿ ಸಾರಿಯುಟ್ಟ ನಾರಿಯ ಬಿಂದಾಸ್ ಕುಣಿತ: ಸೇತುವೆ ಬಿರುಕು ಬಿಡುತ್ತೆ ಎಂದ ನೆಟ್ಟಿಗ

 

click me!